KGF ಸಿನಿಮಾದ ಹಾಡು, ಮ್ಯೂಸಿಕ್​ ಕೃತಿಚೌರ್ಯ – ಕಾಂಗ್ರೆಸ್​, ಭಾರತ್​ ಜೋಡೋ ಟ್ವಿಟ್ಟರ್​ ಖಾತೆ ಬ್ಲಾಕ್​ಗೆ ಕೋರ್ಟ್​ ಆದೇಶ

KGF
KGF
ಕೆಜಿಎಫ್ (KGF)​ ಸಿನಿಮಾದ ಹಾಡಿನ ಬಳಸಿ ಕೃತಿಚೌರ್ಯ ಮಾಡಿದ್ದಾರೆ ಎಂಬ ಆರೋಪದಡಿ ಕಾಂಗ್ರೆಸ್ (Indian National Congress)​​ ಮತ್ತು ಭಾರತ್​ ಜೋಡೋ (Bharat Jodo Yatra) ಅಧಿಕೃತ ಟ್ವಿಟ್ಟರ್​ ಖಾತೆಗಳನ್ನು ನಿರ್ಬಂಧಿಸುವಂತೆ ಬೆಂಗಳೂರಿನ ನ್ಯಾಯಾಲಯ ಆದೇಶಿಸಿದೆ.
ಕೆಜಿಎಫ್​ ಸಿನಿಮಾದ ಹಾಡು ಬಳಸಿ ಟ್ವಿಟ್ಟರ್​ ಖಾತೆಯಲ್ಲಿ ಹಂಚಿಕೊಳ್ಳಲಾಗಿರುವ ಮೂರು ವೀಡಿಯೋಗಳನ್ನು ತೆಗೆದು ಹಾಕುವಂತೆ ಸೂಚಿಸಿದೆ.
ಜೊತೆಗೆ ಮುಂದಿನ ವಿಚಾರಣೆ ನಡೆಯುವರೆಗೂ ಕಾಂಗ್ರೆಸ್​ ಮತ್ತು ಭಾರತ್​ ಜೋಡೋ ಅಧಿಕೃತ ಖಾತೆಗಳನ್ನು ನಿರ್ಬಂಧಿಸುವಂತೆ ಸೂಚಿಸಿದೆ.
ಬೆಂಗಳೂರಿನ ಹೆಚ್ಚುವರಿ ಸಿಟಿ  ಸಿವಿಲ್​ ನ್ಯಾಯಾಧೀಶೆ ಲತಾಕುಮಾರಿ ಅವರು ಆದೇಶಿಸಿದ್ದಾರೆ. ಮುಂದಿನ ವಿಚಾರಣೆಯನ್ನು ನವೆಂಬರ್​ 21ಕ್ಕೆ ಮುಂದೂಡಲಾಗಿದೆ.
ಎಂಆರ್​ಟಿ ಮ್ಯೂಸಿಕ್​ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ (Rahul Gandhi), ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC)​, ಸುಪ್ರಿಯಾ ಶ್ರೀನಾಟೆ (Supriya Shrinate) ವಿರುದ್ಧ ಎಂಆರ್​ಟಿ ಮ್ಯೂಸಿಕ್​ (MRT Music) ಕೃತಿ ಚೌರ್ಯದ ದೂರು ನೀಡಿತ್ತು.
ಏನಿದು ಕೃತಿಚೌರ್ಯ ಆರೋಪ:
ಭಾರತ್​ ಜೋಡೋ ಯಾತ್ರೆಯ ವೀಡಿಯೋಗಳಿಗೆ ಕೆಜಿಎಫ್​ ಸಿನಿಮಾದ ಮ್ಯೂಸಿಕ್​ ಮತ್ತು ಹಾಡನ್ನು ಬಳಸಿ ವೀಡಿಯೋಗಳನ್ನು ಟ್ವಿಟ್ಟರ್​ ಖಾತೆಗಳಲ್ಲಿ ಕಾಂಗ್ರೆಸ್​ ಹಂಚಿಕೊಂಡಿತ್ತು.
ಬೆಂಗಳೂರಿನ ವಾಣಿಜ್ಯ ನ್ಯಾಯಾಲಯದ ಕಂಪ್ಯೂಟರ್​ ವಿಭಾಗದ ಜಿಲ್ಲಾ ಸಿಸ್ಟಂ ಆಡಳಿತಾಧಿಕಾರಿ ಎಸ್​​ ಎನ್​ ವೆಂಕಟೇಶಮೂರ್ತಿ ಅವರನ್ನು ಲೋಕಲ್​ ಕಮಿಷನರ್​​ ಆಗಿ ನೇಮಿಸಿರುವ ಕೋರ್ಟ್​​ ಪ್ರತಿವಾದಿಗಳ ವೆಬ್​ಸೈಟ್​​ ಪರಿಶೀಲಿಸಿ ಎಲೆಕ್ಟ್ರಾನಿಕ್​ ಆಡಿಟ್​ ಕೈಗೊಳ್ಳುವಂತೆ ಹೆಚ್ಚುವರಿ ಸಿಟಿ ಸಿವಿಲ್​ ಕೋರ್ಟ್​ ಸೂಚಿಸಿದೆ.