ಹಾವು ಕಚ್ಚಿ ಅರಣ್ಯಾಧಿಕಾರಿ ಸಾವು

ಹಾವು ಕಚ್ಚಿ ಅರಣ್ಯಾಧಿಕಾರಿಯೊಬ್ಬರು ಮೃತಪಟ್ಟಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ವಲಯದಲ್ಲಿ  ಘಟನೆ ನಡೆದಿದೆ.
ವಲಯ ಅರಣ್ಯಾಧಿಕಾರಿ ಪ್ರಕಾಶ್​ ಟಿ ಆರ್​ ಮೃತಪಟ್ಟ ಅರಣ್ಯಾಧಿಕಾರಿ.
ಇವರು ತಮ್ಮ ವಲಯದಲ್ಲಿ ಅರಣ್ಯ ಇಲಾಖೆಯಿಂದ ನಿರ್ಮಿಸಲಾಗಿರುವ ನರ್ಸರಿಯ ಪರಿಶೀಲನೆ ಮಾಡುವ ವೇಳೆ ಹಾವು ಕಚ್ಚಿದೆ.
ಅರಣ್ಯಾಧಿಕಾರಿ ಮರಣಕ್ಕೆ ಕರ್ನಾಟಕ ಅರಣ್ಯ ಇಲಾಖೆ ಕಂಬನಿ ಮಿಡಿದಿದೆ.