ತಿರುಪತಿ ನಡುವೆ ಸಂಚರಿಸುವ ರೈಲನ್ನು ಇವತ್ತಿನಿಂದ ಒಂದು ತಿಂಗಳವೆರೆಗೆ ರದ್ದುಗೊಳಿಸಲಾಗಿದೆ.
ಪ್ರತಿ ದಿನ ಚೆನ್ನೈ ಮತ್ತು ತಿರುಪತಿ (Tirupati) ನಡುವೆ ಓಡಾಡುವ ಎಂಜಿಆರ್ ಚೆನ್ನೈ ಸೆಂಟ್ರಲ್ ಮತ್ತು ತಿರುಪತಿ ಎಕ್ಸ್ಪ್ರೆಸ್ ರೈಲು (16203)ನ್ನು ಜುಲೈ 12ರಿಂದ ಆಗಸ್ಟ್ 10ರವರೆಗೆ ರದ್ದುಗೊಳಿಸಲಾಗಿದೆ.
ಪ್ರತಿ ದಿನ ತಿರುಪತಿ ಮತ್ತು ಚೆನ್ನೈ ನಡುವೆ ಸಂಚರಿಸುವ ಎಕ್ಸ್ಪ್ರೆಸ್ ರೈಲು (16204)ನ್ನು ಜುಲೈ 12ರಿಂದ ಆಗಸ್ಟ್ 10ರವರೆಗೆ ರದ್ದುಗೊಳಿಸಲಾಗಿದೆ.
ಚಾಮರಾಜನರ-ತಿರುಪತಿ ಎಕ್ಸ್ಪ್ರೆಸ್ ರೈಲಿನ ಓಡಾಟವನ್ನು ಪಕಾಲ-ತಿರುಪತಿ ನಡುವೆ ರದ್ದುಗೊಳಿಸಲಾಗಿದೆ.
ತಿರುಪತಿ ಮತ್ತು ಚಾಮರಾಜನಗರ ನಡುವಿನ ರೈಲಿನ ಓಡಾಟವನ್ನು ತಿರುಪತಿ-ಪಕಾಲ ನಡುವೆ ರದ್ದುಗೊಳಿಸಲಗಿದೆ.
ತಿರುಪತಿ-ಹುಬ್ಬಳ್ಳಿ ನಡುವೆ ರೈಲಿನ ಓಡಾಟವನ್ನು ತಿರುಪತಿ-ರೆಣಿಗುಂಟಾ ನಡುವೆ ರದ್ದುಗೊಳಿಸಲಾಗಿದೆ.
ಹುಬ್ಬಳ್ಳಿ-ತಿರುಪತಿ ನಡುವಿನ ಎಕ್ಸ್ಪ್ರೆಸ್ ರೈಲಿನ ಓಡಾಟವನ್ನು ರೆಣಿಗುಂಟಾ-ತಿರುಪತಿ ನಡುವೆ ಆಗಸ್ಟ್ 10ರವರೆಗೆ ರದ್ದುಗೊಳಿಸಲಾಗಿದೆ.
ADVERTISEMENT
ADVERTISEMENT