ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆ (ಡಿಎ) ಯಲ್ಲಿ ಶೇ 4 ರಷ್ಟು ಹೆಚ್ಚಳ ಮಾಡಲು ಸಂಪುಟ ಅನುಮೋದನೆ ನೀಡಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಈ ಘೋಷಣೆಯು ಸುಮಾರು 47.68 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 68.62 ಲಕ್ಷ ಪಿಂಚಣಿದಾರರಿಗೆ ಪ್ರಯೋಜನವನ್ನು ನೀಡುತ್ತದೆ ಮತ್ತು ಇದು ನಾಗರಿಕ ನೌಕರರು ಮತ್ತು ರಕ್ಷಣಾ ಸೇವೆಗಳಲ್ಲಿ ಉದ್ಯೋಗಿಗಳಿಗೂ ಅನ್ವಯಿಸುತ್ತದೆ. ಇತ್ತೀಚಿನ ತುಟ್ಟಿಭತ್ಯೆ ಹೆಚ್ಚಳದ ಪರಿಣಾಮಕಾರಿ ದಿನಾಂಕ ಜುಲೈ 1 ಆಗಿರುವುದರಿಂದ, ಸಿಬ್ಬಂದಿಗೆ ಅವರ ಇತ್ತೀಚಿನ ಸಂಬಳದೊಂದಿಗೆ ಬಾಕಿಯನ್ನು ಪಾವತಿಸಲಾಗುತ್ತದೆ.
ಕೇಂದ್ರ ಸರ್ಕಾರವು ಪ್ರತಿ ವರ್ಷ ಜನವರಿ 1 ಮತ್ತು ಜುಲೈ 1 ರಂದು ತುಟ್ಟಿಭತ್ಯೆಯನ್ನು ಪರಿಷ್ಕರಿಸುತ್ತದೆ, ಆದರೆ ಈ ನಿರ್ಧಾರವನ್ನು ಸಾಮಾನ್ಯವಾಗಿ ಮಾರ್ಚ್ ಮತ್ತು ಸೆಪ್ಟೆಂಬರ್‌ನಲ್ಲಿ ಪ್ರಕಟಿಸಲಾಗುತ್ತದೆ. ಇದನ್ನೂ ಓದಿ : ಪುನೀತ್ ರಾಜ್ಕುಮಾರ್ ಜನ್ಮದಿನ ಸ್ಪೂರ್ತಿ ದಿನವಾಗಿ ಆಚರಣೆ : ರಾಜ್ಯ ಸರ್ಕಾರ
ಈ ಹಿಂದೆ, ಮಾರ್ಚ್‌ನಲ್ಲಿ, ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ (ಡಿಎ) ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆ (ಡಿಆರ್) ಮೂಲ ವೇತನದ ಶೇ.3ರಷ್ಟು ಹೆಚ್ಚಿಸುವ ಪ್ರಸ್ತಾವನೆಗೆ ಜನವರಿ 1, 2022ರಂದು ಕ್ಯಾಬಿನೆಟ್ ಅನುಮೋದನೆ ನೀಡಿತ್ತು. ಆಗ ಸರ್ಕಾರವು ನೌಕರರಿಗೆ ಮೂರು ತಿಂಗಳ ಬಾಕಿ ವೇತನ ನೀಡಿತ್ತು.
7ನೇ ವೇತನ ಆಯೋಗದ ಆಧಾರದ ಮೇಲೆ ವೇತನ ಪಡೆಯುವ ಎಲ್ಲರಿಗೂ 18,000 ರೂ. ಮೂಲ ವೇತನದಲ್ಲಿ 720 ರೂ. ತುಟ್ಟಿಭತ್ಯೆ ಹೆಚ್ಚಳ ಮತ್ತು ಮೂಲ ವೇತನ 25,000 ಆಗಿದ್ದರೆ ಈ ಹೆಚ್ಚಳವು ತಿಂಗಳಿಗೆ 1,000 ರೂ. ಆಗಿರುತ್ತದೆ. ಅದೇ ರೀತಿ 50,000 ರೂ. ಮೂಲ ವೇತನ ಪಡೆಯುತ್ತಿದ್ದವರಿಗೆ ಈಗ ತಿಂಗಳಿಗೆ 2,000 ರೂ. ಹಾಗೂ 1,00,000 ರೂ. ಮೂಲ ವೇತನ ಹೊಂದಿರುವವರಿಗೆ ಶೇ 4ರಷ್ಟು ತುಟ್ಟಿಭತ್ಯೆ ಹೆಚ್ಚಳದ ನಂತರ ಒಟ್ಟು ವೇತನದಲ್ಲಿ 4,000 ರೂ. ಭತ್ಯೆ ಲಾಭ ಸಿಗಲಿದೆ.
ಇದನ್ನೂ ಓದಿ : PM NarendraModi Birthday : ರಾಜ್ಯ ಸರ್ಕಾರದಿಂದ ಸೇವಾ ಪಾಕ್ಷಿಕ ಕಾರ್ಯಕ್ರಮಗಳು