BJPಯ ಭಗ್ನಪ್ರೇಮಿಗಳಿಗೆ ಪ್ರೇಮಿಗಳ ದಿನದಂದು ಮೊಟಕಿದ ಕಾಂಗ್ರೆಸ್​..!

ಇವತ್ತು ಫೆಬ್ರವರಿ 14. ಪ್ರೇಮಿಗಳ ದಿನ. ಪ್ರೇಮಿಗಳ ದಿನವನ್ನೇ ಮುಂದಿಟ್ಟುಕೊಂಡು ಕರ್ನಾಟಕದಲ್ಲಿ ಕಾಂಗ್ರೆಸ್​ ಆಡಳಿತದಲ್ಲಿರುವ ಬಿಜೆಪಿಗೆ ವ್ಯಂಗ್ಯಭರಿತವಾಗಿ ಚಾಟಿ ಬೀಸುವುದಕ್ಕೆ ಬಳಸಿಕೊಂಡಿದೆ.
ಬಿಜೆಪಿ ಸರ್ಕಾರದ ವಿರುದ್ಧ ಕೇಳಿಬಂದಿರುವ ಶೇಕಡಾ 40ರಷ್ಟು ಕಮಿಷನ್​ ಆರೋಪ, ಗುಂಡಿಬಿದ್ದ ರಸ್ತೆಗಳು, ಗೋವುಗಳ ರಕ್ಷಣೆಗೆ ಬಿಜೆಪಿ ವಿಫಲವಾಗಿರುವುದು, ಮಂಡ್ಯದಲ್ಲಿ ಬಿಜೆಪಿ ಉಸ್ತುವಾರಿ ಕಳೆದುಕೊಂಡ ಸಚಿವ ಅಶೋಕ್​, ಸಚಿವ ಸ್ಥಾನ ಸಿಗದೇ ಬೇಸರಿಸಿಕೊಂಡಿರುವ ಶಾಸಕ ರೇಣುಕಾಚಾರ್ಯ, ವಿಮಾನದಲ್ಲಿ ಎಕ್ಸಿಟ್​ ಬಾಗಿಲು ತೆರೆದು ವಿವಾದಕ್ಕೊಳಗಾದ ಸಂಸದ ತೇಜಸ್ವಿಸೂರ್ಯ, ಭ್ರಷ್ಟಾಚಾರ ಆರೋಪದಡಿ ಸಚಿವ ಸ್ಥಾನ ಕಳೆದುಕೊಂಡು ಕುಪಿತಗೊಂಡಿರುವ ಕೆ ಎಸ್​ ಈಶ್ವರಪ್ಪ ಬಗ್ಗೆ ಕಾಂಗ್ರೆಸ್​ ಸರಣಿ ಟ್ವೀಟ್​ಗಳನ್ನು ಪ್ರಕಟಿಸಿದೆ.

LEAVE A REPLY

Please enter your comment!
Please enter your name here