ADVERTISEMENT
ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಯಾರಿಗೆ ಗೆಲುವು..?
ಕಾರ್ಕಳ ವಿಧಾನಸಭಾ ಕ್ಷೇತ್ರ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ ಸುನಿಲ್ ಕುಮಾರ್ ಅವರು ಪ್ರತಿನಿಧಿಸ್ತಿರುವ ಕ್ಷೇತ್ರ.
2004ರಲ್ಲಿ ಮೊದಲ ಬಾರಿಗೆ ಸುನಿಲ್ ಕುಮಾರ್ ಅವರು ಕಾರ್ಕಳದಿಂದ ಶಾಸಕರಾಗಿ ಆಯ್ಕೆ ಆದರು. 2008ರಲ್ಲಿ ಸೋಲು ಕಂಡ ಸುನಿಲ್ ಅವರು 2013, 2018ರಲ್ಲಿ ಸತತವಾಗಿ ಗೆದ್ದು ಸಿಎಂ ಬೊಮ್ಮಾಯಿ ಸರ್ಕಾರದಲ್ಲಿ ಮಂತ್ರಿಯೂ ಆದರು.
ಕಾರ್ಕಳದಲ್ಲಿ ಯಾರು ಗೆಲ್ಲಬಹುದು..?
ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಯಾರು ಗೆಲ್ಲಬಹುದು ಎಂಬ ಬಗ್ಗೆ ಲೋಕ್ಪೋಲ್ ಚುನಾವಣಾ ಪೂರ್ವ ಸಮೀಕ್ಷೆಯನ್ನು ಕೈಗೊಂಡಿದೆ.
ಆ ಸಮೀಕ್ಷೆಯ ಪ್ರಕಾರ ಈ ಬಾರಿ ಕಾರ್ಕಳದಲ್ಲಿ ಕಾಂಗ್ರೆಸ್ ಗೆಲುವ ಸಾಧ್ಯತೆ ಶೇಕಡಾ 28ರಷ್ಟಿದೆ.
ಈ ಸಮೀಕ್ಷೆಯ ಪ್ರಕಾರ ಬಿಜೆಪಿ ಶಾಸಕ ಸುನಿಲ್ ಕುಮಾರ್ ಅವರು ಗೆಲುವ ಸಾಧ್ಯತೆ ಶೇಕಡಾ 68ರಷ್ಟಿದೆ.
ಉಳಿದವರು ಗೆಲ್ಲುವ ಸಾಧ್ಯತೆ ಈ ಕ್ಷೇತ್ರದಲ್ಲಿ ಶೇಕಡಾ 4ರಷ್ಟಿದೆ.
ಈ ಸಮೀಕ್ಷೆಯ ಪ್ರಕಾರ ಈ ಬಾರಿಯೂ ಕಾರ್ಕಳದಲ್ಲಿ ವಿ ಸುನಿಲ್ ಕುಮಾರ್ ಅವರೇ ಗೆಲ್ಲಲಿದ್ದಾರೆ.
ಈ ಬಾರಿ ಕಾರ್ಕಳದಲ್ಲಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಸ್ಪರ್ಧಿಸುತ್ತಿದ್ದಾರೆ. ಆದರೆ ಸಮೀಕ್ಷೆಯ ಪ್ರಕಾರ ವಿ ಸುನಿಲ್ ಕುಮಾರ್ ಅವರಿಗೆ ಹಿನ್ನಡೆ ಆಗುವ ಸಾಧ್ಯತೆ ಇಲ್ಲ.
ಕಾಂಗ್ರೆಸ್ ಇನ್ನೂ ಈ ಕ್ಷೇತ್ರಕ್ಕೆ ಅಧಿಕೃತವಾಗಿ ಅಭ್ಯರ್ಥಿಯನ್ನು ಅಂತಿಮಗೊಳಿಸಿಲ್ಲ.
ADVERTISEMENT