BREAKING: ಶಿವಮೊಗ್ಗ ನಗರದಲ್ಲಿ ನಿಷೇಧಾಜ್ಞೆ ಜಾರಿ

ಶಿವಮೊಗ್ಗ ನಗರದಲ್ಲಿ (Shivamogga City)  ಮತ್ತೆ ನಿಷೇಧಾಜ್ಞೆ ಜಾರಿ ಆಗಿದೆ.
ಶಿವಮೊಗ್ಗ ನಗರದ ಅಮೀರ್​ ಅಹಮದ್​ ವೃತ್ತದಲ್ಲಿ ವಿನಾಯಕ್​ ದಾಮೋದರ್​ ಸಾವರ್ಕರ್ (Vinayak Damodar Savarkar)​ ಅವರ ಫ್ಲೆಕ್ಸ್​ ಇಡುವ ಬಗ್ಗೆ ಗಲಾಟೆ ಆಗಿದೆ.
ಆ ಫ್ಲೆಕ್ಸ್​ನ್ನು ತೆಗೆದು ಟಿಪ್ಪು ಸುಲ್ತಾನ್ (Tippu Sultan)​ ಪ್ಲೆಕ್ಸ್​​ನ್ನು ಇಡಲು ಇನ್ನೊಂದು ಗುಂಪು ಯತ್ನಿಸಿತ್ತು.
ಸಾವರ್ಕರ್​ ಫ್ಲೆಕ್ಸ್​ನ್ನು ಪೊಲೀಸರು ತೆರವುಗೊಳಿಸಿದರೆ, ಟಿಪ್ಪು ಸುಲ್ತಾನ್​ ಫ್ಲೆಕ್ಸ್​ನ್ನು ಇಡಲು ಪೊಲೀಸರು ಅನುಮತಿ ನೀಡಲಿಲ್ಲ.
ಈ ವೇಳೆ ಹಿಂದೂ ಸಂಘಟನೆಯವರು ಪ್ರತಿಭಟನೆಗೆ ಮುಂದಾದರೆ ಮತ್ತೊಂದು ಗುಂಪಿನವರೂ ಪ್ರತಿಭಟನೆಗೆ ಯತ್ನಿಸಿದರು.
ಈ ವೇಳೆ ಎರಡೂ ಕೋಮಿನವರನ್ನು ಪೊಲೀಸರು ತಡೆದರು.
ಮುನ್ನೆಚ್ಚರಿಕಾ ಕ್ರಮವಾಗಿ ಕೆಲವರನ್ನು ವಶಕ್ಕೆ ಪಡೆಯಲಾಗಿದೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್​ ಭೇಟಿ ನೀಡಿದ್ದಾರೆ.

LEAVE A REPLY

Please enter your comment!
Please enter your name here