ಗುಜರಾತ್ ಮೂಲದ ಉದ್ಯಮಿ ಗೌತಮ್ ಅದಾನಿ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಲೋಕಸಭೆಯಲ್ಲೂ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭೆಯಲ್ಲೂ ಆಡಿರುವ ಮಾತುಗಳನ್ನು ಕಡತದಿಂದ ತೆಗೆದುಹಾಕಲಾಗಿದೆ.
ಮಂಗಳವಾರ ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಮೇಲೆ ರಾಹುಲ್ ಗಾಂಧಿ ಅವರು ಮಾತಾಡುವ ವೇಳೆ ಹೇಗೆ 2014ರಿಂದ ಪ್ರಧಾನಿ ನರೇಂದ್ರ ಮೋದಿ ಪ್ರಧಾನಿ ಆದ ಬಳಿಕ ಗೌತಮ್ ಅದಾನಿ ಅದೃಷ್ಟ ಬದಲಾಯಿತು, ಹೇಗೆ ಅದಾನಿ ಸಂಪತ್ತು ಶರವೇಗದಲ್ಲಿ ಏರಿಕೆ ಆಯಿತು, ಹೇಗೆ ದೇಶದ ಪ್ರಮುಖ ಕ್ಷೇತ್ರಗಳಲ್ಲಿ ಯೋಜನೆಗಳೆಲ್ಲವೂ ಅದಾನಿ ಪಾಲಾದವು ಎಂದು ವಿವರಿಸಿದ್ದರು.
ಅದಾನಿ ಮತ್ತು ನರೇಂದ್ರ ಮೋದಿ ನಂಟಿನ ಬಗ್ಗೆ ರಾಹುಲ್ ಗಾಂಧಿ ಮಾಡಿದ 18 ಉಲ್ಲೇಖಗಳನ್ನು ಲೋಕಸಭೆಯ ಕಡತದಿಂದ ತೆಗೆದುಹಾಕಲಾಗಿದೆ.
ಇತ್ತ ನಿನ್ನೆ ರಾಜ್ಯಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರೂ ಅದಾನಿ ಅಕ್ರಮ ಮತ್ತು ಸಂಪತ್ತು ಹೆಚ್ಚಳದ ಬಗ್ಗೆ ಮಾತಾಡಿದ್ದರು. ಆ ಮಾತುಗಳನ್ನೂ ರಾಜ್ಯಸಭೆಯ ಕಡತದಿಂದ ತೆಗೆದುಹಾಕಲಾಗಿದೆ.
ADVERTISEMENT
ADVERTISEMENT