ಬಹುಭಾಷಾ ವಾಹಿನಿ ಬಿಬಿಸಿ (BBC) ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಕೈಗೊಂಡಿದೆ.
ಇವತ್ತು ಬೆಳಗ್ಗೆ 11.30ರ ವೇಳೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನವದೆಹಲಿ ಮತ್ತು ಮುಂಬೈನಲ್ಲಿರುವ ಬಿಬಿಸಿ ಕಚೇರಿಯಲ್ಲಿ ಶೋಧ ಕೈಗೊಂಡಿದ್ದಾರೆ.
ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ನಡೆದಿದ್ದ ಗುಜರಾತ್ ದಂಗೆಗಳು ಮತ್ತು ಮೋದಿ ಪ್ರಧಾನಿ ಆದ ಬಳಿಕ ಭಾರತದಲ್ಲಿ ನಡೆದಿರುವ ಕೋಮು ಸಂಘರ್ಷಗಳ ಬಗ್ಗೆ ಬಿಬಿಸಿ ಸರಣಿ ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡಿತ್ತು.
ಈ ಸಾಕ್ಷ್ಯಚಿತ್ರಗಳನ್ನು ಭಾರತದಲ್ಲಿ ಪ್ರಸಾರ ಮಾಡದಂತೆ ಮೋದಿ ಸರ್ಕಾರ ನಿಷೇಧ ಹೇರಿತ್ತು.
ಈ ಸಾಕ್ಷ್ಯ ಚಿತ್ರ ಪ್ರಸಾರವಾದ ಕೆಲವೇ ದಿನಗಳಲ್ಲಿ ಕೇಂದ್ರ ಸರ್ಕಾರದ ಆಧೀನದಲ್ಲಿರುವ ಆದಾಯ ತೆರಿಗೆ ಇಲಾಖೆ ಬಿಬಿಸಿ ಕಚೇರಿ ಮೇಲೆ ದಾಳಿ ನಡೆಸಿದೆ.
ADVERTISEMENT
ADVERTISEMENT