ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ 50 ಸಾವಿರಕ್ಕೆ ಮಾರಾಟ; ಮೂವರ ಬಂಧನ

Rape

ಬಿಹಾರದ ಮಧುಬನಿ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಬಳಿಕ ಬಾಲಕಿಯನ್ನು ಮಾರಾಟ ಮಾಡಿದ ಅಮಾನವೀಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.

ಪೊಲೀಸರ ಪ್ರಕಾರ, ಮಹಿಳಾ ಪಿಂಪ್‌ಗೆ 50,000 ರೂ.ಗೆ ಬಾಲಕಿಯನ್ನು ಮಾರಾಟ ಮಾಡುವ ಮೊದಲು ಪೊಲೀಸ್ ಸಿಬ್ಬಂದಿ ಸೇರಿದಂತೆ ಹಲವರು ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.

ಗುರುವಾರ ರಾತ್ರಿ ಉತ್ತರ ಪ್ರದೇಶದ ಮೌ ಜಿಲ್ಲೆಯಲ್ಲಿ ತಂಡವೊಂದು ಮಹಿಳೆಯ ವಶದಲ್ಲಿದ್ದ ಬಾಲಕಿಯನ್ನು ರಕ್ಷಿಸಿ ಪ್ರಕರಣವನ್ನು ಭೇದಿಸಿದ ಘಟನೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ : 3 ವರ್ಷದ ಬಾಲಕಿ ಮೇಲೆ ಶಾಲಾ ಬಸ್​​ನಲ್ಲಿಯೇ​ ಚಾಲಕನಿಂದ ಅತ್ಯಾಚಾರ – ಬಂಧನ

ಬಂಧಿತರನ್ನು ಸೋನಿ ದೇವಿ, ಜೈನಗರದ ಅಶೋಕ್ ಮಾರುಕಟ್ಟೆಯ ರಾತ್ರಿ ಕಾವಲುಗಾರ ಅರ್ಜುನ್ ಯಾದವ್ ಮತ್ತು ಎಲೆಕ್ಟ್ರಿಷಿಯನ್ ಸಜನ್ ಕುಮಾರ್ ಎಂದು ಗುರುತಿಸಲಾಗಿದೆ. ಇನ್ನು ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಜೈನಗರ ಪೊಲೀಸ್ ಠಾಣೆಯ ಪೊಲೀಸ್ ಚಾಲಕ ಆಚಾರ್ಯ ಮತ್ತು ಚೋಕಿದಾರ್ ರಾಮ್‌ಜೀವನ್ ಪಾಸ್ವಾನ್ ತಲೆಮರೆಸಿಕೊಂಡಿದ್ದಾರೆ.

ಸಂತ್ರಸ್ತೆ ಒಂದು ತಿಂಗಳ ಹಿಂದೆ ತನ್ನ ಸ್ವಂತ ಪಟ್ಟಣವಾದ ಮೌವಿನಿಂದ ದಾರಿ ತಪ್ಪಿ ಮಧುಬನಿ ಜಿಲ್ಲೆಯ ಜೈನಗರ ಪಟ್ಟಣಕ್ಕೆ ಬಂದಿದ್ದಳು. ಅಶೋಕ್ ಮಾರ್ಕೆಟ್‌ನಲ್ಲಿ ತಿರುಗಾಡುತ್ತಿದ್ದಾಗ ಆಕೆ ಅರ್ಜುನ್ ಯಾದವ್‌ನ ಸಹಾಯ ಯಾಚಿಸಿದ್ದಾಳೆ. ಈ ವೇಳೆ ಬಾಲಕಿಯನ್ನು ಏಕಾಂತ ಸ್ಥಳಕ್ಕೆ ಕರೆದೊಯ್ದು ತನ್ನ ಇತರ ಮೂವರು ಸ್ನೇಹಿತರನ್ನು ಕರೆದು ಸರದಿಯಲ್ಲಿ ಅವಳ ಮೇಲೆ ಅತ್ಯಾಚಾರವೆಸಗಿದರು ಮತ್ತು ಅವಳನ್ನು ಕೋಣೆಯಲ್ಲಿ ಕೂಡಿ ಹಾಕಿದ್ದರು.

ಸಂತ್ರಸ್ತೆ ಮನೆಯವರು ಬಾಲಕಿ ನಾಪತ್ತೆಯಾಗಿರುವುದಾಗಿ ಮೌ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮಾಹಿತಿಯ ಆಧಾರದ ಮೇಲೆ, ಮೌ ಪೊಲೀಸರ ತಂಡ ಮಧುಬನಿಯ ಜೈನಗರ ಪಟ್ಟಣಕ್ಕೆ ಆಗಮಿಸಿ ಸೋನಿ ದೇವಿ ಮನೆಯ ಮೇಲೆ ದಾಳಿ ನಡೆಸಿ, ಬಾಲಕಿಯನ್ನು ರಕ್ಷಿಸಿದೆ.

ಇದನ್ನೂ ಓದಿ : ಮಹಿಳೆ ಮೇಲೆ ಅತ್ಯಾಚಾರ : ಮುಸ್ಲಿಂ ಧರ್ಮಗುರುವಿಗೆ 10 ವರ್ಷ ಜೈಲು