BJP: ಉತ್ತರಪ್ರದೇಶದಲ್ಲಿ ಗುಂಡಿಕ್ಕಿ BJP ಮುಖಂಡನ ಹತ್ಯೆ

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ನೇತೃತ್ವದ ಬಿಜೆಪಿ ಸರ್ಕಾರವಿರುವ ಉತ್ತರಪ್ರದೇಶದಲ್ಲಿ ಹಾಡಹಗಲೇ ಬಿಜೆಪಿ ಮುಖಂಡನ್ನು ಶೂಟೌಟ್​ ಮಾಡಿ ಹತ್ಯೆ ಮಾಡಲಾಗಿದೆ.

ಮೊರದಾಬಾದ್​ನ ಪಕ್ವಾಡಾ ಬಿಜೆಪಿ ಮುಖಂಡ 34 ವರ್ಷದ ಸಂಭಲ್​ ಅಂಜು ಚೌಧರಿ ಅವರನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದೆ.

ಸಂಜೆ 6 ಗಂಟೆ ವೇಳೆಗೆ ತಮ್ಮ ಸಹೋದರ ಪುನಿತ್​ ಜೊತೆಗೆ ತಮ್ಮ ಅಪಾರ್ಟ್​ಮೆಂಟ್​ನ ಹೊರಗೆ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್​ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಶೂಟೌಟ್​ ಮಾಡಿ ಚೌಧರಿ ಅವರನ್ನು ಕೊಲೆ ಮಾಡಿದ್ದಾರೆ.

ತಕ್ಷಣವೇ ಚೌಧರಿ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತ್ತಾದರೂ ಬದುಕುಳಿಯಲಿಲ್ಲ. 

ಇತ್ತೀಚೆಗೆ ಬ್ಲಾಕ್​ ಮುಖ್ಯಸ್ಥನ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿ 17 ಮತಗಳಿಂದ ಸೋತಿದ್ದರು. ಚೌಧರಿ ಕುಟುಂಬಸ್ಥರು ಅಮಿತ್​ ಚೌಧರಿ ಮತ್ತು ಅನಿಕೇತ್​ ಮತ್ತು ಇತರರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

LEAVE A REPLY

Please enter your comment!
Please enter your name here