ಪ್ರಮುಖ ಸಿಂಗರ್ ಚಿನ್ಮಯಿ ಶ್ರೀಪಾದ್ ಪರಿಚಯವನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಸಿಂಗರ್ ಆಗಿ ಮಾತ್ರವಲ್ಲ.. ಡಬ್ಬಿಂಗ್ ಆರ್ಟಿಸ್ಟ್ ಆಗಿಯೂ ಚಿನ್ಮಯಿ ಶ್ರೀಪಾದ್ ಫೇಮಸ್. ಯಾವುದೇ ವಿಚಾರ ಇರಲಿ.. ನೇರವಾಗಿ ಮಾತನಾಡುವ ಸ್ವಭಾವ ಅವರನ್ನು ವಿವಾದಕ್ಕೂ ಕಾರಣವಾಗಿದೆ. ಕೆಲ ಯುವಕರು ಇನ್ಸ್ಟಾ ವೀಡಿಯೋ ಬಗ್ಗೆ ಇದೀಗ ಚಿನ್ಮಯಿ ಸ್ಪಂದಿಸಿದ್ದು, ಅವರ ಹೇಳಿಕೆಗಳು ಈಗ ವೈರಲ್ ಆಗಿವೆ.
ಕೆಲ ಮಹಿಳೆಯರು ಕನಿಷ್ಠ ವೇಲ್ ಕೂಡ ಹಾಕ್ತಿಲ್ಲ. ಇದು ನಮ್ಮ ಭಾರತೀಯ ಸಂಸ್ಕೃತಿ ಅಲ್ಲ ಎಂದು ಇನ್ಸ್ಟಾ ರೀಲ್ಸ್ ಮಾಡುವ ಕೆಲ ಯುವಕರು ವೀಡಿಯೋ ಮಾಡಿದ್ದರು. ಇದಕ್ಕೆ ಖಾರವಾಗಿಯೇ ಚಿನ್ಮಯಿ ಶ್ರೀಪಾದ್ ಪ್ರತಿಕ್ರಿಯೆ ನೀಡಿದ್ದಾರೆ.
ವೇಲ್ ಹಾಕಿಕೊಳ್ಳಬೇಕು ಎನ್ನುವವರು ಮೊದಲು ನಮ್ಮ ದೇಶದ ಸಂಸ್ಕೃತಿ ಏನೆಂದು ತಿಳಿದುಕೊಳ್ಳಬೇಕು ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ.
ರವೀಂದ್ರನಾಥ್ ಠ್ಯಾಗೋರ್ ಅವರ ಅಣ್ಣ ಸತ್ಯೇಂದ್ರನಾಥ್ ಠ್ಯಾಗೋರ್ ಅವರ ಪತ್ನಿ ಜ್ಞಾನನಂದಿನಿಯವರು ಹೆಂಗಸರು ಧರಿಸುವ ಬ್ಲೌಸ್/ರವಿ ಸಂಸ್ಕೃತಿಯನ್ನು ಪರಿಚಯಿಸಿದರು. ಅಲ್ಲಿಯವರೆಗೂ ನಮ್ಮ ದೇಶದಲ್ಲಿ ಹೆಂಗಸರು ರವಿಕೆ ಧರಿಸುತ್ತಿರಲಿಲ್ಲ.
ಮಹಿಳೆಯರು ವೇಲ್ ಹಾಕಿಕೊಳ್ಳಬೇಕು ಎಂದು ಹೇಳುವ ಗಂಡಸರು ಮೊದಲು ಷರ್ಟ್, ಪ್ಯಾಂಟ್ ಬದಲು ಪಂಚೆ ಧರಿಸಬೇಕು.
ಜಾಕೆಟ್ ಧರಿಸದ ಮಹಿಳೆಯರನ್ನು ಕಂಡು ಬ್ರಿಟೀಷರು ಶಾಕ್ ಆಗಿದ್ದರು. ಇದರಿಂದ ಬ್ರಿಟೀಷರಿಗೆ ಲೈಂಗಿಕ ವಾಂಛೆಗಳು ಹೆಚ್ಚಿದ ಕಾರಣ ಭಾರತೀಯ ಮಹಿಳೆಯರು ರವಿಕೆ ಧರಿಸಲು ಶುರು ಮಾಡಿದರು.
ಬ್ಲೌಸ್ ಎನ್ನುವುದು ಬ್ರಿಟೀಷ್ ಕಲ್ವರ್.. ಮೊದಲು ನಮ್ಮ ಕಲ್ಚರ್ ತಿಳಿದುಕೊಳ್ಳಿ ಎಂದು ಚಿನ್ಮಯಿ ಶ್ರೀಪಾದ್ ಕ್ಲಾಸ್ ತೆಗೆದುಕೊಂಡಿದ್ದಾರೆ.