ತಮಿಳು ನಟ ವಿಕಾಸ್ ಮನೆ ಮೇಲೆ ಕಲ್ಲು ತೂರಾಟ : ಪ್ರಕರಣ ದಾಖಲು

Actor Vishal

ದಕ್ಷಿಣ ಭಾರತದ ಖ್ಯಾತ ನಟ ಹಾಗೂ ನಿರ್ಮಾಪಕ ವಿಶಾಲ್ (Actor Vishal) ಅವರ ಮನೆ ಮೇಲೆ ಅಪರಿಚಿತ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ನಟ ವಿಶಾಲ್ ಪರವಾಗಿ ಅವರ ಮ್ಯಾನೇಜರ್ ಹರಿಕೃಷ್ಣ ಅಣ್ಣಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವಿಶಾಲ್ ತನ್ನ ಕುಟುಂಬದೊಂದಿಗೆ ಚೆನ್ನೈನ ಅಣ್ಣಾ ನಗರದಲ್ಲಿ ವಾಸಿಸುತ್ತಿದ್ದಾರೆ. ಸೋಮವಾರ ರಾತ್ರಿ ಕೆಂಪು ಕಾರಿನಲ್ಲಿ ಬಂದ ಕೆಲ ದುಷ್ಕರ್ಮಿಗಳು ವಿಶಾಲ್ ಅವರ ಮನೆಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಬಳಿಕ ಅಲ್ಲಿಂದ ಓಡಿ ಹೋದರು. ಈ ಘಟನೆಯಲ್ಲಿ ವಿಶಾಲ್ ಅವರ ಮನೆಯ ಗಾಜುಗಳು ಒಡೆದು ಚೂರಾಗಿವೆ.

ಇದಕ್ಕೆ ಸಂಬಂಧಿಸಿದ ದೃಶ್ಯಗಳು ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿವೆ.  ದೂರನ್ನು ಸ್ವೀಕರಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ನಟ ವಿಶಾಲ್ ಶೂಟಿಂಗ್ ಗಾಗಿ ಹೊರಗೆ ಹೋದಾಗ ಈ ದಾಳಿ ನಡೆದಿದೆ ಎನ್ನಲಾಗಿದೆ. ದಕ್ಷಿಣ ಚಿತ್ರರಂಗದ ವಿಶೇಷವಾಗಿ ತಮಿಳು ಚಿತ್ರ ರಂಗದ ಪ್ರಮುಖ ನಟ, ತಮಿಳು ಚಲನಚಿತ್ರೋದ್ಯಮ ಸಂಘದ ಪ್ರಧಾನ ಕಾರ್ಯದರ್ಶಿ ವಿಶಾಲ್ ಮನೆ ಮೇಲೆ ನಡೆದಿರುವ ದಾಳಿ ಚರ್ಚೆಗೆ ಗ್ರಾಸವಾಗಿದೆ. ವಿಶಾಲ್ (Actor Vishal) ಮನೆ ಮೇಲೆ ದಾಳಿ ಮಾಡಿದವರು ಯಾರು? ಇದರ ಹಿಂದೆ ಯಾರ ಕೈವಾಡವಿದೆ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : Actor Vishal : ಚಿತ್ರೀಕರಣದ ವೇಳೆ ನಟ ವಿಶಾಲ್​ಗೆ ಗಾಯ