ವಿಧಾನಸಭಾ ಚುನಾವಣೆ ಘೋಷಣೆಗೆ ನಾಲ್ಕೇ ತಿಂಗಳು ಬಾಕಿ ಇರುವಂತೆ ಜೆಡಿಎಸ್ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೊಳಿಸಿದೆ.
ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್ ಡಿ ಕುಮಾರಸ್ವಾಮಿ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಪಟ್ಟಿ ಪ್ರಕಟಿಸಿದ್ದಾರೆ.
ಮೈಸೂರು ಜಿಲ್ಲೆಯ 11 ಕ್ಷೇತ್ರಗಳ ಪೈಕಿ 7 ಕ್ಷೇತ್ರಗಳಿಗೆ ಜೆಡಿಎಸ್ ಅಭ್ಯರ್ಥಿಗಳನ್ನು ಅಖೈರುಗೊಳಿಸಿದೆ.
ಪಿರಿಯಾಪಟ್ಟಣ – ಕೆ ಮಹಾದೇವ್
ಕೆ ಆರ್ ನಗರ – ಸಾರಾ ಮಹೇಶ್
ಹುಣಸೂರು – ಹರೀಶ್ ಗೌಡ – ಜಿ ಟಿ ದೇವೇಗೌಡ ಪುತ್ರ ಹರೀಶ್ಗೌಡಗೆ ಟಿಕೆಟ್
ಚಾಮುಂಡೇಶ್ವರಿ – ಜಿ ಟಿ ದೇವೇಗೌಡ
ಟಿ ನರಸೀಪುರ – ಅಶ್ವಿನ್ ಕುಮಾರ್
ವರುಣ – ಅಭಿಷೇಕ್
ಕೃಷ್ಣರಾಜ – ಮಲ್ಲೇಶ್
ಹನೂರು – ಮಂಜುನಾಥ್
ಆದರೆ ನಂಜನಗೂಡು, ನರಸಿಂಹರಾಜ, ಹೆಚ್ ಡಿ ಕೋಟೆ, ಚಾಮರಾಜ ಕ್ಷೇತ್ರಗಳಿಗೆ ಮೊದಲ ಪಟ್ಟಿಯಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಪ್ರಕಟಿಸಿಲ್ಲ.
ADVERTISEMENT
ADVERTISEMENT