Lt. Gen. Anil Chauhan : ಸೇನಾ ಪಡೆಗಳ ಮುಖ್ಯಸ್ಥರಾಗಿ ಲೆ.ಜ ಅನಿಲ್ ಚೌವ್ಹಾಣ್ ನೇಮಕ

CDS Anil Chauhan

ಭಾರತದ ರಕ್ಷಣಾ ಸಿಬ್ಬಂದಿಗಳ ಮುಖ್ಯಸ್ಥರನ್ನಾಗಿ (ಸಿಡಿಎಸ್) ನಿವೃತ್ತ ಲೆ.ಜ ಅನಿಲ್ ಚೌವ್ಹಾಣ್​​ರನ್ನು (CDS Anil Chauhan) ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

2021ರಲ್ಲಿ ಭಾರತೀಯ ಸೇನೆಯಿಂದ ನಿವೃತ್ತರಾಗಿದ್ದ ಲೆ.ಜ ಅನಿಲ್ ಚೌವ್ಹಾಣ್​​ ಅವರನ್ನು ಮಿಲಿಟರಿ ವ್ಯವಹಾರಗಳ ಇಲಾಖೆ ದೇಶದ ಅತ್ಯುನ್ನತ ಸೇನಾಧಿಕಾರಿಯ ಹುದ್ದೆಗೆ ನೇಮಕ ಮಾಡಿದೆ.

ಜನವರಿ 1, 2020 ರಲ್ಲಿ ಈ ಹುದ್ದೆಯನ್ನು ಕೇಂದ್ರ ಸರ್ಕಾರ ಸೃಷ್ಠಿಸಿತ್ತು. ಪ್ರಥಮ ಸಿಡಿಎಸ್​ ಆಗಿ ಜನರಲ್ ಬಿಪಿನ್ ರಾವತ್ ನೇಮಕರಾಗಿದ್ದರು. ಕಳೆದ ವರ್ಷದ ಡಿಸೆಂಬರ್ 8ರಂದು ತಮಿಳುನಾಡಿನಲ್ಲಿ ನಡೆದ ವಿಮಾನ ಅಪಘಾತದಲ್ಲಿ ಅವರು ಸಾವನ್ನಪ್ಪಿದ್ದರು.

ಅನಂತರ ಈ ಹುದ್ದೆ ಖಾಲಿ ಉಳಿದಿತ್ತು. ಇದೀಗ, ಈ ಹುದ್ದೆಗೆ ನಿವೃತ್ತ ಲೆ.ಜ ಅನಿಲ್ (CDS Anil Chauhan) ಆಯ್ಕೆಯಾಗಿದ್ದಾರೆ. ಇವರ ಅಧಿಕಾರಾವಧಿ 5 ವರ್ಷಗಳ ಕಾಲ ಇರಲಿದೆ.

ಇದನ್ನೂ ಓದಿ : ಸೇನಾ ಹೆಲಿಕಾಪ್ಟರ್ ಅಪಘಾತ: ಸೇನಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಇನ್ನಿಲ್ಲ