ವಿವಿಧ ಪೋಸ್ಟರ್ ಗಳಿಂದ ಕುತೂಹಲಗಳೊಂದಿಗೆ ಸುದ್ದಿಯಾಗಿರುವ ಕಿರುಚಿತ್ರವೊಂದು ಸದ್ಯದಲ್ಲೇ ಕನ್ನಡದ ಜನಪ್ರಿಯ app ನಲ್ಲಿ ಬಿಡುಗಡೆಯಾಗುತ್ತಿದೆ.
ಕನ್ನಡದ ಖ್ಯಾತ ಚಲನಚಿತ್ರ ನಟಿ ಚೈತ್ರ ರಾವ್ ಅವರಿಂದ “ಎಲ್ಲಾರು ಮಾಡುವುದು ಹೊಟ್ಟೆಗಾಗಿ” ಎಂಬ ಕಿರುಚಿತ್ರದ ಟ್ರೈಲರ್ ಬಿಡುಗಡೆಯ ದಿನಾಂಕ ನಿಗದಿಯಾಗಿದ್ದು , ಜನವರಿ 27 ರ ಬೆಳಿಗ್ಗೆ 10:10 ಕ್ಕೆ ಟಾಕೀಸ್ ಕನ್ನಡ ಯೌಟ್ಯೂಬ್ ಚಾನೆಲ್’ನಲ್ಲಿ ಬಿಡುಗಡೆಯಾಗಲಿದೆ .
ರಕ್ಷಿತ್ ಚಿನ್ನು’ರವರ ಚೊಚ್ಚಲ ನಿರ್ದೇಶನದ ಬಳಗದಲ್ಲಿ, ತುಳು ಚಿತ್ರರಂಗದ ಖ್ಯಾತ ನಿರ್ದೇಶಕ ಕೆ.ಸೂರಜ್ ಶೆಟ್ಟಿಯವರು ಕಥೆ ಸಂಭಾಷಣೆ ಜೊತೆಗೆ ಪ್ರಥಮ ಬಾರಿಗೆ ಮುಖ್ಯಪಾತ್ರದಲ್ಲಿ ನಟಿಸಿದ್ದು , RJ ತ್ರಿಶೂಲ್, ರಾಘವ ಸೂರಿ , ಮಧುರ ಆರ್ ಜೆ ಯವರನ್ನೊಳಗೊಂಡ ಯುವ ತಾರಾಗಣ ಈ ಚಿತ್ರದಲ್ಲಿ ಪ್ರಮುಖ ಗಮನ ಸೆಳೆದಿದೆ.
ಶ್ರೀ ಜೆ ಬಂಗೇರ ಕ್ಯಾಮರಾ ಕೈ ಚಳಕವಿದ್ದು ,ಪ್ರಸಾದ್ ಕೆ ಶೆಟ್ಟಿ ಯವರು ಸಂಗೀತ ನೀಡಿದ್ದಾರೆ, ಒಟ್ಟಾರೆಯಾಗಿ ವಿಕ್ರಂ ರಾವ್’ರವರ vr films ನ ಬ್ಯಾನರ್ ನಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರ ಹಲವಾರು ಕುತೂಹಲ, ತಿರುವುಗಳೊಂದಿಗೆ ಅತೀ ಶೀಘ್ರದಲ್ಲಿ ನಿಮ್ಮ ನೆಚ್ಚಿನ ಟಾಕೀಸ್ app ನಲ್ಲಿ ಬಿಡುಗಡೆಗೊಳ್ಳಲಿದೆ.