ADVERTISEMENT
ಮದ್ಯದ ಅಮಲಿನಲ್ಲಿದ್ದಾಗ ಕೆಲವರಿಗೆ ತಾವೇನು ಮಾಡುತ್ತೇವೆ.. ಎನ್ನುವುದೇ ಗೊತ್ತಾಗಲ್ಲ ನೋಡಿ. ಅಮಲು ಇಳಿದ ಮೇಲೆ ತಾನೇನು ಮಾಡಿದ್ದೇನೆ ಎಂಬುದು ಅರಿವಿಗೆ ಬರುತ್ತದೆ. ದೆಹಲಿಯ ಅಮಿತ್ ಪ್ರಕಾಶ್ ವಿಚಾರದಲ್ಲೂ ಅದೇ ಆಗಿದೆ ನೋಡಿ.
ಅಮಿತ್ ಪ್ರಕಾಶ್.. ಗುಡಗಾಂವ್ನ ಕಾರ್ಪೊರೇಟ್ ಕಂಪನಿಯ ಉದ್ಯೋಗಿ. ಶುಕ್ರವಾರ ಡ್ಯೂಟಿ ಮುಗಿದ ಬೆನ್ನಲ್ಲೇ ತನ್ನ ಕಾರನಲ್ಲಿಯೇ ಮದ್ಯಸೇವನೆ ಮಾಡಿದ್ದ..
ಅದು ಮುಗಿದ ಮೇಲೆ ಇನ್ನೊಂದು ರೌಂಡ್ ಎಣ್ಣೆ ತಗೋಬೇಕು ಅಂತಾ ಮದ್ಯದಂಗಡಿಗೆ ಹೋದ..
ವೈನ್ ಬಾಟಲ್ಗೆ 2000 ಪೇಮೆಂಟ್ ಮಾಡುವ ಬದಲು 20000 ರೂಪಾಯಿ ಡಿಜಿಟಲ್ ಪೇಮೆಂಟ್ ಮಾಡಿದ.. ಈಯಪ್ಪ ಇಷ್ಟೇಕೆ ಕೊಟ್ಟ ಎಂದು ಮದ್ಯದಂಗಡಿಯವನು ಬೈಯ್ಕೊಂಡು, 18,000 ಕ್ಯಾಶ್ ಕೊಟ್ಟು ಕಳಿಸಿದ.
ಅಮಿತ್ ಪ್ರಕಾಶ್ ರೋಡ್ ಸೈಡ್ ಕಾರ್ ಪಾರ್ಕ್ ಮಾಡಿ ಮದ್ಯ ಸಮಾರಾಧನೆ ಶುರು ಮಾಡಿದ..
ಇದನ್ನು ಗಮನಿಸಿದ ಚಾಲಾಕಿಯೊಬ್ಬ, ನಾನು ವೀಕೆಂಡ್ ಪಾರ್ಟಿಯಲ್ಲಿ ಪಾಲ್ಗೊಳ್ಳಬಹುದೇ ಎಂದು ಕೇಳಿದ..
ಹೇಗೂ ಮಾತಿಗೆ ಒಬ್ಬರು ಬೇಕಲ್ಲ ಎಂದು ಅನಾಮಿಕನನ್ನು ಕಾರಲ್ಲಿಯೇ ಕೂರಿಸಿಕೊಂಡ.. ಇಬ್ಬರು ಎಣ್ಣೆ ಪಾರ್ಟಿ ಮಾಡಿದರು..
ಪಾರ್ಟಿ ಮಾಡುವಾಗಲೇ ತನ್ನನ್ನು ಸುಭಾಷ್ ಚೌಕ್ನಲ್ಲಿ ಬಿಡು ಎಂದು ಆತ ಕೇಳಿಕೊಂಡ.. ಆದರೆ, ಮಾರ್ಗಮಧ್ಯೆ, ಏಯ್ ಕಾರಿಂದ ಇಳಿಯೋ ಎಂದು ಅಮಿತ್ ಪ್ರಕಾಶ್ನನ್ನು ಎಂದು ಕೆಳಗಿಳಿಸಿದ..
ಈ ಅಮಿತ್ ಪ್ರಕಾಶೋ.. ಈ ಕಾರು ತನ್ನದು ಎಂದು ಮರೆತು ಕಾರಿಂದ ಇಳಿದುಬಿಟ್ಟ ಅಷ್ಟೇ..
ಆ ಅನಾಮಿಕ ಕಾರು. ಲ್ಯಾಪ್ಟಾಪ್, ಮೊಬೈಲ್, 18 ಸಾವಿರ ಕ್ಯಾಶ್ ಸಮೇತ ಉಡಾಯಿಸಿಬಿಟ್ಟ..
ಸ್ವಲ್ಪ ಅಮಲು ಇಳಿದ ಮೇಲೆ ಅಮಿತ್ ಪ್ರಕಾಶ್ ತಾನು ಎಲ್ಲವನ್ನು ಕಳೆದುಕೊಂಡಿರುವುದು ಅರಿವಿಗೆ ಬಂತು..
ಈಗ ಪೊಲೀಸರ ಮೊರೆ ಹೋಗಿದ್ದಾನೆ ಅಮಿತ್ ಪ್ರಕಾಶ್
ADVERTISEMENT