ಕಾಂಗ್ರೆಸ್ ನಾಯಕರೇ ಕರ್ನಾಟಕ ಗೆಲುವಿನಿಂದ ಮೈಮರೆಯಬೇಡಿ.. ಉದಾಸೀನದಿಂದ ವರ್ತಿಸಬೇಡಿ ಎಂದು ಆ ಪಕ್ಷದ ಹಿರಿಯ ನಾಯಕ ಶಶಿತರೂರ್ ಸಲಹೆ ನೀಡಿದ್ದಾರೆ.
ಒಂದು ರಾಜ್ಯದಲ್ಲಿ ಗೆದ್ದ ಮಾತ್ರಕ್ಕೆ ಇಡೀ ದೇಶವನ್ನೇ ಗೆಲ್ಲುತ್ತೇವೆ ಎಂಬ ಊಹೆಯಲ್ಲಿ ಇರಬೇಡಿ ಎಂದಿದ್ದಾರೆ. ಚುನಾವಣೆಗಳನ್ನು ಆಧರಿಸಿ ಪ್ರಜೆಗಳು ತಮ್ಮ ಅಭಿಪ್ರಾಯಗಳನ್ನು ಬದಲಿಸಿಕೊಳ್ಳುತ್ತಾರೆ ಎನ್ನುತ್ತಾ 2018-19ರ ಪರಿಸ್ಥಿತಿಗಳನ್ನು ಉದಾಹರಿಸಿದ್ದಾರೆ.
2018ರ ಕರ್ನಾಟಕ ಅಸೆಂಬ್ಲಿ ಚುನಾವಣೆಯಲ್ಲಿ ಸೋತ ಬಳಿಕ ಕಾಂಗ್ರೆಸ್ ಪಕ್ಷ ರಾಜಸ್ಥಾನ, ಛತ್ತೀಸ್ಘಡ, ಮಧ್ಯಪ್ರದೇಶ ಚುನಾವಣೆಯಲ್ಲಿ ಗೆಲುವು ಸಾಧಿಸಿತ್ತು.
ಆದರೆ, 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಆಯಾ ರಾಜ್ಯಗಳಲ್ಲಿ ಫಲಿತಾಂಶ ಹೇಗಿತ್ತು..? ಬಿಜೆಪಿ ನಮ್ಮನ್ನು ಸೋಲಿಸಿತ್ತು.
ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಕೇವಲ ಒಂದು ಸ್ಥಾನಕ್ಕೆ ಸೀಮಿತವಾಯಿತು.
ಹೀಗಾಗಿ ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ಜನರ ಅಭಿಪ್ರಾಯ ಒಂದೇ ರೀತಿ ಇರಲ್ಲ. ತಿಂಗಳುಗಳ ಅಂತರದಲ್ಲೇ ಜನ ತಮ್ಮ ನಿರ್ಣಯವನ್ನು ಬದಲಿಸಿಕೊಂಡಿದ್ದರು.
ಈ ಬಾರಿ ಕರ್ನಾಟಕದಲ್ಲಿ ಸಾಧಿಸಿದ ಗೆಲುವಿನಿಂದ ನಮ್ಮ ಮೈಮರೆಯುವುದು ಬೇಡ.. ಅಸೆಂಬ್ಲಿ ಚುನಾವಣೆಯಲ್ಲಿ ನಮ್ಮ ತಂತ್ರಗಳು ಫಲಿಸಿದೆ..
ಅದೇ ರೀತಿ ರಾಷ್ಟ್ರಮಟ್ಟದಲ್ಲೂ ಫಲಿಸುತ್ತವೆ ಎಂದು ಊಹಿಸಬೇಡಿ.. ಎಚ್ಚರಿಕೆಯಿಂದ ಕೆಲಸ ಮಾಡಿ
ಎಂದು ಶಶಿ ತರೂರ್ ಸಲಹೆ ನೀಡಿದ್ದಾರೆ.
ಸ್ಥಳೀಯ ನಾಯಕತ್ವದ ಬಲದಿಂದ ಕರ್ನಾಟಕದಲ್ಲಿ ಕಾಂಗ್ರೆಸ್ ಗೆದ್ದಿದೆ.
ಸ್ಥಳೀಯ ನಾಯಕತ್ವದ ಬಲದಿಂದ ಕರ್ನಾಟಕದಲ್ಲಿ ಕಾಂಗ್ರೆಸ್ ಗೆದ್ದಿದೆ. ಎಐಸಿಸಿ ಅಧ್ಯಕ್ಷ ಖರ್ಗೆ.. ಕರ್ನಾಟಕದವರು.. ರಾಹುಲ್, ಪ್ರಿಯಾಂಕಾ ಕೂಡ ಕರ್ನಾಟಕಕ್ಕೆ ಹೋಗಿ ಪ್ರಚಾರ ಮಾಡಿದರು.. ಈ ಎಲ್ಲಾ ಅಂಶಗಳು ಕಾಂಗ್ರೆಸ್ ಗೆಲುವಿಗೆ ಕಾರಣವಾದವು..
ಆದರೆ, ಭಾರೀ ಗೆಲುವು ದಕ್ಕಿದ್ದು ಮಾತ್ರ ಸ್ಥಳೀಯ ನಾಯಕರಿಂದಲೇ ಎಂದು ಶಶಿತರೂರ್ ಸ್ಪಷ್ಟವಾಗಿ ತಿಳಿಸಿದ್ದಾರೆ.
ಕಾಂಗ್ರೆಸ್ ನಾಯಕರು ಸ್ಥಳೀಯ ಸಮಸ್ಯೆಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿ ಪ್ರಚಾರ ಮಾಡಿದರು.. ಆದರೆ, ಬಿಜೆಪಿ ರಾಷ್ಟ್ರೀಯ ವಿಚಾರಗಳನ್ನು ಮುಂದಿಟ್ಟುಕೊಂಡು ಮತ ಯಾಚಿಸಿತು.. ಇದು ಬಿಜೆಪಿ ಕೈ ಹಿಡಿಯಲಿಲ್ಲ.
ಆದರೆ, ಲೋಕಸಭೆ ಚುನಾವಣೆಯಲ್ಲಿ ಹಾಗೆ ಆಗುವುದಿಲ್ಲ. ಜನರ ಅಭಿಪ್ರಾಯಗಳು, ಆದ್ಯತೆಗಳು ರಾಷ್ಟ್ರಮಟ್ಟದಲ್ಲೇ ಇರುತ್ತವೆ ಎಂದು ಶಶಿ ತರೂರ್ ವಿವರಿಸಿದ್ದಾರೆ.
ADVERTISEMENT
ADVERTISEMENT