ಹಿಂದೂ ದೇವರುಗಳ ಮೂರ್ತಿಗೆ ಹಾನಿ – ನಾಲ್ವರ ಬಂಧನ

ಉತ್ತರ ಪ್ರದೇಶ ಬುಲಂದ್​ಶಹರ್​ ಜಿಲ್ಲೆಯ ಹಿಂದೂ ದೇಗುಲದಲ್ಲಿ ಮೂರ್ತಿಗಳನ್ನು ಹಾಳುಗೆಡವಿದ ಆರೋಪದಲ್ಲಿ ನಾಲ್ವರನ್ನು ಬಂಧಿಸಲಾಗಿದೆ.
ಪೊಲೀಸರು ಬರಾಲ್​ ಗ್ರಾಮದ ಹರೀಶ್​ ಶರ್ಮಾ, ಶಿವಂ, ಕೇಶವ ಮತ್ತು ಅಜಯ್​ ಎಂಬ ನಾಲ್ವರು ದುಷ್ಕರ್ಮಿಗಳನ್ನು ಬಂಧಿಸಿದ್ದಾರೆ.
ಬಂಧಿತರು ದೇವಸ್ಥಾನದ ಆವರಣದಲ್ಲಿ ಮದ್ಯ ಸೇವನೆ ಮಾಡುತ್ತಿದ್ದರು. ಮದ್ಯದ ಅಮಲಿನಲ್ಲಿ ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
4 ದೇವಸ್ಥಾನಗಳಲ್ಲಿ ಹನುಮಂತ, ಶಿವ ಸೇರಿದಂತೆ 12 ವಿವಿಧ ದೇವರುಗಳ ಮೂರ್ತಿಗಳನ್ನು ಕಿಡಿಕೇಡಿಗಳು ಹಾಳುಗೆಡವಿದ್ದರು.
ಪ್ರಕರಣದ ತನಿಖೆಗಾಗಿ ಪೊಲೀಸರು ಐದು ತಂಡಗಳನ್ನು ರಚಿಸಿದ್ದರು.
ಮುಖ್ಯ ಆರೋಪಿ ಹರೀಶ್​ ಇದೇ ಗ್ರಾಮದವನು.