ಅಸ್ತಿತ್ವವನ್ನೇ ಕಳೆದುಕೊಳ್ಳುವ ಅಂಚಿನಲ್ಲಿದ್ದ ಕಾಂಗ್ರೆಸ್ ಕರ್ನಾಟಕ ಗೆದ್ದಿದ್ದೇಗೆ? ಇಲ್ಲಿವೆ ಐದು ಕಾರಣ

ಸರಣಿ ಸೋಲುಗಳಿಂದ ಅಸ್ತಿತ್ವವನ್ನೇ ಕಳೆದುಕೊಳ್ಳುವ ಅಂಚಿನವರೆಗೂ ಹೋಗಿದ್ದ ಕಾಂಗ್ರೆಸ್ ಪಕ್ಷ ಈಗ ಬಲ ವೃದ್ಧಿಸಿಕೊಂಡಿದೆ.

ವರ್ಷದ ಆರಂಭದಲ್ಲಿ ಹಿಮಾಚಲಪ್ರದೇಶ ಕೊಟ್ಟ ವಿಜಯೋತ್ಸಾಹ ಕಾಂಗ್ರೆಸ್ ಪಕ್ಷದ ನಾಯಕರಿಗೆ ಬೂಸ್ಟ್ ನೀಡಿತ್ತು.

ಅದೇ ಜೋರಿನಲ್ಲಿ ಈಗ ದಕ್ಷಿಣ ಭಾರತದ ರಾಜ್ಯವಾದ ಕರ್ನಾಟಕವನ್ನು ಗೆದ್ದು ಬೀಗಿದೆ. ಎಕ್ಸಿಟ್ ಪೋಲ್ ಅಂದಾಜುಗಳನ್ನು ಮೀರಿ ದಿಗ್ವಿಜಯ ಸಾಧಿಸಿದೆ.

ಕಾಂಗ್ರೆಸ್ ಗೆಲುವಿಗೆ ಪಂಚ ಕಾರಣ
ಅನುಕಂಪದ ಅಲೆ
ಆಪರೇಷನ್ ಕಮಲದ ಪರಿಣಾಮ ಸಮ್ಮಿಶ್ರ ಸರ್ಕಾರ ಪತನ ನಂತರ ಕಾಂಗ್ರೆಸ್ ಪರ ಜನ ಸಹಾನೂಭೂತಿ ವ್ಯಕ್ತವಾಗಿತ್ತು.

40 ಪರ್ಸೆಂಟ್ ಕಮೀಷನ್ ನಿನಾದ
ಬೊಮ್ಮಾಯಿ ಸರ್ಕಾರದ ವಿರುದ್ಧ ದೊಡ್ಡ ಮಟ್ಟದಲ್ಲಿ ಭ್ರಷ್ಟಾಚಾರದ ಆರೋಪ ಕೇಳಿಬಂದಿತ್ತು.. ಬಿಜೆಪಿ ಸರ್ಕಾರ 40 ಪರ್ಸೆಂಟ್ ಕಮೀಷನ್ ಸರ್ಕಾರ ಎಂದು ಕಾಂಗ್ರೆಸ್ ಆರೋಪಿಸಿ ಅಭಿಯಾನ ಕೈಗೊಂಡಿತ್ತು. ಸಿಎಂ ಬೊಮ್ಮಾಯಿ ವಿರುದ್ಧ ಪೇಸಿಎಂ ಅಸ್ತ್ರ ಪ್ರಯೋಗಿಸಿತ್ತು. ಇದು ದೊಡ್ಡಮಟ್ಟದಲ್ಲಿ ವರ್ಕೌಟ್ ಆಯ್ತು.

ಫಲಿಸಿದ ಹಿಮಾಚಲ ವ್ಯೂಹ
ಹಿಮಾಚಲ ಪ್ರದೇಶ ಗೆಲ್ಲಲು ಬಳಸಿದ ತಂತ್ರವನ್ನೇ ಕರ್ನಾಟಕದಲ್ಲೂ ಕಾಂಗ್ರೆಸ್ ಬಳಸಿಕೊಂಡಿತು. ಹಿಮಾಚಲ ಮಾದರಿಯಲ್ಲಿಯೇ ಐದು ಗ್ಯಾರಂಟಿ ಭರವಸೆಗಳನ್ನು ಪ್ರಕಟಿಸಿತು. ಇದು ಜನರ ಬಳಿಗೆ ದೊಡ್ಡ ಮಟ್ಟದಲ್ಲಿ ರೀಚ್ ಆಯ್ತು.

ಜೋಡೋ ಯಾತ್ರೆ ತುಂಬಿದ ಜೋಶ್
ದೇಶವನ್ನು ಒಂದು ಮಾಡುವ ಜೊತೆಗೆ ದೇಶದಲ್ಲಿ ಬಿಜೆಪಿಯೇತರ ಶಕ್ತಿ ಬಲವಾಗಿದೆ ಎಂಬುದನ್ನು ಸಾರಿ ಹೇಳಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೈಗೊಂಡ ಭಾರತ್ ಜೋಡೋ ಯಾತ್ರೆ ಕರ್ನಾಟಕದಲ್ಲಿ ಪಕ್ಷಕ್ಕೆ ಹೊಸ ಉತ್ಸಾಹ ತುಂಬಿತು. ಮಳೆಯಲ್ಲಿ ರಾಹುಲ್ ಗಾಂಧಿ ಮಾಡಿದ ಭಾಷಣ ದೇಶ-ವಿದೇಶಗಳಲ್ಲಿ ಸದ್ದು ಮಾಡಿತು.

ಸಿದ್ದು-ಡಿಕೆ ಒಗ್ಗಟ್ಟಿನ ಮಂತ್ರ
ಕಾಂಗ್ರೆಸ್‌ನಲ್ಲಿ ಎಲ್ಲರೂ ಸಿಎಂ ಅಭ್ಯರ್ಥಿಗಳೇ.. ಹೀಗೆಂದು ಹಿಂದೆ ಬಿಜೆಪಿ ಲೇವಡಿ ಮಾಡಿತ್ತು. ಚುನಾವಣೆ ಪ್ರಚಾರದ ವೇಳೆಯೂ ಇದನ್ನು ಅಸ್ತ್ರ ಮಾಡಿಕೊಂಡಿತ್ತು. ಆದರೆ, ಈ ಬಗ್ಗೆ ಕಾಂಗ್ರೆಸ್ ತಲೆಕೆಡಿಸಿಕೊಳ್ಳಲಿಲ್ಲ. ಪಕ್ಷದಲ್ಲಿ ಆಂತರಿಕ ಭಿನ್ನಾಭಿಪ್ರಾಯಗಳು ಬಂದರೂ, ಅದು ಹೊರಗೆ ಬಾರದಂತೆ ನಿಭಾಯಿಸಿತು. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಒಗ್ಗಟ್ಟಿನ ಮಂತ್ರ ಪಠಿಸಿದರು. ಇದು ಕಾಂಗ್ರೆಸ್ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿತು.