PM NarendraModi Birthday : ರಾಜ್ಯ ಸರ್ಕಾರದಿಂದ ಸೇವಾ ಪಾಕ್ಷಿಕ ಕಾರ್ಯಕ್ರಮಗಳು

Narendra Modi Medical College

ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ (PM NarendraModi Birthday) ಪ್ರಯುಕ್ತ ರಾಜ್ಯ ಸರ್ಕಾರ ‘ಸೇವಾ ಪಾಕ್ಷಿಕ’ ಹೆಸರಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಿದೆ.

ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬ ಇದೇ ಸೆಪ್ಟಂಬರ್ 17 ಕ್ಕೆ ಇದೆ. ಈ ಹುಟ್ಟುಹಬ್ಬದ ಮೂಲಕ ನರೇಂದ್ರ ಮೋದಿಯವರು 72 ನೇ ವರ್ಷಕ್ಕೆ ಕಾಲಿಡಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ (PM NarendraModi Birthday) ಪ್ರಯುಕ್ತ ಕೇಂದ್ರ ಸರ್ಕಾರ ಹಾಗೂ ಹಲವು ರಾಜ್ಯ ಸರ್ಕಾರಗಳು ಸೇವಾ ಪಾಕ್ಷಿಕ ಎಂಬ ಹೆಸರಿನಲ್ಲಿ ಸೆಪ್ಟಂಬರ್ 17 ರಿಂದ ಅಕ್ಟೋಬರ್ 2 ರ ವರೆಗೆ ಹಲವು ಕಾರ್ಯಕ್ರಮಗಳನ್ನು ಮಾಡಲು ನಿರ್ಧರಿಸಿವೆ.  ಇದನ್ನೂ ಓದಿ : ಪ್ರಧಾನಿ ಮೋದಿಗೆ ಯಡಿಯೂರಪ್ಪ ಕೃತಜ್ಞತೆ

ಸೇವಾ ಪಾಕ್ಷಿಕದಲ್ಲಿನ ಕಾರ್ಯಕ್ರಮಗಳು : ಪ್ರತಿ ಜಿಲ್ಲೆಗಳಲ್ಲಿ ರಕ್ತದಾನ ಶಿಬಿರ, ಪ್ರತಿ ಜಿಲ್ಲೆಗಳಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ, ಪ್ರತಿ ಜಿಲ್ಲೆಗಳಲ್ಲಿ ದಿವ್ಯಾಂಗರಿಗೆ ಕೃತಕ ಅಂಗ ಅಥವಾ ಉಪಕರಣಗಳ ವಿತರಣೆ, ಪ್ರತಿ ಜಿಲ್ಲೆಗಳಲ್ಲಿ ಕೋವಿಡ್ ಲಸಿಕಾ ಕೇಂದ್ರಗಳಲ್ಲಿ ಸೇವಾ ಕಾರ್ಯ, ಪ್ರತಿ ಜಿಲ್ಲೆಗಳ ಬೂತ್​ಗಳಲ್ಲಿ ವನಮಹೋತ್ಸವ ಕಾರ್ಯ, ಪ್ರತಿ ಜಿಲ್ಲೆಗಳ ಮಂಡಲಗಳಲ್ಲಿ ಎರಡು ದಿನ ಸ್ವಚ್ಚತಾ ಕಾರ್ಯ, ಪ್ರತಿ ಜಿಲ್ಲೆಗಳಲ್ಲಿ ಜಲವೇ ಜೀವನ ಜಾಗೃತಿ ಅಭಿಯಾನ, ವೋಕಲ್ ಫಾರ್ ಲೋಕಲ್​ಗೆ ಉತ್ತೇಜನ ನೀಡಲು ಪ್ರತಿ ಜಿಲ್ಲೆಗಳಲ್ಲಿ ಜನಜಾಗೃತಿ ಅಭಿಯಾನ, 2025ರ ವೇಳೆಗೆ ಟಿಬಿ ಮುಕ್ತ ಭಾರತದ ಗುರಿಯೊಂದಿಗೆ, ಒಂದು ವರ್ಷಗಳವರೆಗೆ ರೋಗಿಗಳ ಆಹಾರ, ಪೋಷಣೆ ಮತ್ತು ಜೀವನೋಪಾಯಕ್ಕೆ ಸಂಬಂಧಿಸಿದ ಸೇವಾ ಕಾರ್ಯ, ಪ್ರತಿ ಜಿಲ್ಲೆಗಳಲ್ಲಿ ಭಾರತದಲ್ಲಿ ವಿವಿಧತೆಯಲ್ಲಿ ಏಕತೆಯ ಉತ್ಸವ ಆಯೋಜಿಸಲಾಗುವುದು ಮತ್ತು ಏಕ್ ಬಾರತ್ ಶ್ರೇಷ್ಠ ಭಾರತ್ ಸಂದೇಶವನ್ನುಸಮಾಜಕ್ಕೆ ನೀಡುವುದು. ಈ ಕಾರ್ಯಕ್ರಮಗಳನ್ನು ನಡೆಸಲು ರಾಜ್ಯ ಬಿಜೆಪಿ ಸರ್ಕಾರ ನಿರ್ಧರಿಸಿದೆ.

ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ 2.22 ಕೋ. ಕೊರೋನಾ ಲಸಿಕೆಗಳನ್ನು ಒಂದೇ ದಿನ ನೀಡಲಾಗಿತ್ತು. ಇದು ಒಂದೇ ದಿನದಲ್ಲಿ ಅತಿ ಹೆಚ್ಚು ಲಸಿಕೆ ನೀಡಿದ ದಾಖಲೆಗೆ ಸೇರಿದೆ. ಇದನ್ನೂ ಓದಿ : ಜಾಗತಿಕ ನಾಯಕರ ಪಟ್ಟಿ ಬಿಡುಗಡೆ : ಪ್ರಧಾನಿ ನರೇಂದ್ರ ಮೋದಿಗೆ ಅಗ್ರಸ್ಥಾನ

LEAVE A REPLY

Please enter your comment!
Please enter your name here