Aadhar Update: ಆಧಾರ್​ – ಈ ಗಡುವು ಮುಗಿದರೇ ದಂಡ ಫಿಕ್ಸ್

ಆಧಾರ್ ವಿವರಗಳನ್ನು ಉಚಿತವಾಗಿ ಅಪ್‌ಡೇಟ್ ಮಾಡಿಕೊಳ್ಳಲು ಕೇಂದ್ರ ಸರ್ಕಾರ ನೀಡಿದ್ದ ಗಡುವನ್ನು ಮತ್ತೆ ಮೂರು ತಿಂಗಳ ಕಾಲ ವಿಸ್ತರಿಸಿ ಯುಐಡಿಎಐ ಮಹತ್ವದ ತೀರ್ಮಾನವನ್ನು ತೆಗೆದುಕೊಂಡಿದೆ.

ಈ ಮೊದಲು ಕೊಟ್ಟಿದ್ದ ಗಡುವು ಜೂನ್ 14ಕ್ಕೆ ಮುಗಿದಿತ್ತು. ಇದೀಗ ಈ ಗಡುವನ್ನು ಸೆಪ್ಟೆಂಬರ್ 14ರವರೆಗೂ ವಿಸ್ತರಿಸಲಾಗಿದೆ ಎಂದು  ಯುಐಡಿಎಐ ಪ್ರಕಟಿಸಿದೆ.

ಈ ಗಡುವು ಮುಗಿದಲ್ಲಿ ಆಧಾರ್ ಅಪ್‌ಡೇಟ್ ಮಾಡಿಸಲು ಜನ ಹಣ ಪಾವತಿ ಮಾಡಬೇಕಾಗುತ್ತದೆ.

ಆಧಾರ್ ಅಪ್‌ಡೇಟ್​ಗೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಸಮರ್ಪಿಸಬೇಕು. ಉಚಿತ ಸೇವೆಗಳು ಮೈ ಆಧಾರ್ ಪೋರ್ಟಲ್‌ನಲ್ಲಿ ಮಾತ್ರ ಲಭ್ಯ ಇವೆ.

ಹೆಸರು, ಜನ್ಮದಿನಾಂಕ, ಅಡ್ರೆಸ್ ಮಾರ್ಪಾಡುಗಳನ್ನು ಮಾಡಿಕೊಳ್ಳಬಹುದು.

ಈ ದಿನ ಬಿಟ್ಟರೇ ನಾಳೆಯಿಂದ ಆಧಾರ್ ಕೇಂದ್ರಗಳಲ್ಲಿ 50 ರೂಪಾಯಿ ಪಾವತಿ ಮಾಡಿ ಅಪ್‌ಡೇಟ್ ಮಾಡಿಸಿಕೊಳ್ಳಬೇಕಾಗುತ್ತದೆ. ಹೀಗಾಗಿ ಇಂದೇ ಉಚಿತವಾಗಿ ಆಧಾರ್​ ಅಪ್​ಡೇಟ್​ ಮಾಡಿಕೊಳ್ಳಿ..

ನೀವೇ ಟ್ರೈ ಮಾಡಿ.. ಇಲ್ಲವೇ ನಿಮ್ಮ ಸನಿಹದ ಆಧಾರ್​ ಕೇಂದ್ರಕ್ಕೆ ತೆರಳಿ

ಹೀಗೆ ಅಪ್‌ಡೇಟ್ ಮಾಡಿಕೊಳ್ಳಿ

* http;//myaadhaar.uidai.gov.in ವೆಬ್‌ಸೈಟ್‌ನಲ್ಲಿ ಆಧಾರ್ ನಂಬರ್ ಮೂಲಕ ಲಾಗಿನ್ ಆಗಬೇಕು

* ಪ್ರೊಸೀಡ್ ಟು ಅಪ್‌ಡೇಟ್ ಅಡ್ರೆಸ್ ಆಪ್ಶನ್ ಮೇಲೆ ಕ್ಲಿಕ್ ಮಾಡಿ.

* ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರ್‌ಗೆ ಓಟಿಪಿ ಬರುತ್ತದೆ

* ಓಟಿಪಿ ಎಂಟರ್ ಮಾಡಿದ ನಂತರ ಡಾಕ್ಯುಮೆಂಟ್ ಅಪ್‌ಡೇಟ್ ಮೇಲೆ ಕ್ಲಿಕ್ ಮಾಡಬೇಕು. ಆಗ ಈಗಾಗಲೇ ಇರುವ ವಿವರಗಳು ಸ್ಕ್ರೀನ್ ಮೇಲೆ ಕಾಣಿಸುತ್ತದೆ. ಒಂದೊಮ್ಮೆ ಇದರಲ್ಲಿ ಅಪ್‌ಡೇಟ್ ಮಾಡಿಕೊಳ್ಳುವುದು ಇದ್ದರೇ ಮಾಡಿಕೊಳ್ಳಬೇಕು. ಅಥವಾ ವಿವರಗಳನ್ನು ವೆರಿಫೈ ಮಾಡಿಕೊಂಡು ನೆಕ್ಸ್ಟ್ ಮೇಲೆ ಕ್ಲಿಕ್ ಮಾಡಬೇಕು.

* ನಂತರ ಕಾಣಿಸುವ ಡ್ರಾಪ್‌ಡೌನ್ ಲಿಸ್ಟ್‌ನಿಂದ ಪ್ರೂಫ್ ಆಫ್ ಐಡೆಂಟಿಟಿ, ಪ್ರೂಫ್ ಆಫ್ ಅಡ್ರೆಸ್ ಡಾಕ್ಯುಮೆಂಟ್ ಆಯ್ಕೆ ಮಾಡಿಕೊಳ್ಳಿ.

* ಆಯಾ ದಾಖಲೆಗಳ ಸ್ಕ್ಯಾನ್ ಮಾಡಿದ ಕಾಪಿಗಳನ್ನು ಅಪ್‌ಲೋಡ್ ಮಾಡಿ ಸಬ್ಮಿಟ್ ಮೇಲೆ ಕ್ಲಿಕ್ ಮಾಡಬೇಕು.

* 14 ಅಂಕಿಗಳ ಅಪ್‌ಡೇಟ್ ರಿಕ್ವೆಸ್ಟ್ ನಂಬರ್ ಬರುತ್ತದೆ. ಅದರ ಮೂಲಕ ಅಪ್‌ಡೇಟ್ ಸ್ಟೇಟಸ್ ಯಾವ ಯಾವ ಹಂತದಲ್ಲಿದೆ ಎನ್ನುವುದನ್ನು ಆಗಾಗ ತಿಳಿದುಕೊಳ್ಳಬಹುದು