ಮಂಗಳ ಮುಖಿಯಾದ ಮಾಜಿ ವಿಶ್ವ ಸುಂದರಿ; ತಮ್ಮ ಇನ್ಸ್ಟಾಗ್ರಾಂ ನಲ್ಲಿ ಫೋಟೋ ಹರಿಬಿಟ್ಟ ಸುಶ್ಮಿತಾ ಸೇನ್

ಸುಶ್ಮಿತಾ ಸೇನ್ ಯಾರಿಗೆ ತಾನೇ ಗೊತ್ತಿಲ್ಲ? ವಿಶ್ವಸುಂದರಿ ಪಟ್ಟ ಮುಡಿಗೇರಿಸಿಕೊಳ್ಳುವುದರ ಜೊತೆ ತಮ್ಮ ಅದ್ಭುತ ನಟನೆಯಿಂದ ಎಲ್ಲರ ಮನಸ್ಸಲ್ಲಿ ತಮ್ಮ ಛಾಪು ಮೂಡಿಸಿದವರು.

ಈಗ ಇವರು ಮಂಗಳಮುಖಿಯಾಗಿ ನಮ್ಮೆದುರು ನಿಂತಿದ್ದಾರೆ. ಇದೇನಪ್ಪಾ… ಅಂತ ಯೋಚನೆ ಮಾಡ್ತಾ ಇದೀರಾ? ಹೌದು ಮಂಗಳಮುಖಿ ಕಾರ್ಯಕರ್ತೆ ಗೌರಿ ಸಾವಂತ್ ಜೀವನವನ್ನು ಆಧರಿಸಿದ ” ತಾಲಿ” ಎಂಬ ವೆಬ್ ಸೀರಿಸ್ ನಲ್ಲಿ ಸುಶ್ಮಿತಾ ಗೌರಿ ಸಾವಂತ್ ಪಾತ್ರ ನಿರ್ವಹಿಸುತ್ತಿದ್ದು ಮೊನ್ನೆ ಅದರ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದಾರೆ.

ಇದರಲ್ಲಿ ಅಡೆತಡೆಗಳನ್ನು ಮೀರಿದ ದೈರ್ಯಶಾಲಿ ವ್ಯಕ್ತಿಯಾಗಿ ಸೇನೆ ಕಂಡು ಬಂದಿದ್ದಾರೆ. ಸವಾಲುಗಳಿಂದ ಕೂಡಿದ ಈ ಪಾತ್ರ ನನಗೆ ಹೆಮ್ಮೆ ಇದೆ ಎಂದು ಅವರು ತಮ್ಮ ಇನ್ಸ್ಟಾಗ್ರಾಂ ನಲ್ಲಿ ಬರೆದುಕೊಂಡಿದ್ದಾರೆ.