ಕರ್ನಾಟಕ ವಿಧಾನಸಭಾ ಚುನಾವಣೆ ಮುಗಿದ ಬಳಿಕ ಈ ವರ್ಷದ ಅಂತ್ಯದಲ್ಲಿ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ಗಢ, ತೆಲಂಗಾಣ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ (Assembly Election) ನಡೆಯಲಿದೆ.
ಮುಂದಿನ ವರ್ಷ ಅಂದರೆ 2024ರ ಆರಂಭದಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈ ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ ಮಹತ್ವ ಪಡೆದಿದೆ.
ಚುನಾವಣೆಗೆ ಇನ್ನೂ 9-10 ತಿಂಗಳು ಬಾಕಿ ಇರುವ ಹೊತ್ತಲ್ಲೇ ಪ್ರಮುಖ ಚುನಾವಣಾ ಸಮೀಕ್ಷಾ ಸಂಸ್ಥೆ Small Box India ಮಧ್ಯಪ್ರದೇಶ, ಛತ್ತೀಸ್ಗಢ ಮತ್ತು ತೆಲಂಗಾಣ ವಿಧಾನಸಭಾ ಚುನಾವಣಾ ಪೂರ್ವ ಸಮೀಕ್ಷೆಯನ್ನು ಪ್ರಕಟಿಸಿದೆ.
ತೆಲಂಗಾಣದಲ್ಲಿ ಈ ಬಾರಿ ಯಾರಿಗೆ ಅಧಿಕಾರ..? – Telangana Assembly Election
ತೆಲಂಗಾಣ ವಿಧಾನಸಭೆಯಲ್ಲಿರುವ ಒಟ್ಟು ಸ್ಥಾನಗಳ ಸಂಖ್ಯೆ 119. ಬಹುಮತಕ್ಕೆ ಬೇಕಿರುವ ಶಾಸಕರ ಬಲ 60. 2014ರಲ್ಲಿ ತೆಲಂಗಾಣ ರಾಜ್ಯ ರಚನೆ ಆದ ಬಳಿಕ ಸತತ ಎರಡೂ ಬಾರಿಯೂ ತೆಲಂಗಾಣದಲ್ಲಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ತೆಲಂಗಾಣ ರಾಷ್ಟ್ರಸಮಿತಿ (ಈಗ ಭಾರತ ರಾಷ್ಟ್ರ ಸಮಿತಿ) ಅಧಿಕಾರ ಹಿಡಿದಿದೆ.
Small Box India ಸಮೀಕ್ಷೆಯ ಪ್ರಕಾರ ತೆಲಂಗಾಣದಲ್ಲಿ ಈ ಬಾರಿ ಯಾವ ಪಕ್ಷಕ್ಕೆ ಎಷ್ಟು ಸೀಟು ಸಿಗಬಹುದು..?
ಟಿಆರ್ಎಸ್: 46-48
ಕಾಂಗ್ರೆಸ್: 32-34
ಬಿಜೆಪಿ: 20-28
ಎಐಎಂಐಎಂ 5-6
ಇತರರು: 0-3
ಅಂದರೆ ಈ ಸಮೀಕ್ಷೆಯ ಪ್ರಕಾರ ತೆಲಂಗಾಣದಲ್ಲಿ ಈ ಬಾರಿ ಅತಂತ್ರ ವಿಧಾನಸಭಾ ಚುನಾವಣೆ ನಿರ್ಮಾಣ ಆಗುವ ಸಾಧ್ಯತೆ ಇದೆ.
ಟಿಆರ್ಎಸ್ ಮತ್ತು ಎಐಎಂಐಎಂ ಮೈತ್ರಿ ಮಾಡಿಕೊಂಡರೂ ಬಹುಮತದ ಕೊರತೆ ಉಂಟಾಗಲಿದೆ ಎನ್ನುವುದು ಈ ಸಮೀಕ್ಷೆಯ ಅಂದಾಜು.
ಈ ಸುದ್ದಿಯನ್ನೂ ಓದಿ: BJPಯ ಭಗ್ನಪ್ರೇಮಿಗಳಿಗೆ ಪ್ರೇಮಿಗಳ ದಿನದಂದು ಮೊಟಕಿದ ಕಾಂಗ್ರೆಸ್..!
ಛತ್ತೀಸ್ಗಢದಲ್ಲಿ ಈ ಬಾರಿ ಯಾವ ಪಕ್ಷ ಗೆಲ್ಲುತ್ತೆ..? Chhattisgarh Assembly Election
15 ವರ್ಷಗಳ ಕಾಲ ಅಧಿಕಾರ ವಿರಹ ಅನುಭವಿಸಿದ್ದ ಕಾಂಗ್ರೆಸ್ 2018ರಲ್ಲಿ ಪ್ರಚಂಡ ಬಹುಮತದೊಂದಿಗೆ ಗುಡ್ಡಗಾಡು ರಾಜ್ಯ ಛತ್ತೀಸ್ಗಢದಲ್ಲಿ ಅಧಿಕಾರಕ್ಕೆ ಬಂತು. ಹಾಗಾದ್ರೆ ಈ ಬಾರಿಯೂ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಾ..?
Small Box India ಚುನಾವಣಾ ಸಮೀಕ್ಷೆಯ ಪ್ರಕಾರ
ಕಾಂಗ್ರೆಸ್ : 55-63
ಬಿಜೆಪಿ : 17-22
ಬಿಎಸ್ಪಿ : 3-4
ಇತರರು: 1-2
ಛತ್ತೀಸ್ಗಢದಲ್ಲಿರುವ ಒಟ್ಟು ವಿಧಾನಸಭಾ ಕ್ಷೇತ್ರಗಳು 90. ಸರ್ಕಾರ ರಚನೆಗೆ ಬೇಕಾಗಿರುವ ಬಹುಮತ 46.
ಅಂದರೆ ಈ ಚುನಾವಣಾ ಸಮೀಕ್ಷೆಯ ಪ್ರಕಾರ ಈ ಬಾರಿಯೂ ರಾಜ್ಯದಲ್ಲಿ ಪ್ರಚಂಡ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಅಂದಾಜಿಸಲಾಗಿದೆ.
ಮಧ್ಯಪ್ರದೇಶದಲ್ಲಿ ಯಾರು ಅಧಿಕಾರಕ್ಕೆ ಬರ್ತಾರೆ..? Madhyapradesh Assembly Election
ಮಧ್ಯಪ್ರದೇಶದಲ್ಲಿ 2018ರ ಚುನಾವಣೆಯಲ್ಲಿ ಬಿಜೆಪಿ ಸೋತಿತ್ತು, ಕಾಂಗ್ರೆಸ್ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಬಹುಮತ ಸಿಕ್ಕಿರಲಿಲ್ಲ. ಬಿಎಸ್ಪಿ ಮತ್ತು ಪಕ್ಷೇತರ ಶಾಸಕರ ಬೆಂಬಲದೊಂದಿಗೆ ಫಲಿತಾಂಶದ ಬೆನ್ನಲ್ಲೇ ಅಧಿಕಾರಕ್ಕೆ ಬಂದ ಕಮಲ್ನಾಥ್ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಲ್ಪಾವಧಿಗೆ ಪತನಗೊಂಡಿತು.
22 ಶಾಸಕರನ್ನು ಬಿಜೆಪಿ ಸೆಳೆಯುವ ಮೂಲಕ ಶಿವರಾಜ್ ಸಿಂಗ್ ಚವ್ಹಾಣ್ ಅವರ ನೇತೃತ್ವದಲ್ಲಿ ಬಿಜೆಪಿ ಮತ್ತೆ ಸರ್ಕಾರ ರಚನೆ ಮಾಡಿತು.
ಕಾಂಗ್ರೆಸ್ : 118-135
ಬಿಜೆಪಿ: 106-115
ಬಿಎಸ್ಪಿ: 2-3
ಇತರರು: 5-6
ಮಧ್ಯಪ್ರದೇಶ ವಿಧಾನಭೆಯಲ್ಲಿರುವ ಒಟ್ಟು ಸದಸ್ಯರ ಸಂಖ್ಯೆ 230. ಸರ್ಕಾರ ರಚನೆಗೆ ಬೇಕಿರುವ ಬಲಾಬಲ 116.
ಅಂದರೆ Small Box India ಸಮೀಕ್ಷೆಯ ಪ್ರಕಾರ ಈ ಬಾರಿ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ಗೆ ಪೂರ್ಣ ಮತ್ತು ಸ್ಪಷ್ಟಬಹುಮತ ಸಿಗಲಿದೆ.
ಬಿಜೆಪಿ 100ರ ಗಡಿ ದಾಟಲಿದೆಯಾದರೂ ಬಿಜೆಪಿಗೆ ಬಹುಮತ ಸಿಗಲ್ಲ. ಈ ಸಮೀಕ್ಷೆಯ ಪ್ರಕಾರ ಮಧ್ಯಪ್ರದೇಶದಲ್ಲಿ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ.
ಈ ಸುದ್ದಿಯನ್ನೂ ಓದಿ: ಈ ವರ್ಷದ ಮಧ್ಯದಲ್ಲಿ ಮೋದಿ ರಾಜೀನಾಮೆ ಕೊಡಬೇಕಾಗಬಹುದು – ಆ ಟ್ವೀಟ್ ಮಾಡಿದ್ದು ಯಾರು..?