ಸುಶ್ಮಿತಾ ಸೇನ್ ಹಾಡಿಗೆ ಬೀದಿಯಲ್ಲೇ ಸಕ್ಕತ್ ಸ್ಟೆಪ್ ಹಾಕಿದ ಮಹಿಳೆ. ವೀಡಿಯೋ ವೈರಲ್..!

ಇತ್ತೀಚೆಗೆ ರೀಲ್ಸ್ ಗಳನ್ನು ಮಾಡಿ ಬಹಳಷ್ಟು ಮಂದಿ ಜನಪ್ರೀಯತೆ ಪಡೆಯುತ್ತಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮದೇ ರೀತಿಯಲ್ಲಿ ಹಾಡುವುದು, ನೃತ್ಯ ಮಾಡುವುದು ಹೀಗೆ ಏನೇನೋ ಮಾಡಿ ಜನರ ಮೆಚ್ಚುಗೆ ಗಳಿಸುತ್ತಿದ್ದಾರೆ. ಇಲ್ಲೊಬ್ಬಳು ಬೀದಿಯಲ್ಲಿ ಸುಶ್ಮಿತಾ ಸೇನ್ ಅಭಿನಯದ ದಿಲ್ಬರ್ ಹಾಡಿಗೆ ಸ್ಟೆಪ್ ಹಾಕಿದ್ದಾಳೆ. ಆದರೆ ಈ ವೀಡಿಯೋ ವೈರಲ್ ಆಗಿದ್ದು ಆ ಮಹಿಳೆಯ ನೃತ್ಯಕ್ಕಾಗಿ ಅಲ್ಲ. ಮತ್ತೆ ಏಕೆ ಗೊತ್ತಾ? ಈ ಸ್ಟೋರಿ ಓದಿ.

 

ಮಹಿಳೆ ತನ್ನಪಾಡಿಗೆ ತಾನು ನೃತ್ಯ ಮಾಡುತ್ತಿದ್ದಾಗ ಸಡನ್ ಆಗಿ ಒಬ್ಬ ಪುರುಷ  ಎಂಟ್ರಿ ಕೊಟ್ಟು ಮಹಿಳೆಯನ್ನೇ ಅನುಕರಣೆ ಮಾಡುದ್ದು ಸಕ್ಕತ್ ಮಜವಾಗಿದ್ದು ವೈರಲ್ ಆಗಿದೆ. ಟ್ವಿಟರ್ ನಲ್ಲಿ ಶೇರ್ ಮಾಡಲಾದ ಈ ವೀಡಿಯೋವನ್ನು ಈಗಾಗಲೇ 250 ಸಾವಿರಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದು ಪರ ವಿರೋಧದ ಕಮೆಂಟ್ ಗಳು ಬಂದಿವೆ.