ಸಿಲ್ಕ್ ಸ್ಮಿತಾ.. ಈ ಹೆಸರನ್ನು ಕೇಳದ ಸಿನಿ ಅಭಿಮಾನಿಗಳು ಇಲ್ಲ.. ಒಂದು ಕಾಲದಲ್ಲಿ ತನ್ನ ಅಂದ ಚೆಂದ ಮತ್ತು ಮಾದಕನೋಟದ ಮೂಲಕ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಭಾರೀ ಸದ್ದು ಮಾಡಿದವರು. ಗ್ಲಾಮರಸ್ ಪಾತ್ರಗಳ ಮೂಲಕ ಲಕ್ಷಾಂತರ ಪಡ್ಡೆಗಳ ಮನಸೋರೆಗೊಂಡಿದ್ದವರು. ಸ್ಟಾರ್ ಹೀರೋಗಳು ಕೂಡ ತಮ್ಮ ಸಿನಿಮಾಗಳಲ್ಲಿ ಸಿಲ್ಕ್ ಸ್ಮಿತಾ ಇರಬೇಕೆಂದು ಬಯಸುತ್ತಿದ್ದರು.. ಅಷ್ಟರ ಮಟ್ಟಿಗೆ ಸಿಲ್ಕ್ ಸ್ಮಿತಾ ಕ್ರೇಜ್ ಇತ್ತು. ಆದರೆ, ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ತಮ್ಮ ಜೀವನಕ್ಕೆ ಕೊನೆ ಹಾಡಿಕೊಂಡರು.
ಮಾದಕ ನೋಟದ ಚೆಲುವೆ ಸಿಲ್ಕ್ ಸ್ಮಿತಾ
ಒಬ್ಬ ಸೀನಿಯರ್ ಹೀರೋ ಸಿಲ್ಕ್ ಸ್ಮಿತಾ ಸಿನಿಮಾ ಜೀವನವನ್ನು ನಾಶ ಮಾಡಿದ್ದಾರೆ ಎಂಬ ಆರೋಪ ಇದೆ. ಆತನೊಬ್ಬನ ಕಾರಣದಿಂದಲೇ ಅವಕಾಶಗಳು ಬರಲಿಲ್ಲ ಎನ್ನಲಾಗಿದೆ. ಇದರಿಂದ ಡಿಪ್ರೆಷನ್ ಗೆ ಒಳಗಾದ ನಟಿ ಸಿಲ್ಕ್ 1996ರಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಇದಕ್ಕೂ ಮುನ್ನ ಸಿಲ್ಕ್ ಸ್ಮಿತಾ ಡೆತ್ ನೋಟ್ ಬರೆದಿದ್ದು, ಮನದ ಬೇಗುದಿಯನ್ನು ರಟ್ಟು ಮಾಡಿದ್ದರು..
ಸಿಲ್ಕ್ ಸ್ಮಿತಾ ಡೆತ್ ನೋಟ್ ನಲ್ಲಿ ಹೀಗಿದೆ..
ದೇವರೇ.. ನನ್ನ ಏಳನೇ ವಯಸ್ಸಿನಿಂದಲೂ ಹೊಟ್ಟೆಪಾಡಿಗಾಗಿ ಕಷ್ಟಪಟ್ಟಿದ್ದೇನೆ. ನಾನು ನಂಬಿದವರೇ ನನಗೆ ಮೋಸ ಮಾಡಿದರು. ನನ್ನವರು ಅಂತಾಈಗ ಯಾರು ಇಲ್ಲ. ಬಾಬು ಹೊರತುಪಡಿಸಿ ಬೇರೆ ಯಾರು ಕೂಡ ನನ್ನನ್ನು ಪ್ರೀತಿಯಿಂದ ಕಾಣಲಿಲ್ಲ. ಬಾಬು ಬಿಟ್ಟು ಉಳಿದವರೆಲ್ಲಾ ನನ್ನಿಂದ ಕಿತ್ತು ತಿಂದವರೇ ಆಗಿದ್ದಾರೆ. ನನ್ನ ಒಡವೆ ತಿಂದವರೇ ನನಗೆ ನೆಮ್ಮದಿ ಇಲ್ಲದಂತೆ ಮಾಡಿದ್ದಾರೆ. ನಾನುಎಲ್ಲರಿಗೂ ಒಳ್ಳೆಯದನ್ನೇ ಮಾಡಿದೆ.. ಆದರೆ, ನನಗೆ ಮಾತ್ರ ಕೆಟ್ಟದ್ದಾಯಿತು. ನನ್ನ ಆಸ್ತಿಯನ್ನು ನಮ್ಮ ಕುಟುಂಬಕ್ಕೆ ಮತ್ತು ಬಾಬು ಕುಟುಂಬಕ್ಕೆ ಹಂಚಬೇಕು.
ನನ್ನೆಲ್ಲಾ ಆಸೆಯನ್ನು ನಾನು ಒಬ್ಬರ ಮೇಲೆಯೇ ಇಟ್ಟುಕೊಂಡಿದ್ದೆ. ಆದರೆ, ಆತ ಕೂಡ ನನಗೆ ಮೋಸ ಮಾಡಿದ.ದೇವರು ಅದನ್ನು ನೋಡಿಕೊಳ್ಳುತ್ತಾರೆ..
ರಾಮು, ರಾಧಾಕೃಷ್ಣನ್ ನನ್ನನ್ನು ರೊಚ್ಚಿಗೆಬ್ಬಿಸಿದರು.. ಅವರಿಗೆ ನಾನೆಷ್ಟೋ ಒಳ್ಳೆಯದನ್ನು ಮಾಡಿದೆ.. ಆದರೆ ಅವರು ನನಗೆ ತುಂಬಾನೆ ಅನ್ಯಾಯ ಮಾಡಿದರು.
ನನಗೆ ಒಬ್ಬ ಐದು ವರ್ಷಗಳ ಹಿಂದೆ ಜೀವನ ಕೊಡ್ತೀನಿ ಎಂದಿದ್ದ.. ಆದರೆ, ಈಗ ನೀಡುತ್ತಿಲ್ಲ. ನನ್ನ ರಟ್ಟೆಯ ಕಷ್ಟದ ಫಲವನ್ನು ತಿನ್ನದವರೇ ಇಲ್ಲ. ಒಬ್ಬ ಬಾಬುವನ್ನು ಹೊರತುಪಡಿಸಿ.. ಇದನ್ನು ಬರೆಯಲು ನಾನು ಎಷ್ಟು ನರಕವನ್ನು ಅನುಭವಿಸಿದ್ದೇನೆ ಎಂಬುದನ್ನು ಮಾತುಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ..
ಇಂತಿ ದೌರ್ಭಾಗ್ಯವಂತೆ.. ಎನ್ನುತ್ತಾ ಡೆತ್ ನೋಟ್ ಅನ್ನು 22/9/1996ರಲ್ಲಿ ಬರೆಯುತ್ತಾರೆ ಸಿಲ್ಕ್ ಸ್ಮಿತಾ.. ಇದಾದ ನಾಲ್ಕು ದಿನಕ್ಕೆ ಸಿಲ್ಕ್ ಸ್ಮಿತಾ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.
ಅಂದ ಹಾಗೆ, ಸಿಲ್ಕ್ ಸ್ಮಿತಾ ಸಾವನ್ನಪ್ಪಿದಾಗ ಕಡೆಯದದಾಗಿ ಅವರನ್ನು ನೋಡಲು ಸಿನಿಮಾ ತಾರೆಯರಾಗಲಿ.. ಕುಟುಂಬದ ಮಂದಿಯಾಗಲಿ ಹೋಗಲೇ ಇಲ್ಲ. ಆ ಒಬ್ಬ ನಟನನ್ನು ಬಿಟ್ಟು.. ಒಂದು ರೀತಿಯಲ್ಲಿ ಅನಾಥ ಶವದಂತೆ ಸಿಲ್ಕ್ ಸ್ಮಿತಾ ಅಂತ್ಯಕ್ರಿಯೆಗಳನ್ನು ನೆರವೇರಿಸಲಾಯಿತು. ಸಿಲ್ಕ್ ಸ್ಮಿತಾ ಅಂತ್ಯವನ್ನೂ ನಿಜಕ್ಕೂ ದುರಂತ