ಶಿವಲಿಂಗೇಗೌಡ ಶಾಸಕರಾಗಿ ಸಿಕ್ಕಿರುವುದು ಈ ಕ್ಷೇತ್ರದ ಪುಣ್ಯ – ಹಾಡಿಹೊಗಳಿದ BJP ಸಚಿವ

Shivalingegowda JDS MLA
Shivalingegowda JDS MLA
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ (MLC Ravikumar)​ ಅವರಿಂದ ರಾಗಿಕಳ್ಳ ಎಂಬ ಆರೋಪ ಹೊರಿಸಿಕೊಂಡಿರುವ ಅರಸೀಕೆರೆ (Arasikere) ಜೆಡಿಎಸ್​ ಶಾಸಕ ಶಿವಲಿಂಗೇಗೌಡ (JDS MLA Shivalingegowda) ಅವರನ್ನು ಬಿಜೆಪಿ ಸರ್ಕಾರದ ಸಚಿವರೇ ಹಾಡಿಹೊಗಳಿದ್ದಾರೆ. ಈ ಮೂಲಕ ಅರಸೀಕೆರೆ ರಾಜಕೀಯ ಹೊಸ ಮಗ್ಗುಲಿಗೆ ತಿರುಗಿದೆ.
ಅರಸೀಕೆರೆಯಲ್ಲಿ ಎಪಿಎಂಸಿ (APMC) ಪ್ರಾಂಗಣದ ಉದ್ಘಾಟನೆ ವೇಳೆ ಮಾತಾಡಿದ ಸಹಕಾರ ಸಚಿವ ಎಸ್​ ಟಿ ಸೋಮಶೇಖರ್ (Minister S T Somashekhar)​ ಅವರು,
ನಾಳೆ ಮೈಸೂರು (Mysuru) ಮಹಾನಗರ ಪಾಲಿಕೆ ಚುನಾವಣೆ (Mayor Election) ಇದೆ. ಹಾಗಾಗಿ ಅಲ್ಲಿ ಇರುವುದಕ್ಕೆ ಸಿಎಂ ಹೇಳಿದ್ದರು. ಆದರೆ ನಾನು ಶಿವಲಿಂಗೇಗೌಡರಿಗೆ ಮಾತು ಕೊಟ್ಟಿದ್ದೇನೆ, ಹೀಗಾಗಿ ಅರಸೀಕೆರೆಗೆ ಹೋಗಿ ಎಷ್ಟು ಹೊತ್ತಾದರೂ ಬಂದು ಸಭೆ ಮಾಡುತ್ತೇನೆ ಎಂದು ಸಿಎಂಗೆ ಹೇಳಿದೆ.
ಒಬ್ಬ ರೈತ ನಾಯಕ, ರೈತರಿಗಾಗಿ ಮಾತಾಡುವ ಶಿವಲಿಂಗೇಗೌಡರ ಕ್ಷೇತ್ರಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಬಂದಿದ್ದೇನೆ.
ಶಿವಲಿಂಗೇಗೌಡ ಅವರು ಇದ್ದಾರೆ ಎಂದು ನಾನು ಅವರನ್ನು ಹೊಗಳುತ್ತಿಲ್ಲ. ನಾನು ಸ್ವತಃ ನೋಡಿದ್ದೇನೆ, ಶಿವಲಿಂಗೇಗೌಡರು ದೇವರು ಕೊಟ್ಟ ವರ.
ಶಿವಲಿಂಗೇಗೌಡರು ಲಕ್ಷ್ಮೀಪುತ್ರ ಅಲ್ಲದೇ ಇರಬಹುದು, ಆದರೆ ಅವರು ಸರಸ್ವತಿ ಪುತ್ರ. ಟವಲ್​ ಹಾಕ್ಕೊಂಡು ಅಸೆಂಬ್ಲಿಯಲ್ಲಿ ನಿಂತರೆ ಮುಗಿಯಿತು, ಯಾವ ವಿಷಯ ಹೇಳಿ ಆ ವಿಷಯದ ಬಗ್ಗೆ ಮಾತಾಡುವ ಕ್ಯಾಪಾಸಿಟಿ ಅವರಿಗೆ ಇದೆ.
ಇಂತಹ ಶಿವಲಿಂಗೇಗೌಡರನ್ನು ಪಡೆದಿರುವುದು ಈ ಕ್ಷೇತ್ರದ ಪುಣ್ಯ. ರೈತರಿಗೆ ಅನುಕೂಲ ಆಗುವ ಕೆಲಸವನ್ನು ಶಿವಲಿಂಗೇಗೌಡರು ಮಾಡಿದ್ದಾರೆ. ಅವರ ಒಂದೊಂದು ಮಾತು ಕೂಡಾ ರೈತರ ಪರ ಇರುತ್ತದೆ.
ಶಿವಲಿಂಗೇಗೌಡರು ಹಿಂದೊಂದು ಮುಂದೊಂದು ಮಾತಾಡುವುದಿಲ್ಲ, ನೇರವಾಗಿ ಮಾತಾಡ್ತಾರೆ. ರೈತರ ಬಗ್ಗೆ ಅವರು ಮಾತಾಡುವ ರೀತಿ, ರೈತರ ಬಗ್ಗೆ ಅವರ ಕಳಕಳಿ ನಿಜಕ್ಕೂ ಮೆಚ್ಚುವಂಥದ್ದು
ಎಂದು ಸಚಿವ ಎಸ್​ ಟಿ ಸೋಮಶೇಖರ್​ ಹಾಡಿಹೊಗಳಿದ್ದಾರೆ.
ಅರಸೀಕೆರೆ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್​ ಆಕಾಂಕ್ಷಿ ಆಗಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ( B S Yediyurappa) ಆಪ್ತ ಎನ್​ ಆರ್​ ಸಂತೋಷ್​ (N R Santosh) ಅವರು ಶಿವಲಿಂಗೇಗೌಡರ ವಿರುದ್ಧ ದಿನಕ್ಕೊಂದು ಆರೋಪ ಮಾಡುತ್ತಿರುವ ಹೊತ್ತಲ್ಲಿ ಅವರದ್ದೇ ಪಕ್ಷದ ಸಚಿವರು ಹಾಡಿಹೊಗಳಿರುವುದು ಮಹತ್ವ ಪಡೆದಿದೆ.

LEAVE A REPLY

Please enter your comment!
Please enter your name here