ನವೆಂಬರ್​ 11ರಿಂದ ಕರ್ನಾಟಕ-ತಮಿಳುನಾಡು ನಡುವೆ ವಂದೇ ಭಾರತ್​ ಎಕ್ಸ್​ಪ್ರೆಸ್​ ಓಡಾಟ ಶುರು – ಎಷ್ಟು ವೇಗ, ಎಷ್ಟು ಗಂಟೆಗೆ..?

Vande Bharat Express
Vande Bharat Express
ಮೈಸೂರು-ಬೆಂಗಳೂರು-ಚೆನ್ನೈ (Mysuru-Bengaluru-Chennai) ನಡುವೆ ನವೆಂಬರ್​ 11ರಿಂದ ಅರೆ ಅತೀ ವೇಗದ ರೈಲು (Semi High Speed Train) ವಂದೇ ಭಾರತ್​ ಎಕ್ಸ್​ಪ್ರೆಸ್​​ ರೈಲು ಓಡಾಟ ಆರಂಭಿಸಲಿದೆ. ಪೂರ್ವಭಾವಿಯಾಗಿ ಇವತ್ತು ವಂದೇ ಭಾರತ್​​ ಎಕ್ಸ್​​ಪ್ರೆಸ್​ ರೈಲಿನ ಪ್ರಾಯೋಗಿಕ ಸಂಚಾರ ನಡೆಸಲಾಗಿದೆ.
ನವೆಂಬರ್​ 11ರಂದು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ಬೆಂಗಳೂರಲ್ಲಿ ವಂದೇ ಭಾರತ್​ ಎಕ್ಸ್​​ಪ್ರೆಸ್​ ರೈಲಿನ ಸಂಚಾರಕ್ಕೆ ಚಾಲನೆ ನೀಡಲಿದ್ದಾರೆ.
ವಂದೇ ಭಾರತ್​ ಎಕ್ಸ್​ಪ್ರೆಸ್ (Vande Bharat Express)​ ಮತ್ತು ಶತಾಬ್ದಿ (Shatabdi Rail) ರೈಲು:
ಮೈಸೂರು-ಬೆಂಗಳೂರು-ಚೆನ್ನೈ ನಡುವೆ ಓಡುವ ರೈಲು ದಕ್ಷಿಣ ಭಾರತದಲ್ಲಿ ಸಂಚಾರ ಆರಂಭಿಸಲಿರುವ ಮೊದಲ ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲು. ಈ ರೈಲು 16 ಬೋಗಿಗಳನ್ನು ಹೊಂದಿದೆ.
ದಕ್ಷಿಣ ಭಾರತದಲ್ಲಿ ಸಂಚಾರ ಆರಂಭಿಸಲಿರುವ ಈ ವಂದೇ ಭಾರತ್​ ಎಕ್ಸ್​ಪ್ರೆಸ್​​ ರೈಲು ದೇಶದಲ್ಲಿ ಈಗಾಗಲೇ ಸಂಚಾರದಲ್ಲಿರುವ ನಾಲ್ಕು ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲುಗಳ ವೇಗಕ್ಕೆ ಹೋಲಿಸಿದರೆ ನಿಧಾನವಾಗಿ ಸಂಚರಿಸಲಿದೆ.
ವಂದೇ ಭಾರತ್​ ಎಕ್ಸ್​ಪ್ರೆಸ್​​ ರೈಲು ಗಂಟೆಗೆ ಗರಿಷ್ಠ 160-180 ಕಿಲೋ ಮೀಟರ್​ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆಯಾದರೂ ಇದು ಸಂಚರಿಸುವ ವೇಗ ಗಂಟೆಗೆ 75ರಿಂದ 77 ಕಿಲೋ ಮೀಟರ್​.
ಶತಾಬ್ದಿ ಎಕ್ಸ್​ಪ್ರೆಸ್​​ ರೈಲಿಗೆ ಹೋಲಿಸಿದರೆ ವಂದೇ ಭಾರತ್ ಎಕ್ಸ್​​ಪ್ರೆಸ್​ ರೈಲು ಕೆಲವೇ ನಿಮಿಷ ಮೊದಲು ಸಂಚರಿಸಲಿದೆ.
ಚೆನ್ನೈನಿಂದ ಬೆಂಗಳೂರು ಮೂಲಕ ಮೈಸೂರಿಗೆ ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲು ಸಂಚಾರದ ಅವಧಿ: 6 ಗಂಟೆ 40 ನಿಮಿಷ, ಸರಾಸರಿ ವೇಗ: ಗಂಟೆಗೆ 75.60 ಕಿಮೀ.
ಮೈಸೂರಿನಿಂದ ಬೆಂಗಳೂರು ಮೂಲಕ ಚೆನ್ನೈಗೆ ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲು ಸಂಚಾರದ ಅವಧಿ: 7 ಗಂಟೆ 45 ನಿಮಿಷ. ಸರಾಸರಿ ವೇಗ: ಗಂಟೆಗೆ 75.60 ಕಿಮೀ.
ಶತಾಬ್ದಿ ಎಕ್ಸ್​ಪ್ರೆಸ್​ ರೈಲು: ಮೈಸೂರು-ಬೆಂಗಳೂರು-ಚೆನ್ನೈ: ಸರಾಸರಿ ವೇಗ: 69.15 ಕಿಮೀ. ಅವಧಿ: 7 ಗಂಟೆ 15 ನಿಮಿಷ.
ಶತಾಬ್ದಿ ಎಕ್ಸ್​ಪ್ರೆಸ್​ ರೈಲು: ಚೆನ್ನೈ-ಬೆಂಗಳೂರು-ಮೈಸೂರು: ಸಂಚಾರದ ಅವಧಿ: 7 ಗಂಟೆ. ಸರಾಸರಿ ವೇಗ: 72.04 ಕಿಮೀ.
ಬೆಂಗಳೂರಲ್ಲಿ ಎಲ್ಲಿ ನಿಲ್ಲುತ್ತೆ..?:
ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ (ಕೆಎಸ್​ಆರ್​ ಬೆಂಗಳೂರು)ದ ಪ್ಲ್ಯಾಟ್​ ಫಾರಂ ಸಂಖ್ಯೆ 7ರಿಂದ ಈ ರೈಲು ನಿರ್ಗಮಿಸಲಿದೆ.
ಈಗಾಗಲೇ ಸಂಚರಿಸುತ್ತಿರುವ 4 ವಂದೇ ಭಾರತ್​ ರೈಲುಗಳು:
1. ನವದೆಹಲಿ-ವಾರಾಣಸಿ ನಡುವೆ
2. ನವದೆಹಲಿ -ಕತ್ರಾ ನಡುವೆ
3. ಅಹಮದಾಬಾದ್​ – ಮುಂಬೈ
4. ನವದೆಹಲಿ – ಅಂಬ್​ ಅಂದೌರ