ಹೈದರಾಬಾದ್ನಲ್ಲಿ (Hyderabad)ಆಂಬ್ಯುಲೆನ್ಸ್ ಚಾಲಕ(Ambulance Driver)ನೊಬ್ಬ ಮಾಡಿದ ಕೆಲಸಕ್ಕೆ ಹಲವರ ಆಕ್ರೋಶಕ್ಕೆ ಕಾರಣವಾಗಿದೆ.
ನಾರಾಯಣಗೂಡ(Narayanaguda)ದಲ್ಲಿ ಆಂಬ್ಯುಲೆನ್ಸ್ ಚಾಲಕನೊಬ್ಬ ತುರ್ತು ಸೈರನ್ (Siren) ಮೊಳಗಿಸಿದ ಕಾರಣ ಟ್ರಾಫಿಕ್ ಪೊಲೀಸರು (Traffic Police) ತರಾತುರಿಯಲ್ಲಿ ಸಿಗ್ನಲ್ ಕ್ಲಿಯರ್ ಮಾಡಿಸಿದ್ದಾರೆ.
ಸಿಗ್ನಲ್ ದಾಟಿದ ನಂತರ ಸ್ವಲ್ಪ ಮುಂದಕ್ಕೆ ಹೋದ ಆಂಬ್ಯುಲೆನ್ಸ್ ನಿಂತಿದ್ದು ರಸ್ತೆ ಬದಿಯ ಬಜ್ಜಿ ಅಂಗಡಿಯ (Bajji Shop) ಮುಂದೆ.
ಸೀದಾ ಬಜ್ಜಿ ಅಂಗಡಿಗೆ ಹೋದ ಆಂಬ್ಯುಲೆನ್ಸ್ ಚಾಲಕ ಮತ್ತು ಸಿಬ್ಬಂದಿ ಬಜ್ಜಿ, ಕೂಲ್ ಡ್ರಿಂಕ್ಸ್ (Cool Drinks)ಖರೀದಿಸಿ ತಿನ್ನುತ್ತಿದ್ದರು.
ಇದನ್ನು ಗಮನಿಸಿದ ಪೊಲೀಸ್ ಕಾನ್ಸ್ಸ್ಟೇಬಲ್ (Police Constable) ಬಂದು ಆಂಬ್ಯುಲೆನ್ಸ್ ಪರಿಶೀಲಿಸಿದಾಗ ಅದರಲ್ಲಿ ರೋಗಿ ಇರಲಿಲ್ಲ.
ಯಾಕೆ ಹೀಗೆ ಮಾಡಿದಿರಿ ಎಂದು ಆಂಬ್ಯುಲೆನ್ಸ್ ಚಾಲಕನನ್ನು ಪೊಲೀಸರು ಕೇಳಿದರು.. ಆಗ ರೋಗಿ ಇದ್ದಾನೆ ಎಂಬು ಸಬೂಬು ಹೇಳಲು ಆಂಬ್ಯುಲೆನ್ಸ್ ಚಾಲಕ ಯತ್ನಿಸಿದ್ದಾನೆ.
#TelanganaPolice urges responsible use of ambulance services, citing misuse of sirens. Genuine emergencies require activating sirens for swift and safe passage. Strict action against abusers is advised.
Together, we can enhance emergency response and community safety. pic.twitter.com/TuRkMeQ3zN
— Anjani Kumar IPS (@Anjanikumar_IPS) July 11, 2023