ಬೆಂಗಳೂರು: ಇಂದಿನಿಂದ ನಾಯಂಡನಹಳ್ಳಿ-ಹೆಬ್ಬಾಳ ನಡುವೆ BMTC ಬಸ್​ಗಳ ಓಡಾಟ ಹೆಚ್ಚಳ

ಬೆಂಗಳೂರಿನ ನಾಯಂಡನಹಳ್ಳಿ ಮತ್ತು ಹೆಬ್ಬಾಳ ನಡುವೆ ಬಿಎಂಟಿಸಿ ಐದು ಹೆಚ್ಚುವರಿ ಬಸ್​ಗಳ ಓಡಾಟವನ್ನು ಇಂದಿನಿಂದ ಆರಂಭಿಸಿದೆ.

501 NH ಕ್ರಮ ಸಂಖ್ಯೆಯ ಐದು ಹೆಚ್ಚುವರಿ ಬಸ್​ಗಳು ನಾಯಂಡನಹಳ್ಳಿ ಮತ್ತು ಹೆಬ್ಬಾಳ ಮಾರ್ಗದಲ್ಲಿ ಸಂಚರಿಸಲಿವೆ.

ನಾಯಂಡನಹಳ್ಳಿಯಿಂದ ಬೆಳಗ್ಗೆ 5.45ಕ್ಕೆ ಹೆಬ್ಬಾಳಕ್ಕೆ ಮೊದಲ ಬಸ್​ ಪ್ರಯಾಣಿಸಲಿದ್ದು, ರಾತ್ರಿ 11 ಗಂಟೆ 55 ನಿಮಿಷಕ್ಕೆ ಕೊನೆಯ ಬಸ್​ ಸಂಚಾರ ಆರಂಭಿಸಲಿದೆ.

ಹೆಬ್ಬಾಳದಿಂದ ನಾಯಂಡನಹಳ್ಳಿಗೆ ಬೆಳಗ್ಗೆ 5.20ಕ್ಕೆ ಮೊದಲ ಬಸ್​ ಸಂಚರಿಸಲಿದ್ದು, ರಾತ್ರಿ 10 ಗಂಟೆ 20 ನಿಮಿಷಕ್ಕೆ ಕೊನೆಯ ಬಸ್​ ಸಂಚರಿಸಲಿದೆ.