ರಕ್ಷಣಾ ಸಚಿವಾಲಯ: 4 ವರ್ಷಗಳಲ್ಲಿ ಬಜೆಟ್​ ಹಂಚಿಕೆ ಶೇಕಡಾ 6ರಷ್ಟು ಕಡಿತ

ರಕ್ಷಣಾ ಸಚಿವಾಲಯಕ್ಕೆ ಹಂಚಿಕೆ ಮಾಡಲಾಗಿರುವ ಅನುದಾನದಲ್ಲಿ ಇಳಿಕೆ ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ರಾಜ್ಯಸಭೆಗೆ ಮಾಹಿತಿ ನೀಡಿದೆ.
ಕಾಂಗ್ರೆಸ್​ ಸಂಸದ ದೀಪಂದರ್​ ಸಿಂಗ್​ ಹೂಡಾ ಕೇಳಿರುವ ಪ್ರಶ್ನೆಗೆ ರಕ್ಷಣಾ ಸಚಿವಾಲಯ ಅಂಕಿಅಂಶ ಸಮೇತ ಉತ್ತರ ನೀಡಿದೆ.
ಕೇಂದ್ರ ಸರ್ಕಾರದ ಬಜೆಟ್​ನಲ್ಲಿ ರಕ್ಷಣಾ ಸಚಿವಾಲಯಕ್ಕೆ ಹಂಚಿಕೆ ಮಾಡಿರುವ ಮತ್ತು ಕೇಂದ್ರ ಸರ್ಕಾರದ ಬಜೆಟ್​ನ ಶೇಕಡಾವಾರು ಪ್ರಮಾಣ:
2014-15: 3,17,207 ಕೋಟಿ ರೂಪಾಯಿ – ಶೇಕಡಾ 19.07
2015-16: 3,27,096 ಕೋಟಿ ರೂಪಾಯಿ – ಶೇಕಡಾ 18.27
2016-17: 3,89,614 ಕೋಟಿ ರೂಪಾಯಿ – ಶೇಕಡಾ 19.73
2017-18: 4,17,242 ಕೋಟಿ ರೂಪಾಯಿ – ಶೇಕಡಾ 19.48
2018-19: 4,42,683 ಕೋಟಿ ರೂಪಾಯಿ – ಶೇಕಡಾ 19.12
2019-20: 4,88,795 ಕೋಟಿ ರೂಪಾಯಿ – ಶೇಕಡಾ 18.20
2020-21: 5,23,330 ಕೋಟಿ ರೂಪಾಯಿ – ಶೇಕಡಾ 14.91
2021-22: 5,35,508 ಕೋಟಿ ರೂಪಾಯಿ – ಶೇಕಡಾ 14.20
2022-23: 5,55,484 ಕೋಟಿ ರೂಪಾಯಿ – ಶೇಕಡಾ 14.08
2023-24 – 5.94 ಲಕ್ಷ ಕೋಟಿ ರೂಪಾಯಿ – ಶೇಕಡಾ 13.18
2018ರ ಬಳಿಕ ರಕ್ಷಣಾ ವಲಯಕ್ಕೆ ಪ್ರಧಾನಿ ಮೋದಿ ಸರ್ಕಾರ ಹಂಚಿಕೆ ಮಾಡುತ್ತಿರುವ ಅನುದಾನ ಶೇಕಡಾ 6ರಷ್ಟು ಕಡಿತ ಆಗಿದೆ. 

LEAVE A REPLY

Please enter your comment!
Please enter your name here