ಭಾರತ ಅಂತರಿಕ್ಷ ಚರಿತ್ರೆಯಲ್ಲಿ ಅತ್ಯಂತ ಕ್ಲಿಷ್ಟವಾದ, ಭಾರೀ ಪ್ರಯೋಗಕ್ಕೆ ಇಸ್ರೋ(Isro) ಸಜ್ಜಾಗುತ್ತಿದೆ. ಚಂದ್ರಯಾನ್-3(Chandrayan3) ಪ್ರಯೋಗ ಜುಲೈ 14ರ ಮಧ್ಯಾಹ್ನ 2.35ಕ್ಕೆ ನಡೆಯಲಿದೆ.
ಶ್ರೀಹರಿಕೋಟಾದಿಂದ ನಭಕ್ಕೆ ಚಿಮ್ಮಲಿರುವ ಚಂದ್ರಯಾನ್-3 ಚಂದ್ರನ ಅಂಗಳ (Moon surface)ತಲುಪಲು 40 ದಿನ ಹಿಡಿಯಲಿದೆ.
ಚಂದ್ರಯಾನ್2 ಪ್ರಯೋಗ ನಡೆದಿದ್ದು 2019ರ ಜುಲೈ 22ರಂದು.. 2019ರ ಸೆಪ್ಟೆಂಬರ್ 6ರಂದು ಚಂದ್ರನ ಮೇಲೆ ಇಳಿಯಲು ವಿಕ್ರಮ್ ಲ್ಯಾಂಡರ್ ಸಜ್ಜಾಯಿತು. ಅಂದರೆ ಚಂದ್ರಯಾನ್-2 ಪ್ರಯೋಗಕ್ಕೆ ಹಿಡಿದಿದ್ದು 48 ದಿನ.
ಚಂದ್ರಯಾನ್-1ರ ಪ್ರಯೋಗ ನಡೆದಿದ್ದು 2008ರ ಆಗಸ್ಟ್ 28ರಂದು.. ಅದರಲ್ಲಿನ ಆರ್ಬಿಟರ್ ಚಂದ್ರನ ಕಕ್ಷೆ ಸೇರಿದ್ದು ಮಾತ್ರ 2008ರ ನವೆಂಬರ್ 8ರಂದು. ಅಂದರೆ ಈ ಪಯಣಕ್ಕೆ ಹಿಡಿದಿದ್ದು 77 ದಿನ.
ನಾಲ್ಕು ದಿನದಲ್ಲಿಯೇ ಚಂದ್ರನನ್ನು ಸೇರಿದ ನಾಸಾ ಬಾಹ್ಯಾಕಾಶಯಾನಿಗಳು 1969ರಲ್ಲಿ ಅಮೆರಿಕಾದ ಅಂತರಿಕ್ಷ ಸಂಸ್ಥೆ ನಾಸಾ (NASA) ಕಳಿಸಿದ ಅಪೋಲೋ 11 (Appolo 11) ಎಂಬ ಮಾನವಸಹಿತ ವ್ಯೋಮನೌಕೆ 4 ದಿನಗಳಲ್ಲಿ ಗಮ್ಯ ಸೇರಿತ್ತು. ಆದರೆ, ಇಸ್ರೋ ಜುಲೈ 14ರಂದು ಕಳಿಸುತ್ತಿರುವ ಚಂದ್ರಯಾನ-3 ಚಂದ್ರನ ಕಕ್ಷೆಯನ್ನು ಸೇರಲು 40 ದಿನ ಹಿಡಿಯಲಿದೆ.
50 ವರ್ಷಗಳ ಹಿಂದೆಯೇ ಅಷ್ಟು ವೇಗವಾಗಿ ಚಂದ್ರನನ್ನು ತಲುಪಲು ಸಾಧ್ಯವಾಗುತ್ತೆ ಎನ್ನುವುದಾದರೇ ಇಸ್ರೋ ಕಳಿಸಿದ ಚಂದ್ರಯಾನ ಇನ್ನಷ್ಟು ವೇಗವಾಗಿ ಚಂದಿರನನ್ನು ತಲುಪಬೇಕಿತ್ತಲ್ಲವೇ.. ಏಕೆ ಈ ವಿಳಂಬ? ಎಂಬ ಪ್ರಶ್ನೆ ಸಹಜವಾಗಿ ಕಾಡುತ್ತದೆ. ಅದಕ್ಕೆ ಉತ್ತರ ಇಲ್ಲಿದೆ.
ಚಂದ್ರಯಾನ-3ರ ಸುದೀರ್ಘ ಪಯಣದ ಹಿಂದೆ ಸಾಕಷ್ಟು ತಾಂತ್ರಿಕ ಕಾರಣಗಳಿವೆ. 1969ರಲ್ಲಿ ನಾಸಾ ಪ್ರಯೋಗಿಸಿದ ಅಪೊಲೋ 11ರ ರಾಕೆಟ್ ಭಾರ ಇಂಧನವನ್ನು ಸೇರಿಸಿ 2800 ಟನ್. ಆದರೆ, ಇಸ್ರೋ ಪ್ರಯೋಗಿಸಲಿರುವ ಜಿಎಸ್‌ಎಲ್‌ವಿ ಮಾರ್ಕ್ 3 ರಾಕೆಟ್ ಭಾರ ಇಂಧನ ಸೇರಿ 640 ಟನ್ ಅಷ್ಟೇ ಇದೆ.
ಇದರಲ್ಲಿ ಚಂದ್ರನ ಮೇಲೆ ಹೋಗುವ ಪ್ರೊಪಲ್ಷನ್ ಮಾಡ್ಯೂಲ್ 2148 ಕೆಜಿ. ಲ್ಯಾಂಡರ್, ರೋವರ್ ಮಾಡ್ಯೂಲ್‌ಗಳ ತೂಕ 1752 ಕೆಜಿ.
ಅಂದರೆ, ಚಂದ್ರನತ್ತ ತೆರಳಿರುವ ವಸ್ತುಗಳ ಒಟ್ಟು ಭಾರ ಅಂದಾಜು 4ಸಾವಿರ ಟನ್. ಇಸ್ರೋ ಬಳಿ ಇರುವ ರಾಕೆಟ್‌ಗಳಲ್ಲಿ 4 ಟನ್ ಪೆಲೋಡ್ ತೆಗೆದುಕೊಂಡು ಹೋಗುವ ಸಾಮರ್ಥ್ಯ ಇರೋದು ಜಿಎಸ್‌ಎಲ್‌ವಿ ಮಾರ್ಕ್3ಗೆ ಮಾತ್ರ.
ಸಾಮಾನ್ಯವಾಗಿ ಸ್ಯಾಟಲೈಟ್‌ಗಳನ್ನು ಅಂತರಿಕ್ಷಕ್ಕೆ ತೆಗೆದುಕೊಂಡುಹೋಗುವ ಪಿಎಸ್‌ಎಲ್‌ವಿ ರಾಕೆಟ್‌ಗಳು ಇಷ್ಟು ಭಾರ ಹೊಂದಿರಲ್ಲ. ಏಕೆಂದರೆ ಅವು ಕೇವಲ ಸ್ಯಾಟಲೈಟ್‌ಗಳನ್ನು ತೆಗೆದುಕೊಂಡು ಹೋಗಿ ಜಿಯೋ ಸಿಂಕ್ರನೈಸ್ಡ್ ಇಲ್ಲವೇ ಜಿಯೋ ಸ್ಟೇಷನರಿ ಆರ್ಬಿಟ್‌ನಲ್ಲಿ ಬಿಡುತ್ತವೆ.
ಆದರೆ, ಇದಕ್ಕೆ ಚಂದ್ರಯಾನ್ ವಿಭಿನ್ನ. ಏಕೆಂದರೇ ಚಂದ್ರನ ಬಳಿಗೆ ಹೋಗಬೇಕಿರುವ ವಾಹನ ನೌಕೆಯಲ್ಲಿ ಇಂಧನದ ಜೊತೆ ಸಾಕಷ್ಟು ಪರಿಕರಗಳಿವೆ. ಅದಕ್ಕೆ ಇಂತಹ ಪ್ರಯೋಗಗಳಿಗೆ ಶಕ್ತಿಯುತವಾದ ರಾಕೆಟ್‌ಗಳನ್ನು ಬಳಸುತ್ತಾರೆ.
ಈ ವಿಚಾರದಲ್ಲಿ ನಾಸಾ ಪ್ರಯೋಗಿಸಿದ ರಾಕೆಟ್ಗಳ ಭಾರ ಜಾಸ್ತಿ. ಭೂಕಕ್ಷೆಯನ್ನು ದಾಟಿದ ನಂತರ ಚಂದ್ರನ ಕಡೆ ಪಯಣಿಸಿದ ಅಪೋಲೋ ನೌಕೆಯ ಭಾರ 45.7ಟನ್. ಇದರಲ್ಲಿ ಶೇಕಡಾ 80ರಷ್ಟು ಭಾರ ಇಂಧನದ್ದೇ ಆಗಿತ್ತು.
ಅಂದರೆ ಅಪೋಲೋ 11ನಲ್ಲಿ ಈಗಲ್ ಎಂಬ ಲ್ಯಾಂಡರ್ ಚಂದ್ರನ ಮೇಲೆ ಇಳಿದು, ವ್ಯೋಮಗಾಮಿಗಳು ಅದರ ಚಂದ್ರನ ಮೇಲೆ ಹೆಜ್ಜೆ ಇಟ್ಟು ಸಂಶೋಧನೆ ನಡೆಸಿ, ಮತ್ತೆ ಆ ಲ್ಯಾಂಡ್ ಆರ್ಬಿಟರ್ ಅನ್ನು ಸೇರಿಕೊಂಡು, ಅದು ಭೂಮಿಗೆ ಬರಲು ಇಷ್ಟು ಇಂಧನ ಅಗತ್ಯವಾಯಿತು.
ಅಪೋಲೋ 11 ಪ್ರಯೋಗಕ್ಕೆ ಬಳಸಿದ ರಾಕೆಟ್ ಸಾಟರನ್ ಫೈವ್ ಎಸ್ಎಎಎ 506 ಅತ್ಯಂತ ಶಕ್ತಿಯುತವಾಗಿತ್ತು. ಅಷ್ಟು ಭಾರೀ ಇಂಧನ..ಅಷ್ಟು ಭಾರೀ ಗಾತ್ರದ ರಾಕೆಟ್ ಆದ ಕಾರಣ ಅಪೋಲೋ 11 ಕೇವಲ 4 ದಿನದಲ್ಲಿ ನೇರವಾಗಿ ಪಯಣಿಸಿ ಚಂದ್ರನ ಅಂಗಳ ಸೇರಿತು..
ಕಾರ್ಕಳ: ಬೈಲೂರು-ಎರ್ಲಪ್ಪಾಡಿ ಉಮಿಕಲ್ಲು ಬೆಟ್ಟದಲ್ಲಿ ಸ್ಥಾಪಿಸಿದ ಪರಶುರಾಮ ಮೂರ್ತಿಯ ವಾಸ್ತವ್ಯ ವಿಚಾರ ಮರೆಮಾಚುವ ಪ್ರಯತ್ನವಾಗಿ ಶಾಸಕ ಸುನೀಲ್ ಕುಮಾರ್ ವಿಷಯಾಂತರ ಮಾಡುವುದರೊಂದಿಗೆ ನೂರಾರು ಬಾರಿ ಸುಳ್ಳನ್ನೇ ಸತ್ಯವನ್ನಾಗಿರಿಸುವ ಪ್ರಯತ್ನ ನಡೆಸುತ್ತಿದ್ದಾರೆ. ರಾಜಕೀಯ ನಡೆಯಲಿ...
ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ವಿರುದ್ಧ ರಾಜ್ಯ ಸರ್ಕಾರ ಇಲಾಖಾ ತನಿಖೆಗೆ ಆದೇಶ ನೀಡಿದೆ.
ಮೈಸೂರು ಜಿಲ್ಲಾಧಿಕಾರಿಯಾಗಿದ್ದ ವೇಳೆ ಜಿಲ್ಲಾಧಿಕಾರಿ ನಿವಾಸ ನವೀಕರಣ ಮತ್ತು ಬಟ್ಟೆ ಬ್ಯಾಗ್ ಖರೀದಿಯಲ್ಲಿ ನಿಯಮ ಉಲ್ಲಂಘಿಸಿದ ಆರೋಪ ರೋಹಿಣಿ...
ಕರ್ನಾಟಕದಲ್ಲಿ ಬಿಜೆಪಿಗೆ ಭವಿಷ್ಯ ಇಲ್ಲ ಎಂದಿರುವ ಉಡುಪಿ ಜಿಲ್ಲೆಯ ಬೈಂದೂರು ಕ್ಷೇತ್ರದ ಮಾಜಿ ಬಿಜೆಪಿ ಶಾಸಕ ಸುಕುಮಾರ್ ಶೆಟ್ಟಿ ಅವರು ಶೀಘ್ರವೇ ಕಾಂಗ್ರೆಸ್ಗೆ ಸೇರ್ಪಡೆಯಾಗಲಿದ್ದಾರೆ.
ಕಾಂಗ್ರೆಸ್ ಸೇರುವ ಸಂಬಂಧ ಉಪಮುಖ್ಯಮಂತ್ರಿಗಳೂ ಆಗಿರುವ ಕೆಪಿಸಿಸಿ ಅಧ್ಯಕ್ಷ...
ಗಣೇಶೋತ್ಸವಕ್ಕೆ ಎರಡು ಲಕ್ಷ ರೂಪಾಯಿ ಕೊಡುವಂತೆ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಜಯರಾಮ್ ಅಮೀನ್ ಅವರ ಕಚೇರಿಗೆ ನುಗ್ಗಿ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಮತ್ತು ಇತರರು ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ.
ಬಿಜೆಪಿ ಶಾಸಕ...
ಬೆಳ್ತಂಗಡಿ ತಾಲೂಕಿನ ಅನಿಲ್ ಪ್ರವೀಣ್ ಪಿರೇರಾ ಎಂಬವರು ಕಾಣೆಯಾಗಿರುವ ಬಗ್ಗೆ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾಮದ ಕೊಲ್ಪದಬೈಲು ನಿವಾಸಿಯಾಗಿರುವ ಲವಿಟ ಡಿಸೋಜಾ ಅವರು ತಮ್ಮ ಪತಿ ಅನಿಲ್ ಪ್ರವೀಣ್...
ದಿವಂಗತ ಬಿಜೆಪಿ ನಾಯಕ ಅನಂತಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತ್ಕುಮಾರ್ ಅವರು ಬೆಂಗಳೂರಲ್ಲಿ ಉಪ ಮುಖ್ಯಮಂತ್ರಿಯೂ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಚರ್ಚಿಸಿದರು.
ಈ ಬಗ್ಗೆ ಬೆಂಗಳೂರು...
ಕಾಂಗ್ರೆಸ್ ಒಳಗೊಂಡ 26 ವಿರೋಧ ಪಕ್ಷಗಳ ಮೈತ್ರಿಕೂಟ ಲೋಕಸಭಾ ಚುನಾವಣೆಗೆ ಇಂಡಿಯಾ ಮೈತ್ರಿಕೂಟವನ್ನು ರಚಿಸಿಕೊಂಡಿವೆ. ಆದಷ್ಟು ಬೇಗ ರಾಜ್ಯಗಳಲ್ಲಿ ಲೋಕಸಭಾ ಸೀಟುಗಳ ಹಂಚಿಕೆ ಸಂಬಂಧ ನಿರ್ಧಾರ ಕೈಗೊಳ್ಳುವ ಬಗ್ಗೆ ಮುಂಬೈನಲ್ಲಿ ನಡೆದ ಮೂರನೇ...
ದೇಶದ ಅತ್ಯಂತ ದುಬಾರಿ ವಕೀಲ ಎಂದೇ ಖ್ಯಾತಿ ಪಡೆದಿರುವ ಸುಪ್ರೀಂಕೋರ್ಟ್ನ ಹಿರಿಯ ವಕೀಲ ಹರೀಶ್ ಸಾಳ್ವೆ ಅವರು ತಮ್ಮ 68ನೇ ಇಳಿವಯಸ್ಸಿನಲ್ಲಿ ಮೂರನೇ ಮದುವೆ ಆಗಿದ್ದಾರೆ.
ಬ್ರಿಟನ್ ರಾಜಧಾನಿ ಲಂಡನ್ನಲ್ಲಿ ಬ್ರಿಟನ್ ಪ್ರಜೆಯಾಗಿರುವ ಟ್ರಿನಾ...
ಹಾಸನ ಲೋಕಸಭಾ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ ಅವರ ಆಯ್ಕೆಯನ್ನು ಕರ್ನಾಟಕ ಹೈಕೋರ್ಟ್ ಅಸಿಂಧುಗೊಳಿಸಿದೆ.
ಚುನಾವಣಾ ಅಕ್ರಮಗಳ ಹಿನ್ನೆಲೆಯಲ್ಲಿ ಪ್ರಜ್ವಲ್ ಅವರ ಆಯ್ಕೆಯನ್ನು ಅಸಿಂಧುಗೊಳಿಸಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಈ ತೀರ್ಪಿನೊಂದಿಗೆ ಪ್ರಜ್ವಲ್ ರೇವಣ್ಣ...
ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ನಸುಕಿನ ಜಾವ ದಿಢೀರ್ ಅನಾರೋಗ್ಯ ಕಾಣಸಿಕೊಂಡ ಹಿನ್ನೆಲೆಯಲ್ಲಿ ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ.
ನಸುಕಿನ ಜಾವ 3.40ರ ಸುಮಾರಿಗೆ ಕುಮಾರಸ್ವಾಮಿ ಅವರಿಗೆ ಸುಸ್ತು ಕಾಣಿಸಿಕೊಂಡಿತ್ತು.
ಜಯನಗರದಲ್ಲಿರುವ ಅಪೋಲೋ...