Employment : ದೊಡ್ಡ ಓದು ಓದಿಲ್ವಾ.. ಡೋಂಟ್ ವರಿ.. ಇಲ್ಲಿವೆ ಸಾಕಷ್ಟು ಉದ್ಯೋಗವಕಾಶ.. ಕೆಲಸ ಸಣ್ಣದೆಂದು ಮೂಗುಮುರೀಬೇಡಿ..

ನಾನು ದೊಡ್ಡ ಓದು ಓದಿಲ್ಲ.. ನಂಗೆ ಕೆಲಸ ಸಿಕ್ಕಿಲ್ಲ ಎಂಬ ನೋವು, ಕೊರಗಿನಲ್ಲಿ ನಿಮ್ಮ ಜೀವನವನ್ನು ವೇಸ್ಟ್ ಮಾಡಿಕೊಳ್ಳಬೇಡಿ. ಸ್ವಯಂ ಉದ್ಯೋಗಗಳು ನಿಮ್ಮ ಮುಂಗೈನಲ್ಲಿಯೇ ಇವೆ.. ಅವುಗಳ ಮೇಲೆ ಗಮನ ಇಟ್ಟಲ್ಲಿ ನಿಮ್ಮ ಬದುಕು ಸುಗಮವಾಗಲಿದೆ..

– ಎಸ್ಎಸ್ಎಲ್ಸಿ, ಪಿಯುಸಿ ಬಳಿಕ ಪದವಿ ವಿದ್ಯಾಭ್ಯಾಸ ಮಾಡಲು ಆಗದೇ ಇದ್ದಲ್ಲಿ, ಕೌಶಲ್ಯಧಾರಿತ ಶಿಕ್ಷಣವನ್ನು ಸ್ಥಳೀಯವಾಗಿಯೇ ಹೊಂದಿ, ಜೀವನಕ್ಕೊಂದು ದಾರಿ ಮಾಡಿಕೊಳ್ಳಬಹುದು

– ಎಸ್ಎಸ್ಎಲ್ಸಿ, ಪಿಯುಸಿಯನ್ನು ಆಧರಿಸಿ ಆನೇಕ ಸರ್ಕಾರಿ ಉದ್ಯೋಗಿಗಳು ಕಾಲ್ ಫಾರ್ ಆಗುತ್ತವೆ. ಆದರೆ, ಇದಕ್ಕೆ ಕಾಂಪಿಟೇಷನ್ ಜಾಸ್ತಿ ಇರುತ್ತದೆ.. ಶ್ರದ್ದೆಯಿಂದ ಓದಿ ಪರೀಕ್ಷೆ ಬರೆದಲ್ಲಿ ಉದ್ಯೋಗವನ್ನು ನೀವು ಹೊಂದಬಹುದು.

– ಮೆಕಾನಿಕಲ್ ಕೋರ್ಸ್ ಮಾಡಿಲ್ಲದಿದ್ದರೂ ಒಂದೆರಡು ವರ್ಷ ವಾಹನ ಮತ್ತು ಇತರೆ ಯಂತ್ರಗಳನ್ನು ರಿಪೇರಿ ಮಾಡುವ ಮೆಕಾನಿಕ್ ಬಳಿ ಕೆಲಸ ಮಾಡಿದಲ್ಲಿ, ಆ ಕೌಶಲ್ಯ ನಿಮಗೆ ವೃದ್ಧಿಸುತ್ತದೆ. ಕೆಲ ದಿನಗಳ ಬಳಿಕ ನೀವೇ ಆ ಕೆಲಸಗಳನ್ನು ಸ್ವಂತವಾಗಿ ಆರಂಭಿಸಬಹುದು.

– ವಿದ್ಯುತ್ ವೈರಿಂಗ್ ಮಾಡುವುದಲ್ಲಿ ಪ್ರಾವೀಣ್ಯತೆ ಹೊಂದಿದಲ್ಲಿ ಸಾಕಷ್ಟು ಅವಕಾಶಗಳು ಲಭಿಸುತ್ತವೆ. ಪಟ್ಟಣ ಪ್ರದೇಶಗಳಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗಳು ಹೆಚ್ಚೆಚ್ಚು ನಡೆಯುವುದರಿಂದ ಜೀವನೋಪಾಯಕ್ಕೇನು ತೊಂದರೆ ಆಗಲ್ಲ.

– ಐಐಟಿ,ಫಿಟ್ಟರ್, ಪ್ಲಂಬರ್, ಎಲೆಕ್ಟ್ರಿಕ್ ಕೋರ್ಸ್ ಮಾಡಿದಲ್ಲಿ ಅದಕ್ಕೆ ತಕ್ಕಂತಹ ಉದ್ಯೋಗ ಸಿಗುತ್ತದೆ. ಒಂದೊಮ್ಮೆ ಕೋರ್ಸ್ ಮಾಡದಿದ್ದರೂ ಆಯಾ ಕೆಲಸಗಳಲ್ಲಿ ನೈಪುಣ್ಯತೆ ಇರುವವರ ಬಳಿ ಕೆಲಸ ಮಾಡಿದಲ್ಲಿ ಆದಾಯಕ್ಕೊಂದು ಮಾರ್ಗ ಲಭಿಸಲಿದೆ.

– ಡ್ರೈವಿಂಗ್ ಲೈಸೆನ್ಸ್ ಇದ್ದು,ವಾಹನ ಚಾಲನೆ ಮಾಡುವುದರಲ್ಲಿ ಎಕ್ಸ್ಪರ್ಟ್ ಆಗಿದ್ದಲ್ಲಿ  ಪಟ್ಟಣ ಪ್ರದೇಶಗಳಲ್ಲಿ ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡಬಹುದು.. ಖಾಲಿ ಇರುವ ಸಮಯದಲ್ಲಿ ಓದಿಗೂ ಅವಕಾಶ ಲಭಿಸುತ್ತದೆ.

– ಫ್ರಿಡ್ಜ್, ವಾಷಿಂಗ್ ಮೆಷಿನ್, ಎಸಿ, ವಾಟರ್ ಹೀಟರ್, ಫ್ಯಾನ್, ವಾಟರ್ ಮೋಟಾರ್ ಗಳು ಬಹುತೇಕರ ಮನೆಗಳಲ್ಲಿ ಇರುತ್ತವೆ. ಯಾವುದೋ ಒಂದು ಕಾರಣಕ್ಕೆ ವರ್ಷಕ್ಕೆ ಎರಡ್ಮೂರು ಬಾರಿ ಯಾವುದಾದರೊಂದು ರಿಪೇರಿಗೆ ಬಂದೇ ಬರುತ್ತದೆ.. ಇವುಗಳನ್ನು ರಿಪೇರಿಮಾಡುವ ಕೌಶಲ್ಯ ಹೊಂದಿದ್ದಲ್ಲಿ , ಇದರ ಮೂಲಕವೇ ನಿಮ್ಮ ಜೀವನವನ್ನು ಕಟ್ಟಿಕೊಳ್ಳಬಹುದು.

– ಇತ್ತೀಚಿಗೆ ಓಲಾ,ಊಬೆರ್, ರ್ಯಾಪಿಡ್ ನಂತಹ ಸಂಸ್ಥೆಗಳಲ್ಲಿ ಸ್ವಂತ ಬೈಕ್ ಮೂಲಕ ಪ್ರಯಾಣಿಕರನ್ನು ಕರೆದೊಯ್ಯುವ ಸೇವೆಗಳು ಲಭ್ಯ ಇವೆ.. ಇವುಗಳ ಮೂಲಕವೂ ನೀವು ಆದಾಯ ಹೊಂದಬಹುದು.

– ಒಂದಿಷ್ಟು ಟೆಕ್ನಾಲಜಿ ನಿಮಗೆ ಗೊತ್ತಿದ್ದರೇ ಎಲ್ಲಾ ರೀತಿಯ ಸೇವೆಗಳನ್ನು ನೀಡುವ ಒಂದು ವೆಬ್ ಸೈಟ್ ರೂಪಿಸಿ, ಅದರಲ್ಲಿ ನಿಪುಣರ ಮಾಹಿತಿಗಳನ್ನು ಇಟ್ಟುಕೊಳ್ಳಬೇಕು. ಕಸ್ಟಮರ್ ಬಯಸಿದ ಸೇವೆಗಳನ್ನು ನಿಪುಣರ ಮೂಲಕ ಮಾಡಿಸಿ.. ನೀವು ಕುಳಿತಲ್ಲೇ ಆದಾಯ ಹೊಂದಬಹುದು