ಬಾಲಿವುಡ್ ಇಂಡಸ್ಟ್ರಿಗೆ ಜಿಗಿಲಯ ಎಲ್ಲರೂ ಕಾತರದಿಂದ ಕಾಯ್ತಾ ಇರ್ತಾರೆ. ಆದರೆ, ನಮ್ಮ ರಾಕಿ ಭಾಯ್ ಯಶ್ ಇದಕ್ಕೆ ಡಿಫರೆಂಟ್. ಯೆಸ್, ಪ್ರತಿಕ್ಷಣ ನ್ಯೂಸ್ಗೆ ಲಭ್ಯವಾದ ಮಾಹಿತಿ ಪ್ರಕಾರ ರಾಕಿಂಗ್ ಸ್ಟಾರ್ ಯಶ್ ಬಾಲಿವುಡ್ನ ಬಿಗ್ ಆಫರ್ ಅನ್ನು ತಿರಸ್ಕರಿಸಿದ್ದಾರೆ.
ಬಾಲಿವುಡ್ ನಿರ್ದೇಶಕ ನಿತೀಶ್ ತಿವಾರಿ ರಾಮಾಯಣ್ ಪ್ರಾಜೆಕ್ಟ್ ರೂಪಿಸೋದ್ರಲ್ಲಿ ಫುಲ್ ಮುಳುಗಿಬಿಟ್ಟಿದ್ದಾರೆ. ರಣಬೀರ್ ಕಪೂರ್, ಆಲಿಯಾ ಭಟ್, ಯಶ್ ಪ್ರಧಾನಪಾತ್ರಗಳನ್ನು ಮಾಡುತ್ತಾರೆ ಎಂಬ ಸುದ್ದಿ ಹರಿದಾಡುತ್ತಿತ್ತು.
ಸದ್ಯದ ಸಮಾಚಾರದ ಪ್ರಕಾರ, ಯಶ್ ಈ ಪ್ರಾಜೆಕ್ಟ್ನಿಂದ ಹಿಂದೆ ಸರಿದಿದ್ದಾರೆ.. ಈ ಬಿಗ್ ಆಫರ್ ತಿರಸ್ಕರಿಸಿದ್ದಾರೆ ಎನ್ನಲಾಗಿದೆ.
ವೃತ್ತಿರೀತ್ಯ ಯಶ್ ಈಗ ಟಾಪ್ ರೇಂಜ್ನಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ತಾನು ರಾವಣನ ಪಾತ್ರ ಮಾಡಿದರೇ ಸರಿ ಹೋಗಲ್ಲ ಎಂದು ಭಾವಿಸಿದ ಯಶ್, ಈ ಪ್ರಾಜೆಕ್ಟ್ ಅನ್ನು ರಿಜೆಕ್ಟ್ ಮಾಡಿದ್ದಾರೆ.
ರಾವಣಾಸುರನ ಪಾತ್ರ ಮಾಡಲು ತಾನು ಸುಮುಖವಾಗಿಲ್ಲ ಎಂದು ನಿತೀಶ್ ತಿವಾರಿ ಟೀಂಗೆ ನಟ ಯಶ್ ಸ್ಪಷ್ಟವಾಗಿ ಹೇಳಿದ್ದಾರೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಯಶ್ ಟೀಂ ಅಧಿಕೃತವಾಗಿ ಮಾಹಿತಿ ಪ್ರಕಟಿಸಿಲ್ಲ
ADVERTISEMENT
ADVERTISEMENT