Aadhaar: ಆಧಾರ್-ಪ್ಯಾನ್ ಲಿಂಕ್ ಮಾಡದಿದ್ದರೆ ಏನಾಗುತ್ತೆ ಗೊತ್ತಾ?

ಪ್ಯಾನ್‌ಕಾರ್ಡ್ ಜೊತೆಗೆ ಆಧಾರ್ ಅನುಸಂಧಾನ ಮಾಡಿಕೊಳ್ಳಲು ಕೇಂದ್ರ ಸರ್ಕಾರ ಕೊಟ್ಟಿದ್ದ ಗಡುವು ಮುಗಿದಿದೆ.

ಆಧಾರ್ ಲಿಂಕ್ ಆಗದ ಪ್ಯಾನ್‌ಕಾರ್ಡ್ ಕೆಲಸಕ್ಕೆ ಬರಲ್ಲ.. ಪ್ಯಾನ್ ಕಾರ್ಡ್ ನೆರವಿಲ್ಲದೇ ಹಲವು ಕೆಲಸಗಳನ್ನು ಮಾಡಲು ಆಗಲ್ಲ.

ಅವು ಏನು ಎಂಬುದನ್ನು ನೋಡೋಣ.

– ಬ್ಯಾಂಕ್ ಮತ್ತು ಇತರೆ ಹಣಕಾಸು ಸಂಸ್ಥೆಗಳ ಜೊತೆ ಏಕಕಾಲದಲ್ಲಿ 50ಸಾವಿರ ಮೀರಿ ಲೇವಾದೇವಿ ಮಾಡಲು ಆಗಲ್ಲ.

– ಬೇಸಿಕ್ ಸೇವಿಂಗ್ ಅಕೌಂಡ್, ಟೈಂ ಡಿಪಾಸಿಟ್ ಖಾತೆ ಹೊರತುಪಡಿಸಿ ಇತರೆ ಬ್ಯಾಂಕ್ ಖಾತೆ ತೆರಯಲು ಆಗಲ್ಲ.

– ಹೊಸದಾಗಿ ಕ್ರೆಡಿಟ್ ಇಲ್ಲವೇ ಡೆಬಿಟ್ ಕಾರ್ಡ್ ಹೊಂದಲು ಸಾಧ್ಯವಿಲ್ಲ.

– ಸ್ಟಾಕ್ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡಲು ಡಿಮ್ಯಾಟ್ ಖಾತೆ ತೆರಯಲು ಸಾಧ್ಯವಾಗಲ್ಲ.

– ದ್ವಿಚಕ್ರ ವಾಹನವನ್ನು ಖರೀದಿ ಮಾಡಿದರೂ, ಮಾರಾಟ ಮಾಡಿದರೂ ದೊಡ್ಡ ಮಟ್ಟದಲ್ಲಿ ಟ್ಯಾಕ್ಸ್ ಕಟ್ಟಬೇಕಾಗುತ್ತದೆ.

– 10 ಲಕ್ಷ ಮೌಲ್ಯವನ್ನು ಮೀರಿದ ಸ್ಥಿರಾಸ್ತಿಗಳನ್ನು ಮಾರಾಟ ಮಾಡಿದರೂ ದೊಡ್ಡ ಮಟ್ಟದಲ್ಲಿ ತೆರಿಗೆ ವಸೂಲಿ ಮಾಡುತ್ತಾರೆ.

– ವಾಹನ,ಸ್ಥಿರಾಸ್ತಿ ಅಲ್ಲದೇ ಉಳಿದ ಯಾವುದೇ ವಸ್ತು ಖರೀದಿ ಮೌಲ್ಯ 2 ಲಕ್ಷ ದಾಟಿದಲ್ಲಿ ತೆರಿಗೆ ಭಾರ ಹೆಚ್ಚಿರುತ್ತದೆ.

– ಪ್ಯಾನ್ ಜೊತೆ ಆಧಾರ್ ಲಿಂಕ್ ಮಾಡದವರಿಗೆ ಈಗಲೂ ಅವಕಾಶವಿದೆ.

– 1000 ರೂಪಾಯಿ ದಂಡ ಕಟ್ಟಿ ಅಧಾರ್ ಅಧಿಕಾರಿಗಳಿಗೆ ಮಾಹಿತಿ ನೀಡಿದಲ್ಲಿ 30 ದಿನಗಳ ಬಳಿಕ ಪ್ಯಾನ್ ಕಾರ್ಡ್ ಮರುಸ್ಥಾಪನೆ ಮಾಡುತ್ತಾರೆ.

LEAVE A REPLY

Please enter your comment!
Please enter your name here