Arikomban: ಅಕ್ಕಿ ತಿನ್ನುವ ಆನೆಯ ಕಣ್ಣೀರ ಕತೆಯಿದು

ಒಂದು ತಿಂಗಳಲ್ಲಿಯೇ  ಎರಡು ಬಾರಿ ಬಂಧಿಸಿದರು. ಹಲವು ಬಾರಿ ಅರವಳಿಕೆ ಮದ್ದು ನೀಡಿದರು.. ಆಹಾರಕ್ಕೆ ಮನೆಗಳಿಗೆ ನುಗ್ಗಬಾರದೆಂದು ಅದರ ಸ್ವಂತ ತಾಣದಿಂದ 280 ಕಿಲೋಮೀಟರ್ ದೂರಕ್ಕೆ ಶಿಫ್ಟ್ ಮಾಡಿದರು.. ಇದು ಅರಿಕೊಂಬನ್ ಎಂಬ ಆನೆಯ ಕಣ್ಣೀರ ಕತೆ.

ಅರಿಕೊಂಬನ್ ಎಂದರೇ ಮಲಯಾಳಂನಲ್ಲಿ ಅಕ್ಕಿತಿನ್ನುವ ಆನೆ ಎಂಬ ಅರ್ಥವಿದೆ. ಅಕ್ಕಿ ತಿನ್ನಲು ಸ್ಥಳೀಯ ಅಂಗಡಿ ಮನೆಗಳಿಗೆ ಆನೆ ನುಗ್ಗುವ ಕಾರಣಕ್ಕೆ ಈ ಆನೆಗೆ ಅರಿಕೊಂಬನ್ ಎಂಬ ಹೆಸರು ನೀಡಲಾಗಿದೆ.

ಕೇರಳ, ತಮಿಳುನಾಡು ನಡುವೆ ಸಂಚರಿಸುತ್ತಿರುವ ಆನೆಗೆ ಶಾಶ್ವತತಾಣವನ್ನು ಹುಡುಕಿಕೊಡಲು ಅಧಿಕಾರಿಗಳು ನಾನಾ ಕಸರತ್ತನ್ನು ಮಾಡುತ್ತಿದ್ದಾರೆ. ವನ್ಯಜೀವಿಗಳ ಹಕ್ಕುಗಳ ಮೇಲಿನ ಚರ್ಚೆ, ಕೋರ್ಟ್ ಹೋರಾಟಗಳಿಗೆ ಈ ಆನೆ ಕೇಂದ್ರಬಿಂದುವಾಗಿ ಮಾರ್ಪಟ್ಟಿದೆ.

ಕೇರಳದಲ್ಲಿ ಅರಿಕೊಂಬನ್ ಆನೆಯನ್ನು ಅನ್ಯಾಯದ ವಿರುದ್ಧ ಹೋರಾಟಕ್ಕೆ ಚಿನ್ಹೆಯನ್ನಾಗಿ ಪರಿಗಣಿಸಲಾಗುತ್ತಿದೆ. ಒಂದು ಆನೆಯನ್ನು ಸ್ವಂತ ಮನೆಯಿಂದ ಮತ್ತೊಂದು ಪ್ರದೇಶಕ್ಕೆ ಶಿಫ್ಟ್ ಮಾಡುವುದು ಎಷ್ಟು ಕ್ರೂರ ಎಂಬುದು ಈ ಬೆಳವಣಿಗೆಯನ್ನು ನೋಡಿದರೇ ಅರ್ಥ ಆಗುತ್ತದೆ.

ಇಡುಕ್ಕಿ ಜೊಲ್ಲೆಯ ಚಿನ್ನ ಕನಲ್ ಅರಣ್ಯ ಪ್ರದೇಶದಲ್ಲಿ ಅರಿಕೊಂಬನ್ ತಿರುಗುತ್ತಿತ್ತು.. ಯಾವಾಗಲು ಮನೆ,  ಅಂಗಡಿಗಳಿಗೆ ಲಗ್ಗೆ ಹಾಕಿ ಅಕ್ಕಿಯನ್ನು ತಿನ್ನುತ್ತಿತ್ತು.

ಇದನ್ನು ತಡೆಯಬೇಕೆಂದು ಸ್ಥಳೀಯರು ಪ್ರತಿಭಟನೆ ನಡೆಸಿದ್ರು. ಅರಿಕೊಂಬನ್ ಹಿಡಿದಯ ಅದಕ್ಕೆ ತರಬೇತಿ ನೀಡೋದಾಗಿ ಆಗ ಅರಣ್ಯ ಇಲಾಖೆ ಹೇಳಿತ್ತು. ಈ ಆನೆಯನ್ನು ಕಾಪಾಡಲು ಪ್ರಾಣಿಪ್ರಿಯರು ಹೋರಾಟ ನಡೆಸಿದರು. ಹೈಕೋರ್ಟ್ ಮೊರೆ ಹೋದರು.

ಈ ಆನೆಯನ್ನು ಇಲ್ಲಿಂದ ಬೇರೆಗೆ ಶಿಫ್ಟ್ ಮಾಡೋದು ಒಳಿತು ಎಂದು ಕೋರ್ಟ್ ನೇಮಿಸಿದ ತಜ್ಞರ ಸಮಿತಿ ಅಭಿಪ್ರಾಯಪಟ್ಟಿತ್ತು.

ನಂತರ ಈ ಆನೆಯನ್ನು ಸೆರೆ ಹಿಡಿಯಲು ಭಾರೀ ಕಾರ್ಯಾಚರಣೆ ನಡೆಯಿತು. ಏಪ್ರಿಲ್ 29ಕ್ಕೆ ಆನೆಯನ್ನು ಹಿಡಿದು 80 ಕಿಲೋಮೀಟರ್ ದೂರದ ಪೆರಿಯಾರ್ ಹುಲಿ ಸಂರಕ್ಷಿತಾರಣ್ಯಕ್ಕೆ ಶಿಫ್ಟ್ ಮಾಡಿತ್ತು.

ಆದರೆ, ತಿಂಗಳ ಅಂತರದಲ್ಲಿಯೇ ಮತ್ತೊಮ್ಮೆ ಅರಿಕೊಂಬನ್ ಹಿಡಿಯಲು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಬೇಕಾಯಿತು.

ಮೇ 27ರಂದು ತಮಿಳುನಾಡಿನ ಕಂಬಂ ಬಳಿ ಅರಿಕೊಂಬನ್ ಕಾಣಿಸಿಕೊಂಡಿತು. ಜನನಿಭಿಡ ಪಟ್ಟಣದಲ್ಲಿ ಕಟ್ಟಡ, ವಾಹನಗಳನ್ನು ಧ್ವಂಸ ಮಾಡಿತು.. ಮೂವರು ಗಾಯಗೊಂಡರು. ಇವರಲ್ಲೊಬ್ಬರು ಎರಡು ದಿನಗಳ ನಂತರ ಮೃತಪಟ್ಟರು. ಅರಿಕೊಂಬನ್ ಆನೆಯನ್ನು ಹಿಡಿಯಲು ಅಧಿಕಾರಿಗಳು ಕಂಬಂನಲ್ಲಿ ಕರ್ಫ್ಯೂ ವಿಧಿಸಬೇಕಾಯಿತು.

ಕಂಬಂ ಘಟನಾವಳಿ ಪರಿಶೀಲಿಸಿದರೇ, ಅರಿಕೊಂಬನ್‌ನಿಂದ ಮನುಷ್ಯರಿಗೆ ಯಾವುದೇ ತೊಂದರೇ ಇಲ್ಲ ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಆ ಆನೆ ಭಯದ ಕಾರಣ.. ಹೀಗೆ ವರ್ತಿಸಿದೆ ಅಷ್ಟೇ.. ಯಾರ ಮೇಲೆಯೂ ದಾಳಿ ನಡೆಸಿಲ್ಲ ಎಂದು ಪ್ರಾಣಿ ಪ್ರಿಯರು ಹೇಳುತ್ತಾರೆ.

ಜೂನ್ 5ರಂದು ತಮಿಳುನಾಡು ಅರಣ್ಯ ಇಲಾಖೆ ಸಿಬ್ಬಂದಿ ಮತ್ತೊಮ್ಮೆ ಅರಿಕೊಂಬನ್‌ಗೆ ಅರವಳಿಕೆ ನೀಡಿ ಸೆರೆ ಹಿಡಿದರು.

ಮತ್ತೆ ಮತ್ತೆ ಆನೆಗೆ ಅರವಳಿಕೆ ಮದ್ದು ನೀಡುವುದು.. ಟ್ರಕ್‌ನಲ್ಲಿ ಸಾಗಿಸುವ ವೇಳೆ ಗಾಯಗಳು ಆಗುತ್ತಿರುವ ಬಗ್ಗೆ ಪ್ರಾಣಿಪ್ರಿಯರು ಆತಂಕ ವ್ಯಕ್ತಪಡಿಸುತ್ತಾರೆ.

ಆನೆ ಸಂಚರಿಸುವ ಮಾರ್ಗದಲ್ಲಿ ಮನುಷ್ಯರು ಆವಾಸ ಸ್ಥಾನಗಳನ್ನು ಮಾಡಿಕೊಳ್ಳಲು ಸರ್ಕಾರ ತೆಗೆದುಕೊಂಡ ನಿರ್ಣಯಗಳಿಗೆ ಅರಿಕೊಂಬನ್ ಮೌಲ್ಯ ಸಲ್ಲಿಸುತ್ತಿದೆ ಎನ್ನುತ್ತಾರೆ ವನ್ಯಜೀವಿ ಹಕ್ಕುಗಳ ಹೋರಾಟಗಾರರು..

ಸದ್ಯ ಅರಿಕೊಂಬನ್ ಆನೆಯನ್ನು ಕಂಬಂನಿಂದ 200 ಕಿಲೋಮೀಟರ್ ದೂರದಲ್ಲಿರುವ ಕಲ್ಲಕಡ್ ಮುಂದಾಂಥುರೈ ಟೈಗರ್ ರಿಸರ್ವ್‌ಗೆ  ಶಿಫ್ಟ್ ಮಾಡಲಾಗಿದೆ.

ಈಗ ಇದನ್ನು ಬೇರೆ ಕಡೆ ಶಿಫ್ಟ್ ಮಾಡಿ ಎಂದು ಅಲ್ಲಿನ ಸ್ಥಳೀಯರು ಪ್ರತಿಭಟನೆ ಶುರು ಮಾಡಿಕೊಂಡಿದ್ದಾರೆ.