ತಿಪಟೂರಲ್ಲಿ ಭೂಕುಸಿತ: ರೈಲು ಸಂಚಾರ ವ್ಯತ್ಯಯ

ತುಮಕೂರು ಜಿಲ್ಲೆಯ ತಿಪಟೂರಲ್ಲಿ ಭೂ ಕುಸಿತದ ಕಾರಣದಿಂದ ಹಲವು ರೈಲುಗಳ ಸಂಚಾರಕ್ಕೆ ಅಡಚಣೆ ಉಂಟಾಗಿದೆ.

ಧಾರಾಕಾರ ಮಳೆ ಹಿನ್ನೆಲೆಯಲ್ಲಿ ತಿಪಟೂರಿನಲ್ಲಿ ರೈಲು ಕೆಳಸೇತುವೆ ಬಳಿ ಭೂಕುಸಿತವಾಗಿದೆ.

ಹೀಗಾಗಿ ನಿಜಾಮುದ್ದಿನ್​ ಎಕ್ಸ್​ಪ್ರೆಸ್​ ರೈಲು ಸೇರಿದಂತೆ ಹಲವು ರೈಲುಗಳ ಓಡಾಟ ವ್ಯತ್ಯಯವಾಗಿದೆ. ದುರಸ್ತಿ ಕಾರ್ಯ ಸಾಗುತ್ತಿದೆ.