ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ (Indian Independence Day) ಹಿನ್ನೆಲೆಯಲ್ಲಿ ನಟ, ಚಾಲೆಂಜಿಂಗ್ಸ್ಟಾರ್ ದರ್ಶನ್ (Challenging Star Darshan) ಅವರ ಕ್ರಾಂತಿ (Kranti Movie) ಚಿತ್ರದ ಹೊಸ ಪೋಸ್ಟರ್ ಬಿಡುಗಡೆ ಆಗಿದೆ.
ಈ ಹೊಸ ಪೋಸ್ಟರ್ನಲ್ಲಿ ದರ್ಶನ್ ಅವರು ಪುಸ್ತಕ ಓದುತ್ತಿದ್ದಾರೆ.
ಅಂದಹಾಗೆ ದರ್ಶನ್ ಅವರು ಓದುತ್ತಿರುವ ಪುಸ್ತಕದ ಹೆಸರು ಭಾರತದ ಶಿಕ್ಷಣದ ಉದಯ (Evoution of
Indian Education).
ಈ ಮೂಲಕ ಸಿನಿಮಾದ ಕಥಾ ಹಂದರದ ಸುಳಿವನ್ನು ನೀಡಿದೆ ಚಿತ್ರ ತಂಡ. ಚಿತ್ರದಲ್ಲಿ ಎನ್ಆರ್ಐ (NRI) ಆಗಿರುವ ದರ್ಶನ್ ಅವರು ಕನ್ನಡ ಶಾಲೆಗಳನ್ನು ಉಳಿಸುವ ಕುರಿತ ಕಥೆ ಇರಲಿದೆ.
ಹೊಸ ಪೋಸ್ಟರ್ನನ್ನು ಡಿ ಬಾಸ್ (D Boss) ಕೂಡಾ ಹಂಚಿಕೊಂಡಿದ್ದಾರೆ.
ಸ್ವಾತಂತ್ರ್ಯ ಅಮೃತ ಮಹೋತ್ಸವದ ಜೊತೆಗೆ ಇವತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಜನ್ಮದಿನ. ಈ ಹಿನ್ನೆಲೆಯಲ್ಲಿ ದರ್ಶನ್ ಅವರು ಸಂಗೊಳ್ಳಿ ರಾಯಣ್ಣ ಅವರನ್ನು ಸ್ಮರಿಸಿದ್ದಾರೆ.
ADVERTISEMENT
ADVERTISEMENT