ADVERTISEMENT
ಕರ್ನಾಟಕ ವಿಧಾನಸಭೆಯಲ್ಲಿ ಈ ಬಾರಿ ನೇಕಾರ ಸಮುದಾಯದವರಿಗೆ ಬಿಜೆಪಿ ನಾಲ್ಕರಿಂದ ಐದು ಕ್ಷೇತ್ರಗಳಲ್ಲಿ ಟಿಕೆಟ್ ನೀಡುವ ಸಾಧ್ಯತೆ ಇದೆ.
ರಾಜ್ಯದಲ್ಲಿ ನೇಕಾರರ ಸಮುದಾಯದ ಜನಸಂಖ್ಯೆ 60 ಲಕ್ಷಕ್ಕಿಂತಲೂ ಅಧಿಕ. 30 ವಿಧಾನಸಭಾ ಕ್ಷೇತ್ರಗಳಲ್ಲಿ ನೇಕಾರರು ಪ್ರಮುಖ ಮತದಾರ ವರ್ಗದಲ್ಲಿ ಒಬ್ಬರು.
ಯಾರಿಗೆ ಸಿಗಬಹುದು..?
ನೇಕಾರ ಸಮುದಾಯದ ಯುವ ನಾಯಕ ದಯಾನಂದ್ ಜಿ ಎಸ್ ಅವರಿಗೆ ಈ ಬಾರಿ ಟಿಕೆಟ್ ಸಿಗುವ ಸಾಧ್ಯತೆ ಇದೆ.
ಬೆಂಗಳೂರು ನಗರದ ಗಾಂಧಿನಗರ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ಗಾಗಿ ಆಕಾಂಕ್ಷಿತರಾಗಿದ್ದು, ವರಿಷ್ಠರಿಗೂ ಮನವಿ ಸಲ್ಲಿಸಿದ್ದು, ಪಕ್ಷದ ಹೈಕಮಾಂಡ್ ಸಕಾರತ್ಮಾಕವಾಗಿ ಸ್ಪಂದಿಸಿದೆ ಎಂಬ ಮಾಹಿತಿ ಇದೆ.
ದಯಾನಂದ್ ಅವರು ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ನಿರ್ದೇಶಕರಾಗಿದ್ದು, ರಾಜ್ಯ ಬಿಜೆಪಿಯಲ್ಲಿ ನೇಕಾರ ಘಟಕದ ರಾಜ್ಯ ಸಮಿತಿ ಸದಸ್ಯರಾಗಿದ್ದಾರೆ.
ಇತ್ತ ಈರಣ್ಣ ಜಡಿ, ಮನೋಹರ್ ಶಿರೋಳ್, ಸೋಮಶೇಖರ್ ಸೇರಿದಂತೆ ಹಲವರು ಈ ಬಾರಿ ನೇಕಾರರ ಕೋಟಾದಡಿ ಬಿಜೆಪಿ ಟಿಕೆಟ್ ಆಕಾಂಕ್ಷಿತರು.
1983ರಲ್ಲಿ ಮಲ್ಲಿಕಾರ್ಜುನ ಬನ್ನಿ ಅವರು ನೇಕಾರರ ಸಮುದಾಯದ ಕೋಟಾದಡಿ ಟಿಕೆಟ್ ಪಡೆದು ಬಿಜೆಪಿ ಶಾಸಕರಾಗಿ ಆಯ್ಕೆ ಆಗಿದ್ದರು. ಇದಾದ ಬಳಿಕ ಬಿಜೆಪಿಯಲ್ಲಿ ನೇಕಾರ ಸಮುದಾಯದಿಂದ ಯಾರೂ ಕೂಡಾ ಶಾಸಕರಾಗಿಲ್ಲ.
2013ರ ಚುನಾವಣೆಯಲ್ಲಿ ನಟಿ ಉಮಾಶ್ರೀ ಕಾಂಗ್ರೆಸ್ನಿಂದ ತೇರದಾಳದಲ್ಲಿ ಸ್ಪರ್ಧಿಸಿ ಶಾಸಕಿಯಾಗಿದ್ದರು.
2009ರಲ್ಲಿ ಎಂ ಡಿ ಲಕ್ಷ್ಮೀನಾರಾಯಣ್ ಅವರಿಗೆ ತುರುವೇಕೆರೆಯಿಂದ ಬಿಜೆಪಿ ಟಿಕೆಟ್ ನೀಡಲಾಯಿತ್ತಾದರೂ ಅವರು ಸೋತರು. ಕಳೆದ ವರ್ಷವಷ್ಟೇ ಅವರು ಕಾಂಗ್ರೆಸ್ ಬಿಟ್ಟು ಮತ್ತೆ ವಾಪಸ್ ಬಿಜೆಪಿಗೆ ಬಂದಿದ್ದಾರೆ.
60 ಲಕ್ಷ ಜನಸಂಖ್ಯೆ ಇದ್ದರೂ ವಿಧಾನಸಭೆಯಲ್ಲಿ ನೇಕಾರ ಸಮುದಾಯದ ಶಾಸಕರು ಇಲ್ಲ. ಈ ಬಾರಿ ನೇಕಾರ ಸಮುದಾದಯವರಿಗೆ ಟಿಕೆಟ್ ಕೊಡಲೇಬೇಕು ಎನ್ನುವುದು ಸಮಾಜದ ಒತ್ತಾಯ.
ನೇಕಾರ ಸಮುದಾಯದ ಸ್ವಾಮೀಜಿಗಳು ಕೂಡಾ ಚುನಾವಣೆಯಲ್ಲಿ ತಮ್ಮ ಸಮುದಾಯದವರಿಗೆ ರಾಜಕೀಯ ಪ್ರಾತಿನಿಧ್ಯ ನೀಡುವಂತೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮೂರು ಪಕ್ಷಗಳಿಗೂ ಒತ್ತಾಯಿಸಿದ್ದಾರೆ.
ADVERTISEMENT