ಬೆಂಗಳೂರು ಮಳೆಯಲ್ಲಿ ನಟಿ ರಮ್ಯಾರ ರಾಜಕೀಯ ಪ್ರಶ್ನೆಗಳು

Actress Ramya

ರಾಜಕಾರಣಿ  ಹಾಗೂ ನಟಿ ರಮ್ಯಾ (Ramya) ಅವರು ರಾಜಕಾರಣದಲ್ಲಿ ಹಣದ ಯತೇಚ್ಚ ಬಳಕೆಯ ವಿರುದ್ಧ ಸಿಡಿದೆದ್ದಿದ್ದಾರೆ. ಅಲ್ಲದೇ, ರಾಜಕೀಯ ಪಕ್ಷಗಳು ಚುನಾವಣೆಗೆ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಮಣೆ ಹಾಕುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಟಿ ರಮ್ಯಾ ರಾಜಕಾರಣದಲ್ಲಿ ಹಣದ ಹರಿವಿನ ಬಗ್ಗೆ ಜನತೆ ಆಳವಾದ ಯೋಚನೆ ಮಾಡಬೇಕು. ನಮ್ಮ ಈಗಿನ ಸ್ಥಿತಿಗೆ ಒಂದು ರೀತಿಯಲ್ಲಿ ನಾವೇ ಕಾರಣ ಎನ್ನುವ ಅರ್ಥದಲ್ಲಿ ಟ್ವೀಟ್ ಮಾಡಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಕರ್ನಾಟಕದ 28 ಜನ ಸಂಸದರಲ್ಲಿ 26 ಜನ ಸಂಸದರು ರಿಯಲ್ ಎಸ್ಟೇಸ್ ವ್ಯಾಪಾರಿಗಳಾಗಿದ್ದಾರೆ ಎಂಬ ಸುದ್ದಿ ಕೇಳಿ ನನಗೆ ದಿಗ್ಬ್ರಮೆಯಾಗಿದೆ.

ಇವರನ್ನು ಆಯ್ಕೆ ಮಾಡಿದ್ದು ರಿಯಲ್ ಎಸ್ಟೇಟ್ ಅಥವಾ ಜನರ ಆಯ್ಕೆಯೇ. ಆದ್ದರಿಂದ ಎಲ್ಲರೂ ಮತ ಚಲಾಯಿಸಿ ಮತ್ತು ಬುದ್ದಿವಂತಿಕೆಯಿಂದ ಚಲಾಯಿಸಿ. ಹೆಚ್ಚಿನ ಜನ ಮತ ಚಲಾಯಿಸುವುದಿಲ್ಲ. ಅದರಲ್ಲೂ ಪ್ರಮುಖವಾಗಿ ನಗರದ ಜನತೆ ಮತ ಚಲಾವಣೆ ಮಾಡಲ್ಲ. ಇಂತಹ ಘಟನೆ ನಡೆದಾಗ ನಮಗೂ ಕೋಪ ಬಂದಿರುತ್ತದೆ. ಆದರೆ, ನಾವಿರುವ ಸ್ಥಿತಿಗೆ ನಮ್ಮನ್ನೇ ದೂಷಿಸಿಕೊಳ್ಳಬೇಕಾಗಿದೆ.

ಇದನ್ನೂ ಓದಿ : Apple Box : ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟ ನಟಿ ರಮ್ಯಾ – ಮತ್ತೆ ಚಿತ್ರರಂಗಕ್ಕೆ ಕಮ್​ಬ್ಯಾಕ್

ಯಾಕೆ ಬರೀ ಹಣ ಇರುವ (ರಿಯಲ್ ಎಸ್ಟೇಟ್) ವ್ಯಕ್ತಿಗಳಿಗೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡಲಾಗುತ್ತದೆ. ಈ ಬಗ್ಗೆ ಆಳವಾಗಿ ಯೋಚಿಸಲಬೇಕಾಗಿದೆ. ಚುನಾವಣೆ ಆಯೋಗ ಚುನಾವಣೆಗೆ ಕೇವಲ 40 ಲಕ್ಷ ರೂ.ಗಳನ್ನು ಮಾತ್ರ ಖರ್ಚು ಮಾಡಲು ಅವಕಾಶ ನೀಡಿದೆ. ಆದರೆ, ಚುನಾವಣಾ ವೆಚ್ಚ ಕೋಟಿಗಳನ್ನೂ ದಾಟಿ ಹೋಗಿದೆ. ಈ ಬಗ್ಗೆ ಆಳವಾಗಿ ಯೋಚಿಸಬೇಕು. ಎಲ್ಲಾ ಸಮಸ್ಯೆಗೆ ಉತ್ತರ ಇಲ್ಲಿಯೇ ಇದೆ ಎಂದು ಹೇಳಿದ್ದಾರೆ.

ನಟಿ ರಮ್ಯಾ (Ramya) ಮಂಡ್ಯ ಕ್ಷೇತ್ರದ ಸಂಸದೆಯಾಗಿ ಹಾಗೂ ಕಾಂಗ್ರೆಸ್​​ನ ಸಾಮಾಜಿಕ ಜಾಲತಾಣದ ವಿಭಾಗದ ರಾಷ್ಟ್ರ ನಾಯಕಿಯಾಗಿ ಕರ್ತವ್ಯ ಸಲ್ಲಿಸಿದ್ದಾರೆ. ಇದೀಗ, ನಿರ್ಮಾಪಕಿಯಾಗಿ ಚಿತ್ರರಂಗಕ್ಕೆ ಮತ್ತೆ ಎಂಟ್ರಿ ಕೊಟ್ಟಿದ್ದಾರೆ.

ಪ್ರಸ್ತುತ ರಾಜ್ಯದ 28 ಜನ ಸಂಸದರಲ್ಲಿ ಬಿಜೆಪಿಯ 25 ಜನ, ಕಾಂಗ್ರೆಸ್​​ನ ಇಬ್ಬರು, ಜೆಡಿಎಸ್​ನ ಒಬ್ಬರು, ಹಾಗೂ ಪಕ್ಷೇತರ ಅಭ್ಯರ್ಥಿ ಒಬ್ಬರು ಇದ್ದಾರೆ. ಇದರಲ್ಲಿ 26 ಜನ ರಿಯಲ್ ಎಸ್ಟೇಟ್ ಉದ್ಯಮಿಗಳಿದ್ದಾರೆ ಎಂದು ನಟಿ ರಮ್ಯಾ ತಮ್ಮ ಆಕ್ರೊಶ ಹೊರಹಾಕಿದ್ದಾರೆ.

ಇದನ್ನೂ ಓದಿ : ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತಿದ ನಟಿ ರಮ್ಯಾ

LEAVE A REPLY

Please enter your comment!
Please enter your name here