ಓದುಗರಿಗೆ ವಿಶೇಷ ಸೂಚನೆ : ಬೇಕಾದ ಪುಸ್ತಕ ಓದಲು ಸರ್ಕಾರ ನೀಡಿದೆ ಉಚಿತ ಆಫರ್

Digital Library Membership

ಸಾರ್ವಜನಿಕ ಗ್ರಂಥಾಲಯ ಓದುಗರಿಗೆ ಸಾರ್ವಜನಿಕ ಗ್ರಂಥಾಲಯ ವಿಶೇಷ ಸೂಚನೆ ನೀಡಿದ್ದು, ಉಚಿತವಾಗಿ ಆನ್​ಲೈನ್​ನಲ್ಲಿ ಪುಸ್ತಕಗಳ ಓದಲು ಅವಕಾಶ ಮಾಡಿಕೊಟ್ಟಿದೆ.

ರಾಜ್ಯ ಸಾರ್ವಜನಿಕ ಗ್ರಂಥಾಲಯ ಇಲಾಖೆ ‘ಡಿಜಿಟಲ್ ಗ್ರಂಥಾಲಯದ ಸದಸ್ಯತ್ವ’ (Digital Library Membership) ಹೊಂದುವ ಕುರಿತು ಪ್ರಕಟಣೆ ಹೊರಡಿಸಿದೆ.

ಡಿಜಿಟಲ್ ಗ್ರಂಥಾಲಯದ ಸದಸ್ಯತ್ವ ಹೊಂದುವ ಸಾರ್ವಜನಿಕರು ತಾವಿರುವಲ್ಲಿಯೇ ಮೊಬೈಲ್ ಹಾಗೂ ಕಂಪ್ಯೂಟರ್​​ನಲ್ಲಿ ಉಚಿತವಾಗಿ ಗ್ರಂಥಗಳ ಅಧ್ಯಯನ ಮಾಡಬಹುದಾಗಿದೆ.

Digital Library Membership

ಡಿಜಿಟಲ್ ಗ್ರಂಥಾಲಯದಲ್ಲಿ ಎಲ್ಲಾ ರೀತಿಯ ಪುಸ್ತಕಗಳು ಲಭ್ಯವಿರುವಂತೆ ರಾಜ್ಯ ಗ್ರಂಥಾಲಯ ಇಲಾಖೆ ನೋಡಿಕೊಂಡಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಪುಸ್ತಕಗಳು, ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದ ಪುಸ್ತಕಗಳು, ಜರ್ನಲ್ಸ್​​ಗಳು, ಅಸೈನ್​ಮೆಂಟ್​​ಗಳ ವಿಡಿಯೋ, ಕಥೆ, ಕಾದಂಬರಿ, ಕವನ ಸಂಕಲನ, ಗಜಲ್, ಜೀವನ ಚರಿತ್ರೆಗೆ ಸಂಬಂಧಿಸಿದ ವಿಭಾಗಗಳ ಜೊತೆಗೆ ಇನ್ನೂ ಹಲವಾರು ವಿಬಾಗಗಳ ಪುಸ್ತಕಗಳನ್ನು ಆನ್​ಲೈನ್​ನಲ್ಲಿಯೇ ಓದಬಹುದಾಗಿದೆ.

ಮೇಲಿನ ವಿಭಾಗಗಳ ಪುಸ್ತಕಗಳನ್ನು ಉಚಿತವಾಗಿ ಓದಲು ಡಿಜಿಟಲ್ ಗ್ರಂಥಾಲಯದ ಸದಸ್ಯತ್ವ (Digital Library Membership) ಹೊಂದಬೇಕಾಗಿದೆ. ಈ ಸದಸ್ಯತ್ವವನ್ನು e-sarvajanika granthalay app ಮತ್ತು WWW.digitalpubliclibrary.org ನಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಅನಂತರ ನೇರವಾಗಿ ಆನ್​ಲೈನಲ್ಲಿ ಅಥವಾ ಮೊಬೈಲ್​ ಆ್ಯಪ್​ನಲ್ಲಿಯೇ ಪುಸ್ತಕಗಳನ್ನು ಓದಬಹುದಾಗಿದೆ.

ಇದನ್ನೂ ಓದಿ : CM Bommai: ಸಿಎಂ ಬೊಮ್ಮಾಯಿಗೆ ಪುಸ್ತಕದಲ್ಲೇ ತುಲಾಭಾರ..!