ತಮಿಳುನಾಡಲ್ಲಿ ಹಾಲು ಖರೀದಿ ಮತ್ತು ಸಂಸ್ಕರಣೆಯಿಂದ ನಿರ್ಧಾರದಿಂದ ಹಿಂದೆ ಸರಿಯುವಂತೆ ಅಮುಲ್ಗೆ ಸೂಚಿಸಿ ಎಂದು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ಕೇಂದ್ರ ಸಹಕಾರ ಖಾತೆ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.
ತಮಿಳುನಾಡು ರಾಜ್ಯದ ಜಿಲ್ಲೆಗಳಾದ ಕೃಷ್ಣಗಿರಿ, ಧರ್ಮಪುರಿ, ವೆಲ್ಲೂರು, ರಾಣಿಪೇಟೆ, ತಿರುಪತೂರು, ಕಾಂಚಿಪುರಂ, ತಿರುವಲ್ಲೂರು ಜಿಲ್ಲೆಗಳಲ್ಲಿ ಗುಜರಾತ್ ಮೂಲದ ಅಮುಲ್ ಹಾಲು ಖರೀದಿ ಆರಂಭಿಸಿದೆ.
ಹಾಲು ಉತ್ಪಾದಕರ ಸಂಘ ಮತ್ತು ಸ್ವಸಹಾಯ ಸಂಘದ ಮೂಲ ಹಾಲು ಖರೀದಿ ಮತ್ತು ಹಾಲು ಸಂಸ್ಕರಣೆಗೆ ಘಟಕಗಳನ್ನು ಸ್ಥಾಪಿಸಿದೆ.
ಅಮುಲ್ನ ಈ ನಿರ್ಧಾರದಿಂದ ತಮಿಳುನಾಡು ಸರ್ಕಾರದ ಆವಿನ್ಗೆ ಹಾಲಿನ ಕೊರತೆ ಉಂಟಾಗಲಿದ್ದು, ಆವಿನ್ ವ್ಯಾಪಾರ-ವಹಿವಾಟಿಗೆ ಧಕ್ಕೆ ಉಂಟಾಗಲಿದೆ. ಅಮುಲ್ನ ಈ ನಿರ್ಧಾರ ಸಹಕಾರಿ ಕ್ಷೇತ್ರದ ತತ್ವಕ್ಕೆ ವಿರುದ್ಧವಾಗಿದೆ ಮತ್ತು ಅನಾರೋಗ್ಯಕರ ಸ್ಪರ್ಧೆ ಕಾರಣವಾಗಲಿದೆ