BBK9 – ಈ ವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆದ ಕಂಟೆಸ್ಟೆಂಟ್ ಯಾರು ಗೊತ್ತಾ?

ಬಿಗ್ ಬಾಸ್ ಕನ್ನಡ ಸೀಸನ್ 9ರ (BBK9)ಎರಡನೇ ವಾರದ ಎಲಿಮಿನೇಷನ್ (Second week elimination complete) ಪ್ರಕ್ರಿಯೆ ಮುಗಿದಿದೆ. ಪ್ರತಿಕ್ಷಣ ನ್ಯೂಸ್ ಗೆ ಲಭ್ಯವಾದ ಖಚಿತ ಮಾಹಿತಿ ಪ್ರಕಾರ ಈ ವಾರ ಬಿಗ್ ಬಾಸ್ ಮನೆಯಿಂದ ನವಾಜ್ ಎಲಿಮಿನೇಟ್ ಆಗಿದ್ದಾರೆ. (Second week eliminater Nawaz )

ಮೊದಲ  ವಾರಕ್ಕಿಂತ ಈ ವಾರ ನವಾಜ್ ಆಟ ಸುಧಾರಿಸಿತ್ತು. ಎಲ್ಲರ ಜೊತೆ ಹೊಂದಿಕೊಂಡು, ನಗಿಸುತ್ತಾ ಕಾಣಿಸುತ್ತಿದ್ದ ನವಾಜ್ ಎರಡನೇ ವಾರವೇ ಬಿಗ್ ಬಾಸ್ ಮನೆಯಿಂದ ಹೊರಬೀಳಲ್ಲ ಎಂದೇ ನವಾಜ್ ಅಭಿಮಾನಿಗಳು (Nawaz fans)ಭಾವಿಸಿದ್ದರು. ಆದರೆ, ವೂಟ್ ವೋಟಿಂಗ್ ನಲ್ಲಿ ನವಾಜ್ ಗೆ ಕಡಿಮೆ  ಮತ ಬಂದ ಕಾರಣ, ಅವರನ್ನೇ ಈ ವಾರ ಎಲಿಮಿನೇಟ್ ಮಾಡಲಾಗಿದೆ ಎಂದು ಹೇಳಲಾಗಿದೆ.

ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಕೊನೆಯದಾಗಿ ರೂಪೇಶ್ ರಾಜಣ್ಣ ಮತ್ತು ನವಾಜ್ (Rupesh Rajanna V/S Nawaz) ಉಳಿದುಕೊಂಡಿದ್ದರು ಎನ್ನಲಾಗಿದ್ದು, ಹೌಸ್ ನಲ್ಲಿರುವ ಎಲ್ಲಾ ಕಾಂಟೆಸ್ಟೆಂಟ್ ಗಳು ನವಾಜ್ ಸೇಫ್ ಆಗುತ್ತಾನೆ ಎಂದೇ ಹೇಳಿದರು ಎನ್ನಲಾಗಿದೆ. ಆದರೆ, ಅಂತಿಮವಾಗಿ  ನವಾಜ್ ಮನೆಯಿಂದ ಔಟ್ ಆಗಿದ್ದಾರೆ ಎಂಬುದು ಪ್ರತಿಕ್ಷಣ ನ್ಯೂಸ್ ಗೆ ಲಭ್ಯವಾದ ಮಾಹಿತಿ.

ಈ ಎರಡು ವಾರದಲ್ಲಿ ನವಾಜ್ ಸಾಕಷ್ಟು ವಿಚಾರಗಳನ್ನು ಸಹ ಕಾಂಟೆಸ್ಟೆಂಟ್ ಗಳಿಂದ (BigBoss Cintestent ) ಕಲಿತಿದ್ದಾರೆ. ಅದರಲ್ಲೂ ಅರುಣ್ ಸಾಗರ್ (Arun Sagar)ಪ್ರಭಾವ ತುಸು ಜಾಸ್ತಿ ಎನ್ನುವಷ್ಟರ ಮಟ್ಟಿಗೆ ನವಾಜ್ ಮೇಲೆ ಆಗಿದೆ.

ಮೊದಲ ವಾರ ರೈಡರ್ ಐಶ್ವರ್ಯ ಪಿಸೆ ಮೊದಲಿಗರಾಗಿ ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದರು.

LEAVE A REPLY

Please enter your comment!
Please enter your name here