ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಚಾಲಕರ ಹೊರಗುತ್ತಿಗೆ – ಖಾಸಗಿ ಚಾಲಕರ ನೇಮಕಕ್ಕೆ ನಿರ್ಧಾರ

Kalyana Karnataka Road Transport Corporation
Kalyana Karnataka Road Transport Corporation
ಹೊರಗುತ್ತಿಗೆ ಆಧಾರದಲ್ಲಿ 400 ಮಂದಿ ಖಾಸಗಿ ಚಾಲಕರನ್ನು (Private Drivers) ನೇಮಿಸಿಕೊಳ್ಳಲು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ನಿರ್ಧರಿಸಿದೆ. ಈ ಸಂಬಂಧ ಟೆಂಡರ್​ ಕರೆದು ಟೆಂಡರ್​ ಮೂಲಕ ಭರ್ತಿ ಮಾಡಿಕೊಳ್ಳಲಾಗುತ್ತದೆ.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಸದ್ಯ 1,200 ಚಾಲಕರ ಕೊರತೆ ಇರುವ ಹಿನ್ನೆಲೆಯಲ್ಲಿ ಹೊರಗುತ್ತಿಗೆ (Out Sourcing) ಮೂಲಕ ಭರ್ತಿ ಮಾಡಿಕೊಳ್ಳಲು ನಿರ್ಧರಿಸಲಾಗಿದೆ.
ಬಳ್ಳಾರಿ ಡಿಪೋ – 100, ಹೊಸಪೇಟೆ – 100, ಸಿಂಧನೂರು- 30, ಮಾನ್ವಿ – 20, ಗುರುಮಟ್ಕಲ್​ – 30, ಯಾದಗಿರಿ – 20, ಗಂಗಾವತಿ – 30, ಚಿಂಚೋಳಿ – 30, ಸೇಡಂ- 30, ಚಿತ್ತಾಪುರ ಡಿಪೋದಲ್ಲಿ – 10 ಮಂದಿ ಖಾಸಗಿ ಚಾಲಕರನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲು ಸೆಪ್ಟೆಂಬರ್​​ 12 ಮತ್ತು 13ರಂದು ನಡೆದ ನಿಗಮದ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮತ್ತು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದಂತೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲೂ ಗುತ್ತಿಗೆ ಆಧಾರದಲ್ಲಿ ತಾತ್ಕಾಲಿಕವಾಗಿ ಚಾಲಕರ ಭರ್ತಿಗೆ ತೀರ್ಮಾನಿಸಲಾಗಿದೆ.

LEAVE A REPLY

Please enter your comment!
Please enter your name here