ಮಂಗಳೂರು : ಅಪಘಾತದಲ್ಲಿ ವೈದ್ಯೆ ಡಾ.ಜೈಶಾ ಸಾವು

Doctor Jaisha

ಮಹಾರಾಷ್ಟ್ರದ ಪುಣೆ ಬಳಿಯಿರುವ ಪಿಂಪ್ರಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮಂಗಳೂರು ಮೂಲದ ವೈದ್ಯೆ ಡಾ.ಜೈಶಾ  (Doctor Jaisha) ದುರ್ಮರಣಕ್ಕೀಡಾದ ಘಟನೆ ನಡೆದಿದೆ.

ಮೃತ ವೈದ್ಯೆಯನ್ನು ಜೈಶಾ (27) ಎಂದು ಗುರುತಿಸಲಾಗಿದೆ. ಮಂಗಳೂರು ಮೂಲದ ಜಾನ್ ಥಾಮಸ್ ಮತ್ತು ಉಷಾ ಥಾಮಸ್ ದಂಪತಿಯ ಪುತ್ರಿ ಜೈಶಾ, ರಿಮಿನ್ ಆರ್. ಕುರಿಯಾಕೋಸ್ ನನ್ನು ವಿವಾಹವಾಗಿದ್ದರು.

ಜೈಶಾ ಮಂಗಳವಾರ ಮಧ್ಯಾಹ್ನದ ವಿರಾಮದ ಸಮಯದಲ್ಲಿ ಮನೆಗೆ ತೆರಳಿ, ಊಟ ಮುಗಿಸಿಕೊಂಡು ಕ್ಲಿನಿಕ್‌ಗೆ ಹಿಂದಿರುಗುತ್ತಿದ್ದರು. ಈ ವೇಳೆ ಟ್ರಕ್‌ವೊಂದು ಜೈಶಾ (Doctor Jaisha) ಅವರ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ, ಪರಿಣಾಮ ಸ್ಥಳದಲ್ಲೇ ಜೈಶಾ ಮೃತಪಟ್ಟಿದ್ದಾರೆ.

ಘಟನೆಯ ಬಳಿಕ ಮೃತದೇಹವನ್ನು ಪುಣೆಯಲ್ಲಿರುವ ಮನೆಗೆ ತೆಗೆದುಕೊಂಡು ಹೋಗಲಾಯಿತು. ಬಳಿಕ ಅಲ್ಲಿಂದ ಮಂಗಳೂರಿಗೆ ಸ್ಥಳಾಂತರ ಮಾಡಲಾಗಿದ್ದು ಬುಧವಾರ ಅಂತ್ಯಕ್ರಿಯೆ ನಡೆದಿದೆ. ಟ್ರಕ್ ಚಾಲಕ ಡಿಕ್ಕಿ ಹೊಡೆದು, ಸ್ಥಳದಿಂದ ಪರಾರಿಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಪತ್ತೆಗೆ ಶೋಧ ಆರಂಭಿಸಿದ್ದಾರೆ. ಇದನ್ನೂ ಓದಿ : ಮಂಗಳೂರು ಮೂಲದ ದಿವಿತಾ ರೈಗೆ ‘ಲಿವಾ ಮಿಸ್ ದಿವಾ ಯೂನಿವರ್ಸ್’ ಕಿರೀಟ

LEAVE A REPLY

Please enter your comment!
Please enter your name here