ಪಿಎಸ್​ಐ ಅಮಾನತು – ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಆದೇಶ

Siravara PSI Geethanjali Shinde suspended
Siravara PSI Geethanjali Shinde suspended

ಸಿರವಾರ ಪೊಲೀಸ್​ ಠಾಣೆ ಪಿಎಸ್​ಐ ಗೀತಾಂಜಲಿ ಶಿಂಧೆ ಅಮಾನತ್ತಾಗಿದ್ದಾರೆ. ಅಮಾನತುಗೊಳಿಸಿ ರಾಯಚೂರು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ನಿಖಿಲ್​ ಬಿ ಆದೇಶಿಸಿದ್ದಾರೆ.

ಆರೋಪಗಳು ಏನು..?:

ಜಮೀನು ವಿವಾದವೊಂದರಲ್ಲಿ ಮಧ್ಯಪ್ರವೇಶಿಸಿದ್ದ ಗೀತಾಂಜಲಿ ಶಿಂಧೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಆತ್ಮಹತ್ಯೆ ಪತ್ರದಲ್ಲಿ ಪಿಎಸ್​ಐ ಗೀತಾಂಜಲಿ ಹೆಸರು ಬರೆದಿಟ್ಟು ಯುವಕನೊಬ್ಬ ನಾಪತ್ತೆ ಆಗಿದ್ದ. ಜಮೀನು ವಿಚಾರದಲ್ಲಿ ಮೂರು ತಿಂಗಳಿಂದ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದ.

ಈ ಹಿನ್ನೆಲೆಯಲ್ಲಿ ಸಿರವಾರ ಪೊಲೀಸ್​ ಠಾಣೆಯಲ್ಲೇ ಪಿಎಸ್​​ಐ ಅವರ ವಿರುದ್ಧವೇ ಎಫ್​ಐಆರ್​ ದಾಖಲಾಗಿ ಆ ಯುವಕನನ್ನು ಪೊಲೀಸರು ಪತ್ತೆ ಹಚ್ಚಿದ್ದರು.

ಇದಲ್ಲದೇ ಬೈಕ್​ ಮತ್ತು ಕುರಿ ಕಳ್ಳತನ ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾದ ಬೈಕ್​ ಮತ್ತು ಕುರಿಗಳನ್ನೂ ಮಾಲೀಕರಿಗೆ ವಾಪಸ್​ ಕೊಟ್ಟಿಲ್ಲ ಎಂಬ ಆರೋಪವೂ ಪಿಎಸ್​ಐ ಗೀತಾಂಜಲಿ ಅವರ ಮೇಲಿತ್ತು.

ಕರ್ತವ್ಯ ಲೋಪದ ಆಧಾರದಲ್ಲಿ ಪಿಎಸ್​ಐ ಅವರನ್ನು ಅಮಾನತುಗೊಳಿಸಿ ಎಸ್​ಪಿ ಆದೇಶಿಸಿದ್ದಾರೆ.

 

LEAVE A REPLY

Please enter your comment!
Please enter your name here