ಬದಲಾಯ್ತು ಮಾಜಿ ಸಿಎಂ ಕುಮಾರಸ್ವಾಮಿ ವರಸೆ; ಯಾವುದೇ ಪಕ್ಷದ ಜೊತೆ ಮೈತ್ರಿಗೆ ಸೈ

 

ಮತ ಎಣಿಕೆಗೆ ಒಂದು ದಿನ ಇರುವಾಗ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಮಾತಿನ ವರಸೆ ಬದಲಾಗಿಹೋಗಿದೆ. ಮತದಾನಕ್ಕೆ ಮುನ್ನ ನಮಗೆ ಸ್ಪಷ್ಟ ಬಹುಮತ ಸಿಗಲಿದೆ. ನಾವು ಕಿಂಗ್ ಮೇಕರ್ ಆಗಲ್ಲ. ಕಿಂಗ್ ಆಗುತ್ತಿದ್ದೇವೆ ಎನ್ನುತ್ತಿದ್ದರು.

ಆದರೆ, ಚುನಾವಣೆ ಸರಳಿ ಅವರ ಲೆಕ್ಕಾಚಾರವನ್ನು ಸುಳ್ಳು ಮಾಡಿದಂತಿದೆ. ಜೊತೆಗೆ ಚುನಾವಣೋತ್ತರ ಸಮೀಕ್ಷೆಗಳು ಕೂಡ ಅವರ ಮತ ಲೆಕ್ಕವನ್ನು ಬುಡಮೇಲು ಮಾಡಿದಂತಿವೆ. ಹೀಗಾಗಿಯೇ ಕುಮಾರಸ್ವಾಮಿ ಅವರು ಮೈತ್ರಿಯ ರಾಗ ಹಾಡತೊಡಗಿದ್ದಾರೆ.

ನಮ್ಮ ಷರತ್ತುಗಳನ್ನು ಒಪ್ಪಿಕೊಳ್ಳುವ ಯಾವುದೇ ಪಕ್ಷಕ್ಕೆ ಬೆಂಬಲ ಕೊಡುವುದಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಕ್ಕೆ ನೇರ ಸಂದೇಶವನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನೀಡಿದ್ದಾರೆ.

ಜೆಡಿಎಸ್ ಪಕ್ಷ 50 ಸೀಟ್ ಪಡೆಯುವ ವಿಶ್ವಾಸ ಇದೆ. ನಮ್ಮ ಷರತ್ತುಗಳಿಗೆ ಒಪ್ಪುವ ಪಕ್ಷದ ಜೊತೆ ನಾವು ಮುಮದಡಿ ಇಡಲು ಸಿದ್ದರಿದ್ದೇವೆ ಎಂದು ಘೋಷಣೆ ಮಾಡಿದ್ದಾರೆ.

ಜೆಡಿಎಸ್​ ಷರತ್ತುಗಳು
– 2018ರ ಸಮ್ಮಿಶ್ರ ಸರ್ಕಾರ ರಚನೆಯಾದಾಗ ಮಾಡಿದಂತಹ ಸಮನ್ವಯ ಸಮಿತಿಗಳು ರಚನೆ ಮಾಡಬಾರದು
– ಜೆಡಿಎಸ್ ಭದ್ರಕೋಟೆ ಎನ್ನಲಾದ ಮಂಡ್ಯ, ಹಾಸನ, ರಾಮನಗರ ಜಿಲ್ಲೆಗಳ ರಾಜಕೀಯದಿಂದ ದೂರ ಇರಬೇಕು
– ಚರ್ಚೆ ಮಾಡದೇ ಯಾವುದೇ ವೈಚಾರಿಕ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು
– ಜೆಡಿಎಸ್​ ಪಕ್ಷದ ಜನತಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಲು ಒಪ್ಪಿಗೆ ಸೂಚಿಸಬೇಕು

ಹೀಗೆ ಜೆಡಿಎಸ್​ ಷರತ್ತುಗಳ ಪಟ್ಟಿ ಮುಂದುವರೆಯುತ್ತದೆ.

ಜೆಡಿಎಸ್​ ಉನ್ನತ ಮೂಲಗಳ ಪ್ರಕಾರ, ಮಾಜಿ ಪ್ರಧಾನಮಂತ್ರಿಗಳಾದ ಹೆಚ್ ಡಿ ದೇವೇಗೌಡರು ಎರಡು ರಾಷ್ಟ್ರೀಯ ಪಕ್ಷಗಳ ಪ್ರಮುಖರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹೀಗಾಗಿ, ಬಿಜೆಪಿ ಮತ್ತು ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಳ್ಳುವ ಅವಕಾಶಗಳನ್ನು ಮುಕ್ತವಾಗಿರಿಸಿಕೊಂಡಿದ್ದಾಋಎ.