ಈ ಆರ್ಥಿಕ ವರ್ಷದ ಮೊದಲ 8 ತಿಂಗಳಲ್ಲಿ (ಅಂದರೆ 2022ರ ನವೆಂಬರ್ವರೆಗೆ) ಭಾರತ ಬರೋಬ್ಬರೀ 61,452 ಟನ್ನ್ನಷ್ಟು ಅಡಿಕೆಯನ್ನು ಹೊರದೇಶಗಳಿಂದ ಆಮದು ಮಾಡಿಕೊಂಡಿದೆ.
ಅಂದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಭಾರತಕ್ಕೆ ಅಡಿಕೆ ಆಮದು ಪ್ರಮಾಣ ಬರೋಬ್ಬರೀ ಶೇಕಡಾ 136ರಷ್ಟು ಹೆಚ್ಚಳ ಕಂಡಿದೆ.
2021–22ರ ಆರ್ಥಿಕ ವರ್ಷದಲ್ಲಿ ಭಾರತ 25,891 ಟನ್ನ್ನಷ್ಟು ಅಡಿಕೆಯನ್ನು ಆಮದು ಮಾಡಿಕೊಂಡಿತ್ತು.
ಆದರೆ 2019ರ ಆರ್ಥಿಕ ವರ್ಷದಲ್ಲಿ ಮಾಡಲಾದ ಅಡಿಕೆ ಅಮದಿಗೆ ಹೋಲಿಕೆ ಮಾಡಿದ್ರೆ ವರ್ಷದ ನವೆಂಬರ್ವರೆಗೆ ಮಾಡಲಾದ ಅಡಿಕೆ ಆಮದು ಪ್ರಮಾಣ ಬರೋಬ್ಬರಿ 12 ಪಟ್ಟು ಅಂದರೆ ಶೇಕಡಾ 1,235ರಷ್ಟು ಹೆಚ್ಚಳ ಆಗಿದೆ.
2019ರಲ್ಲಿ 4,975 ಟನ್ನ್ನಷ್ಟು ಇದ್ದ ಅಡಿಕೆ ಆಮದು ಆ ಬಳಿಕ 2020-21ರ ಅವಧಿಯಲ್ಲಿ 9,982 ಟನ್ಗೆ ಹೆಚ್ಚಳ ಆಯಿತು. 2021-22ರ ಅವಧಿಯಲ್ಲಿ 7,698 ಟನ್ನ್ನಷ್ಟು ಅಡಿಕೆ ಆಮದು ಮಾಡಿಕೊಳ್ಳಲಾಗಿತ್ತು.
ಅಡಿಕೆ ಬರುತ್ತಿರುವುದು ಎಲ್ಲಿಂದ..?
ಕೆನಡಾ, ಇಂಡೋನೇಷ್ಯಾ, ಮಾಲ್ಡೀವ್ಸ್, ಮಯಾನ್ಮಾರ್, ಸಿಂಗಾಪುರ, ಶ್ರೀಲಂಕಾ, ತಾಂಜಾನಿಯಾ, ವಿಯೆಟ್ನಾಂನಿಂದ ಅಡಿಕೆ ಆಮದಾಗ್ತಿದೆ.
2022ರಲ್ಲೂ ಸಂಸತ್ತಿನಲ್ಲಿ ಪ್ರಸ್ತಾಪ:
ಡಿಸೆಂಬರ್ 15, 2022ರಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ ವೈ ರಾಘವೇಂದ್ರ ಅವರು ಅಡಿಕೆ ಆಮದಿನಿಂದ ಕರ್ನಾಟಕದ ಅಡಿಕೆ ಬೆಳೆಗಾರರಿಗೆ ಆಗ್ತಿರುವ ತೊಂದರೆ ಮತ್ತು ಅಡಿಕೆ ಬೆಲೆ ಕುಸಿತದ ಬಗ್ಗೆ ಲೋಕಸಭೆಯಲ್ಲಿ ಪ್ರಸ್ತಾಪಿಸಿದ್ದರು.
ನನ್ನ ಲೋಕಸಭಾ ಕ್ಷೇತ್ರ ಶಿವಮೊಗ್ಗ ಒಳಗೊಂಡಂತೆ 16 ಜಿಲ್ಲೆಗಳಲ್ಲಿ ಅಡಿಕೆಯನ್ನು ಬೆಳೆಯುತ್ತಾರೆ. 10 ಲಕ್ಷ ಕುಟುಂಬಗಳು ಅಡಿಕೆ ಬೆಳೆ ಮೇಲೆ ಅವಲಂಬಿತವಾಗಿವೆ. ದೇಶದ ಒಟ್ಟು ಅಡಿಕೆ ಬೆಳೆಯಲ್ಲಿ ಶೇಕಡಾ 69ರಷ್ಟನ್ನು ನನ್ನ ರಾಜ್ಯ ಕರ್ನಾಟಕದಲ್ಲಿ ಬೆಳೆಯಲಾಗುತ್ತದೆ. ಜಿಎಸ್ಟಿ ಮತ್ತು ಇತರೆ ಸುಂಕಗಳ ರೂಪದಲ್ಲಿ 24 ಸಾವಿರ 764 ಕೋಟಿ ರೂಪಾಯಿಯನ್ನು ಆದಾಯವನ್ನಾಗಿ ನೀಡುತ್ತಿದೆ
ಎಂದು ಲೋಕಸಭೆಯಲ್ಲಿ ಪ್ರಸ್ತಾಪಿಸಿದ್ದರು.
ಚೀನಾ ಮತ್ತು ಅಡಿಕೆ ಹಾಗೂ ಆರಗ ಜ್ಞಾನೇಂದ್ರ:
ಚೀನಾಗೆ ತೊಂದರೆ ಕೊಡಲು ಭೂತಾನ್ನಿಂದ 17 ಸಾವಿರ ಮೆಟ್ರಿಕ್ ಟನ್ ಅಡಿಕೆಯನ್ನು ಆಮದು ಮಾಡಿಕೊಳ್ಳಲಾಗ್ತಿದೆ ಎಂದು ಕಳೆದ ವರ್ಷ ಕರ್ನಾಟಕ ರಾಜ್ಯ ಅಡಿಕೆ ಕಾರ್ಯಪಡೆ ಅಧ್ಯಕ್ಷ ಆರಗ ಜ್ಞಾನೇಂದ್ರ ಅವರು ಹೇಳಿದ್ದರು.
ಅಡಿಕೆ ಬೆಳೆ ಬಗ್ಗೆ ಇರುವ ಆತಂಕ
ಅಡಿಕೆ ಕೇವಲ ಜಗಿದು ಉಗಿಯಲಿಕ್ಕಷ್ಟೇ ಉಪಯೋಗ ಎಂಬ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಮಾತು ಅಡಿಕೆ ಬೆಳೆಗಾರರ ಕೋಪಕ್ಕೆ ಕಾರಣವಾಗಿತ್ತು.
ಅಡಿಕೆ ಬೆಳೆಗಾರರ ಜೊತೆಗೆ ನಾನಿದ್ದೇನೆ. ಆದರೆ ಅಡಿಕೆ ಬೆಳೆಗೆ ಪ್ರೋತ್ಸಾಹ ಕೊಟ್ಟು ಬಯಲು ಸೀಮೆಯಲ್ಲೂ ಹೊಸ ಅಡಿಕೆ ತೋಟ ಮಾಡಿಸುವ ಅಗತ್ಯವಿಲ್ಲ. ಪರಂಪರಗತವಾಗಿ ಅಡಿಕೆ ಬೆಳೆಯುವ ಕರಾವಳಿ ಮತ್ತು ಮಲೆನಾಡಿನಲ್ಲಿ ಮಾತ್ರ ಅಡಿಕೆ ಬೆಳೆಗೆ ಪ್ರೋತ್ಸಾಹ ಕೊಟ್ಟರೆ ಸಾಕು.
ವರ್ಷಕ್ಕೆ ಒಂದು ಕೋಟಿ ಅಡಿಕೆ ಸಸಿ ಮಾರಾಟವಾಗುತ್ತದೆ. ಆಂಧ್ರದಲ್ಲಿ ಎರಡು ಸಾವಿರ ಎಕರೆ ಅಡಿಕೆ ಬೆಳೆ ಹಾಕಲಾಗಿದೆ. ಹೀಗಾದ್ರೆ ಅಡಿಕೆ ಬೆಳೆ ಎಷ್ಟು ದಿನ ನಿಲ್ಲಬಹುದು. ಅಡಿಕೆಗೆ ಬಂದ ರೇಟೇ ಅಡಿಕೆಗೆ ಶಾಪ. ಹೀಗಾಗಿ ಹೊಸ ಅಡಿಕೆ ತೋಟಕ್ಕೆ ಸರ್ಕಾರ ಪ್ರೋತ್ಸಾಹ ನೀಡುವ ಅಗತ್ಯವಿಲ್ಲ
ಎಂದು ಆರಗ ಜ್ಞಾನೇಂದ್ರ ಅವರು ಹೇಳಿದ್ದರು.
ಆಮದು ಬೆಲೆ ಮಿತಿ ಹೆಚ್ಚಳಕ್ಕೆ ಶಿಫಾರಸ್ಸು:
ವಿದೇಶಗಳಿಂದ ಅಡಿಕೆ ಆಮದಿನ ಕನಿಷ್ಠ ಮೂಲ ಬೆಲೆಯನ್ನು ಹೆಚ್ಚಿಸುವಂತೆ ಕೇಂದ್ರ ಕೃಷಿ ಸಚಿವಾಲಯ ಶಿಫಾರಸ್ಸು ಮಾಡಿದೆ.
ಅಡಿಕೆ ಆಮದಿಗೆ ಇರುವ ಕನಿಷ್ಠ ಮೂಲ ಬೆಲೆಯನ್ನು ಕೆಜಿಗೆ ಈಗಿರುವ 251 ರೂಪಾಯಿಗಳಿಂದ 351 ರೂಪಾಯಿಗೆ ಅಂದರೆ 100 ರೂಪಾಯಿಯಷ್ಟು ಹೆಚ್ಚಳ ಮಾಡುವುದಕ್ಕೆ ಕೃಷಿ ಸಚಿವಾಲಯ ವಿದೇಶ ವ್ಯಾಪಾರಕ್ಕಾಗಿ ಪ್ರಧಾನ ನಿರ್ದೇಶನಾಲಯಕ್ಕೆ ಶಿಫಾರಸ್ಸು ಮಾಡಿದೆ.
ಕಳೆದ ವರ್ಷವೇ ಕ್ಯಾಂಪ್ಕೊಂದಿಲೂ ಮನವಿ:
ಕಳೆದ ವರ್ಷವೇ ಕ್ಯಾಂಪ್ಕೋ ಅಡಿಕೆ ಆಮದಿಗೆ ಮೂಲ ಬೆಲೆಯನ್ನು ಹೆಚ್ಚಿಸುವಂತೆ ಕೇಂದ್ರ ವಾಣಿಜ್ಯ ಸಚಿವಾಲಯಕ್ಕೆ ಆಗ್ರಹಿಸಿತ್ತು.
ಅಡಿಕೆ ಆಮದಿಗೆ ಕನಿಷ್ಠ ಮೂಲ ಬೆಲೆ ಕೆಜಿಗೆ 360 ರೂಪಾಯಿಗೆ ಹೆಚ್ಚಿಸುವಂತೆ ಆಗ್ರಹಿಸಿತ್ತು. 2017ರಿಂದ ಅಡಿಕೆ ಕೃಷಿ ವೆಚ್ಚ ಶೇಕಡಾ 30ರಷ್ಟು ಹೆಚ್ಚಳವಾಗಿದ್ದು, ಹೀಗಾಗಿ ಅಡಿಕೆ ಆಮದಿನ ಮೂಲ ಬೆಲೆಯನ್ನು 251ರಿಂದ 360 ರೂಪಾಯಿಗೆ ಹೆಚ್ಚಿಸುವಂತೆ ಕ್ಯಾಂಪ್ಕೋ ವಿದೇಶಿ ವ್ಯಾಪಾರಕ್ಕಾಗಿರುವ ಪ್ರಧಾನ ನಿರ್ದೇಶನಾಲಯಕ್ಕೆ ಮನವಿ ಸಲ್ಲಿಸಿತ್ತು.
ಭೂತಾನ್ನಿಂದ ಹಸಿರು ಅಡಿಕೆ ಆಮದು:
ಕಳೆದ ವರ್ಷದ ಅಂದರೆ 2022ರ ಸೆಪ್ಟೆಂಬರ್ 28ರಂದು ಕೇಂದ್ರ ವಾಣಿಜ್ಯ ಸಚಿವಾಲಯದ ಆಧೀನದಲ್ಲಿ ಬರುವ ಡಿಜಿಎಫ್ಟಿ ಅಧಿಸೂಚನೆಯನ್ನು ಹೊರಡಿಸಿ ಪ್ರತಿ ವರ್ಷ ಭೂತಾನ್ನಿಂದ 17 ಸಾವಿರ ಟನ್ ಹಸಿರು ಅಡಿಕೆ ಆಮದಿಗೆ ಅನುಮತಿ ನೀಡಿತ್ತು. ಪಶ್ಚಿಮ ಬಂಗಾಳದ ಬಂದರಿನಿಂದ ಮೂಲಕ ಹಸಿರು ಅಡಿಕೆ ಆಮದಿಗೆ ಅನುಮತಿ ನೀಡಿತ್ತು. ವಿಚಿತ್ರ ಎಂದರೆ ಈ ಆಮದಿಗೆ ಕನಿಷ್ಠ ಮೂಲ ಬೆಲೆಯನ್ನು ಕೇಂದ್ರ ಸರ್ಕಾರ ನಿಗದಿ ಮಾಡಿರಲಿಲ್ಲ.
ಪ್ರಧಾನಿ ಮೋದಿಗೆ ಅಡಿಕೆ ಪೇಟ: