ಮುಖ್ಯಮಂತ್ರಿಗೆ ಏನ್​ ತೊಂದ್ರೆ, ನಾನು ಅಧಿವೇಶನಕ್ಕೆ ಹೋಗಲ್ಲ – ಈಶ್ವರಪ್ಪ ಸಿಡಿಮಿಡಿ

KS Eshwarappa
KS Eshwarappa
ಸಚಿವ ಸಂಪುಟಕ್ಕೆ ನನ್ನನ್ನು ಸೇರಿಸಿಕೊಳ್ಳದೇ ಇರುವುದರಿಂದ ನನ್ನ ಅಭಿಮಾನಿಗಳಿಗೆ ಬೇಸರವಾಗಿದೆ. ಹೀಗಾಗಿ ಬೆಳಗಾವಿ ಅಧಿವೇಶನದಿಂದ ದೂರ ಉಳಿಯುತ್ತೇನೆ
ಮಾಜಿ ಸಚಿವ ಈಶ್ವರಪ್ಪ ಅವರು ಹೇಳಿದ್ದಾರೆ.
ಮೊನ್ನೆ ತನಕವೂ ನಾನು ಸಚಿವ ಸಂಪುಟದಲ್ಲಿ ಇದ್ದವನು. ನಾನು ಯಾಕೆ ರಾಜೀನಾಮೆ ಕೊಟ್ಟೆ, ಈ ರೀತಿ ಆಪಾದನೆ ನನ್ನ ಮೇಲೆ ಬಂತು. ಆಪಾದನೆ ಇರುವ ಹಿನ್ನೆಲೆಯಲ್ಲಿ ರಾಜೀನಾಮೆ ಕೊಡ್ಬೇಕು ಅಂತ ಮುಂಚೆನೇ ನಮ್ಮ ರಾಷ್ಟ್ರೀಯ ನಾಯಕರ ಬಳಿ ಪ್ರಸ್ತಾಪ ಮಾಡಿದೆ ನಾನು. ಪ್ರಾರಂಭಕ್ಕೆ ಅವರು ಬೇಡ ಅಂದ್ರು, ಆದ್ರೆ ನಾನು ಅವರಿಗೆ ಒಪ್ಪಿಸಿ ರಾಜೀನಾಮೆ ಕೊಟ್ಟೆ.
ಈ ಹಿಂದೆ ಕೆ ಜೆ ಜಾರ್ಜ್​​ಗೆ ಕ್ಲೀನ್​ಚಿಟ್​ ಸಿಕ್ಕ ತಕ್ಷಣವೇ ಕಾಂಗ್ರೆಸ್​ನವರು ಸಂಪುಟಕ್ಕೆ ಸೇರಿಸಿಕೊಂಡರು. ನಮ್ಮ ನಾಯಕ ಸಿಎಂ ಬೊಮ್ಮಾಯಿಗೆ ಯಾಕೆ ತೊಂದ್ರೆ..?
ಎಂದು ಬಾಗಲಕೋಟೆಯಲ್ಲಿ ಮಾಜಿ ಸಚಿವ ಕೆ ಎಸ್​ ಈಶ್ವರಪ್ಪ ಪ್ರಶ್ನಿಸಿದ್ದಾರೆ.
ನಾನು ಕ್ಲೀನ್​ಚಿಟ್​ ತಗೊಂಡು, ನಿರಪರಾಧಿ ಅಂತ ತೀರ್ಮಾನ ಆದರೂ ಕೂಡ ಈಶ್ವರಪ್ಪ ಅವರನ್ನು ಯಾಕೆ ಮತ್ತೆ ಸಂಪುಟಕ್ಕೆ ತಗೊಂಡಿಲ್ಲ ಎಂದು ಮುಖ್ಯಮಂತ್ರಿ ಉತ್ತರ ಕೊಡಲಿ. ಮುಖ್ಯಮಂತ್ರಿಗಳಿಗೆ ತಮ್ಮ ಸಂಪುಟದಲ್ಲಿ ಯಾರನ್ನು ಸೇರಿಸ್ಬೇಕು ಅನ್ನೋದು ಇರುತ್ತೆ. ಕೇಂದ್ರ ನಾಯಕರು ನನ್ನ ಪರ ಇದ್ದಾರೆ. ಬಹಿರಂಗವಾಗಿ ಯಾಕೆ ಹೇಳ್ತಿದ್ದೀನಿ ಎಂದರೆ ಇದು ಸೌಜನ್ಯದ ಪ್ರತಿಭಟನೆ
ಎಂದು ಮಾಧ್ಯಮಗಳ ಮೂಲಕ ಈಶ್ವರಪ್ಪ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಪ್ರಶ್ನಿಸಿದ್ದಾರೆ.

LEAVE A REPLY

Please enter your comment!
Please enter your name here