ನವರಾತ್ರಿ ವೇಳೆಯೂ ಜನಸಾಮಾನ್ಯರಿಗೆ ಇಲ್ಲ ರಿಲೀಫ್ : ಗೃಹ ಬಳಕೆ LPG ಬೆಲೆ ಇಳಿಕೆ ಇಲ್ಲ

ನವರಾತ್ರಿ ಹಬ್ಬದ ಸಂದರ್ಭದಲ್ಲಿಯೂ ಕೇಂದ್ರ ಸರ್ಕಾರ ಜನಸಾಮಾನ್ಯರಿಗೆ ಸಿಹಿಸುದ್ದಿ ನೀಡಿಲ್ಲ. ದೇಶೀಯ ತೈಲ ಕಂಪನಿಗಳು ಗೃಹ ಬಳಕೆ ಸಿಲಿಂಡರ್ (Domestic LPG Cylinder)ಬೆಲೆಯನ್ನು ಇಳಿಕೆ ಮಾಡಿಲ್ಲ.

ಆದರೆ, ವಾಣಿಜ್ಯ ಸಿಲಿಂಡರ್‌ಗಳ (Commercial LPG Cylinder) ಬೆಲೆಯನ್ನು ಕಡಿತಗೊಳಿಸಿವೆ. ಅಕ್ಟೋಬರ್ ತಿಂಗಳ ಮೊದಲ ದಿನವಾದ ಶನಿವಾರ ಇಂಡಿಯನ್ ಆಯಿಲ್ ಬಿಡುಗಡೆ ಮಾಡಿದ ಬೆಲೆಗಳ ಪ್ರಕಾರ, ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆ 25.50 ರೂಪಾಯಿ ಕಡಿಮೆಯಾಗಿದೆ.

19 ಕೆಜಿ ತೂಕದ ವಾಣಿಜ್ಯ ಸಿಲಿಂಡರ್ ದರ ಕೋಲ್ಕತ್ತಾದಲ್ಲಿ 36.50 ರೂ, ಮುಂಬೈನಲ್ಲಿ 32.50 ರೂ, ಹೈದರಾಬಾದ್‌ನಲ್ಲಿ 36.50 ರೂ, ಚೆನ್ನೈ ನಲ್ಲಿ 35.50 ರೂ.ಕಡಿತವಾಗಿದೆ.

ಪ್ರಸ್ತುತ ಬೆಂಗಳೂರಿನಲ್ಲಿ (Bengaluru) 19 ಕೆಜಿಯ ವಾಣಿಜ್ಯ ಸಿಲಿಂಡರ್ ಬೆಲೆ 1685.50 ರೂಪಾಯಿ ಇದೆ.

LEAVE A REPLY

Please enter your comment!
Please enter your name here